ಕರ್ನಾಟಕ

karnataka

ETV Bharat / city

ಪರಿಷತ್​ನಲ್ಲಿ ಮತಾಂತರ ನಿಷೇಧ ಬಿಲ್ ಅಂಗೀಕಾರಕ್ಕೆ 1 ಸ್ಥಾನ ಕೊರತೆ: ಲಖನ್ ಬೆಂಬಲ ಪಡೆಯುತ್ತಾ ಬಿಜೆಪಿ? - ಪರಿಷತ್​ನಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕಾರ

75 ಸದಸ್ಯ ಬಲದ ವಿಧಾನ ಪರಿಷತ್​​ನಲ್ಲಿ 37 ಬಿಜೆಪಿ, 26 ಕಾಂಗ್ರೆಸ್ ಹಾಗೂ ಜೆಡಿಎಸ್ 10 ಸಂಖ್ಯಾ ಬಲ ಹೊಂದಿದೆ. ಸರಳ ಬಹುಮತಕ್ಕೆ ಬಿಜೆಪಿಗೆ ಒಂದು ಸ್ಥಾನದ ಕೊರತೆ ಇರುವುದರಿಂದ ಮೇಲ್ಮನೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರಕ್ಕಾಗಿ ಲಖನ್ ಜಾರಕಿಹೊಳಿಯ ಬೆಂಬಲ ಪಡೆಯಲು ನಿರ್ಧರಿಸಲಾಗಿದೆ.

ಲಖನ್ ಜಾರಕಿಹೊಳಿ
ಲಖನ್ ಜಾರಕಿಹೊಳಿ

By

Published : Feb 15, 2022, 8:15 AM IST

ಬೆಂಗಳೂರು: ಮತಾಂತರ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಮಂಡನೆಯಾಗುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪರಿಷತ್ ಸದಸ್ಯರ ಸಭೆ ನಡೆಸಿ ಚರ್ಚಿಸಲಾಯಿತು.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ಹಾಗೂ ಸಭಾ ನಾಯಕ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಬಗ್ಗೆ ಚರ್ಚಿಸಲಾಯಿತು. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ವಿಧೇಯಕವನ್ನು ಮೇಲ್ಮನೆಯಲ್ಲಿ ಪಾಸ್ ಮಾಡುವ ಕಾರ್ಯನೀತಿ ಬಗ್ಗೆ ಈ ಸಂದರ್ಭದಲ್ಲಿ ಮಾತುಕತೆ ನಡೆಯಿತು.


ಪರಿಷತ್​​ನಲ್ಲಿ ಬಹುಮತಕ್ಕೆ ಬಿಜೆಪಿಗೆ ಒಂದು ಸ್ಥಾನದ ಕೊರತೆ ಇದೆ. ಹೀಗಾಗಿ ವಿಧೇಯಕ ಅಂಗೀಕಾರಕ್ಕೆ ಸರಳ ಬಹುಮತ ಇಲ್ಲದೇ ಇರುವ ಕಾರಣ ಪಕ್ಷೇತರ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲ ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಸದ್ಯ 75 ಸದಸ್ಯ ಬಲದ ಪರಿಷತ್​​ನಲ್ಲಿ 37 ಬಿಜೆಪಿ, 26 ಕಾಂಗ್ರೆಸ್ ಹಾಗೂ ಜೆಡಿಎಸ್ 10 ಸಂಖ್ಯಾ ಬಲ ಹೊಂದಿದೆ. ಸರಳ ಬಹುಮತಕ್ಕೆ ಬಿಜೆಪಿಗೆ ಒಂದು ಸ್ಥಾನದ ಕೊರತೆ ಇರುವುದರಿಂದ ಮೇಲ್ಮನೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರಕ್ಕಾಗಿ ಲಖನ್ ಜಾರಕಿಹೊಳಿಯ ಬೆಂಬಲ ಪಡೆಯಲು ನಿರ್ಧರಿಸಲಾಗಿದೆ.

ಈ ನಿಟ್ಟಿನಲ್ಲಿ ಲಖನ್ ಜಾರಕಿಹೊಳಿಯನ್ನು ವಿಧೇಯಕ ಪರ ಮತ ಹಾಕಲು ಮನವೊಲಿಸಲು ನಿರ್ಧರಿಸಲಾಗಿದೆ. ಈ ಮಧ್ಯೆ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಜತೆಗೂಡಿ ಸಂಜೆ ಶಕ್ತಿ ಭವನದಲ್ಲಿ ಸಿಎಂ ಬೊಮ್ಮಾಯಿರನ್ನು ಭೇಟಿಯಾಗಿದ್ದು, ಕುತೂಹಲ ಕೆರಳಿಸಿದೆ.

ಮೇಲ್ಮನೆ ಬಿಜೆಪಿ ಸದಸ್ಯರ ಸಭೆಯಲ್ಲಿ ಪರಿಷತ್ ಉಪಸಭಾಪತಿ ಹಾಗೂ ಮುಖ್ಯ ಸಚೇತಕ ಆಯ್ಕೆ ಸಂಬಂಧವೂ ಚರ್ಚೆ ನಡೆಸಲಾಯಿತು. ಆದರೆ, ಕೊನೆಗೆ ಆಯ್ಕೆ ಹೊಣೆಯನ್ನು ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​​ಗೆ ನೀಡಲಾಗಿದೆ.

ಇದನ್ನೂ ಓದಿ: 'ಅಂತಾರಾಜ್ಯ ಮಹಿಳಾ ವಂಚಕ'ನ ಬಂಧನ: 7 ರಾಜ್ಯಗಳಲ್ಲಿ 14 ಮಹಿಳೆಯರೊಂದಿಗೆ ವಿವಾಹ

ABOUT THE AUTHOR

...view details