ಬೆಂಗಳೂರು: ಯುವತಿಯೊಬ್ಬಳ ಜೊತೆ ಲೈಂಗಿಕ ಸಂಪರ್ಕ ಬೆಳೆಸುವ ಉದ್ದೇಶದಿಂದ ಆಕೆಯ ಖಾಸಗಿ ಕೋಣೆಯಲ್ಲಿ ಮೊಬೈಲ್ ಚಾರ್ಜರ್‌ನಲ್ಲಿ ರಹಸ್ಯ ಕ್ಯಾಮರಾ ಇಟ್ಟು, ಅಶ್ಲೀಲ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಮಹೇಶ್ (30) ಎಂಬಾತನೇ ಬಂಧಿತ. ಈ ಬಂಧಿತನಿಂದ ರಹಸ್ಯ ಕ್ಯಾಮರಾ ಅಳವಡಿಸಿದ್ದ ಮೊಬೈಲ್ ಚಾರ್ಜರ್, ಲ್ಯಾಪ್‌ಟಾಪ್, 2 ಮೆಮೊರಿ ಕಾರ್ಡ್, ಪೆನ್‌ಡ್ರೈವ್ ಹಾಗೂ 2 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದೂರುದಾರ ಸಂತ್ರಸ್ತೆಯ ಪರಿಚಯಸ್ಥನಾಗಿದ್ದು, ಆಕೆಯ ಮನೆಗೆ ಬಂದಾಗ ರಹಸ್ಯ ಕ್ಯಾಮರಾ ಇಟ್ಟು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್ ಚಾರ್ಜರ್‌ನಲ್ಲಿ ಕ್ಯಾಮರಾ:ಆರೋಪಿ ಮಹೇಶ್ಗೆ ಸಂತ್ರಸ್ತೆಯು ದೂರದ ಸಂಬಂಧಿ ಹಾಗೂ ಪರಿಚಯಸ್ಥನಾಗಿದ್ದು, ಆ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಅಪೇಕ್ಷಿಸಿದ್ದ. ಹೀಗಾಗಿ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ಯುವತಿಯ ಮನೆಗೆ ಹೋಗಿದ್ದಾಗ ಅವರ ಬೆಡ್‌ರೂಮ್‌ನಲ್ಲಿ ಮೊಬೈಲ್ ಚಾರ್ಜರ್‌ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದ. ಇದರಲ್ಲಿ ಯುವತಿಯ ಖಾಸಗಿ ದೃಶ್ಯಗಳು ಸೆರೆಯಾಗಿವೆ. ಅದನ್ನು ಆರೋಪಿ ಸಂಗ್ರಹಿಸಿ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.