ಬೆಂಗಳೂರು: ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ನಳೀನ್ ಕುಮಾರ್ ಕಟೀಲ್ ಮೊದಲ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.
ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಮೊದಲ ರಾಜ್ಯ ಪ್ರವಾಸಕ್ಕೆ ಡೇಟ್ ಫಿಕ್ಸ್ - BJP's new President
ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ನಳೀನ್ ಕುಮಾರ್ ಕಟೀಲ್ ಮೊದಲ ರಾಜ್ಯ ಪ್ರವಾಸಕ್ಕೆ ದಿನಾಂಕ ನಿಗಧಿಯಾಗಿದ್ದು, ಸೆಪ್ಟೆಂಬರ್ 9 ಮತ್ತು10 ರಂದು ಮೊದಲ ರಾಜ್ಯ ಪ್ರವಾಸ ಮಾಡಲಿದ್ದಾರೆ.

ನಳೀನ್ ಕುಮಾರ್ ಕಟೀಲ್ ಮೊದಲ ರಾಜ್ಯ ಪ್ರವಾಸಕ್ಕೆ ದಿನಾಂಕ ನಿಗಧಿ
ನಳೀನ್ ಕುಮಾರ್ ಕಟೀಲ್ ಮೊದಲ ರಾಜ್ಯ ಪ್ರವಾಸಕ್ಕೆ ದಿನಾಂಕ ನಿಗಧಿ
ಹೌದು, ಸೆಪ್ಟೆಂಬರ್ 9 ಮತ್ತು10 ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧಿಕೃತವಾಗಿ ತಮ್ಮ ಮೊದಲ ರಾಜ್ಯ ಪ್ರವಾಸ ಮಾಡುತ್ತಿದ್ದು, ರಾಜ್ಯಾಧ್ಯಕ್ಷರ ಜೊತೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ ಕೂಡ ರಾಜ್ಯ ಪ್ರವಾಸಕ್ಕೆ ತೆರಳಲಿದ್ದಾರೆ.
ಇನ್ನು ಒಬ್ಬೊಬ್ಬ ಪ್ರಧಾನ ಕಾರ್ಯದರ್ಶಿಗಳು ಐದು ಜಿಲ್ಲೆಗಳಂತೆ ಪ್ರವಾಸ ನಡೆಸಲಿದ್ದು, ಪಕ್ಷದ ಸಂಘಟನಾತ್ಮಕ ಚಟುವಟಿಕೆ, ಸದಸ್ಯತಾ ಅಭಿಯಾನ, ಸಕ್ರೀಯ ಸದಸ್ಯತ್ವದ ಅಂಶಗಳನ್ನು ಇಟ್ಟುಕೊಂಡು ಪ್ರವಾಸ ನಡೆಸಲಿದ್ದಾರೆ.