ಆನೇಕಲ್(ಬೆಂಗಳೂರು) :ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷನ ಫೇಸ್ಬುಕ್ ಹಾಗೂ ಜಿಮೇಲ್ ಅಕೌಂಟ್ ಹ್ಯಾಕ್ ಮಾಡಿ, ಹಣದ ಬೇಡಿಕೆ ಇಟ್ಟಿರುವ ಘಟನೆ ತಾಲೂಕಿನ ಬಳ್ಳೂರಿನಲ್ಲಿ ನಡೆದಿದೆ.
ಫೇಸ್ಬುಕ್,ಜಿಮೇಲ್ ಅಕೌಂಟ್ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಸೈಬರ್ ಕಳ್ಳರು.. ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಳ್ಳೂರು ವಸಂತರೆಡ್ಡಿ ಅವರ ಅಕೌಂಟ್ ಹ್ಯಾಕ್ ಮಾಡಿರುವ ಸೈಬರ್ ಕಳ್ಳರು, ಕಳೆದ ಮೂರು ದಿನಗಳಿಂದ ಬ್ಯಾಂಕಿನ ಅಕೌಂಟ್ ನಂಬರ್ ನೀಡುವಂತೆ ಕೇಳುತ್ತಿದ್ದಾರೆ. ನಿಮ್ಮ ಫೇಸ್ಬುಕ್ ಖಾತೆಗೆ ವೈರಸ್ ತಗುಲಿದ್ದು,ಅದನ್ನು ಸರಿಪಡಿಸಲು 30 ಸಾವಿರ ನೀಡಬೇಕು. ಆದರೆ, ನೀವು ವಿಐಪಿ ಜನಪ್ರತಿನಿಧಿ ಆಗಿರುವುದರಿಂದ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ನೀಡಿದರೆ ಉಚಿತವಾಗಿ ಖಾತೆಯನ್ನು ಸರಿ ಮಾಡಲಾಗುತ್ತದೆ ಎಂದು ಮೆಸೇಜ್ ಮೂಲಕ ಹ್ಯಾಕರ್ ತಿಳಿಸಿದ್ದಾರೆ.
ಫೇಸ್ಬುಕ್,ಜಿಮೇಲ್ ಅಕೌಂಟ್ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಸೈಬರ್ ಕಳ್ಳರು..! ಎರಡು ದಿನದ ಹಿಂದೆ ಫೇಸ್ಬುಕ್ ಹಾಗೂ ಜಿಮೇಲ್ ಅಕೌಂಟ್ ಹ್ಯಾಕ್ ಮಾಡಲಾಗಿತ್ತು. ಈ ಎರಡು ಅಕೌಂಟ್ಗಳನ್ನ ನಿನ್ನೆಯಿಂದ ಲಾಕ್ ಮಾಡಿ ಪದೇಪದೆ ಬ್ಯಾಂಕ್ ಖಾತೆಯ ನಂಬರ್ ನೀಡುವಂತೆ ಮೆಸೇಜ್ ಮಾಡಲಾಗುತ್ತಿತ್ತು. ಅಕೌಂಟ್ ನಂಬರ್ ಯಾಕೆ ಎಂದು ಕೇಳಿದ್ದಕ್ಕೆ ಅದೆಲ್ಲವನ್ನೂ ಕೇಳಬೇಡ ಎಂದು ಮೆಸೇಜ್ ಮಾಡುತ್ತಿದ್ದ ಹ್ಯಾಕರ್, ಹೆಚ್ಚು ಪ್ರಶ್ನೆಯನ್ನ ಕೇಳಬಾರದು ಎಂದು ಉತ್ತರಿಸುತ್ತಿದ್ದ.
+1(916)665-4174 ಸೈಬರ್ ಸೆಲ್ ಇಂಡಿಯಾ ಎಂಬ ನಂಬರ್ನಿಂದ ನಿರಂತರವಾಗಿ ಮೆಸೇಜ್ ಬರುತ್ತಿದ್ದರಿಂದ ಖಾತೆಗೆ ಕನ್ನ ಹಾಕುತ್ತಾರೆ ಎನ್ನುವ ಭಯದಿಂದ ವಸಂತರೆಡ್ಡಿ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು, ಸೈಬರ್ ಕ್ರೈಮ್ ಬ್ಯುರೋ ಮೂಲಕ ತನಿಖೆ ಮುಂದುವರಿಸಿದ್ದಾರೆ.