ಕರ್ನಾಟಕ

karnataka

ETV Bharat / city

ಕಾಂಗ್ರೆಸ್ ನಾಯಕರೆಲ್ಲ ಸೇರಿ ಹುಬ್ಬಳ್ಳಿ ರೀತಿಯ ಹತ್ತಾರು ಘಟನೆಗೆ ಸಂಚು ರೂಪಿಸುತ್ತಿದ್ದಾರೆಯೇ?: ಬಿಜೆಪಿ - ಡಿ.ಕೆ ಶಿವಕುಮಾರ್​

ಬಿಜೆಪಿ ಸರಣಿ ಟ್ವೀಟ್​ ಮಾಡುವ ಮೂಲಕ ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಪೂರ್ವ ನಿಯೋಜಿತವಾಗಿ ಮಾಡಿದ್ದೇ ಎಂದು ಪ್ರಶ್ನಿಸಿದೆ. ಅಲ್ಲದೇ ಶಾಸಕ ವೆಂಕಟರಮಣಪ್ಪ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡುವ ವಿಡಿಯೋ ಹಾಕಿ ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಟೀಕಿಸಿದೆ..

bjp twitterbjp twitter
ಕಾಂಗ್ರೆಸ್ ನಾಯಕರೆಲ್ಲ ಸೇರಿ ಹುಬ್ಬಳ್ಳಿ ರೀತಿಯ ಹತ್ತಾರು ಘಟನೆಗೆ ಸಂಚು ರೂಪಿಸುತ್ತಿದ್ದಾರೆಯೇ?: ಬಿಜೆಪಿ ಟೀಕೆ

By

Published : Apr 20, 2022, 7:19 PM IST

ಬೆಂಗಳೂರು : ಹಿಂದೂ ವಿರೋಧಿ ಮೀರ್‌ಸಾಧಿಕ್​ಗೆ ವಿಪಕ್ಷ ನಾಯಕನ ಪಟ್ಟ. ಕೆಪಿಸಿಸಿ ಭ್ರಷ್ಟಾಧ್ಯಕ್ಷರಿಂದ ಅಲ್ಪಮತೀಯ ಕೋಮು ಕ್ರಿಮಿಗಳಿಗೆ ಅಮಾಯಕರ ಪಟ್ಟ. ಧರ್ಮ ವಿಭಜಕನಿಗೆ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟ. ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ಹುಬ್ಬಳ್ಳಿಯಂಥ ಹತ್ತಾರು ಘಟನೆಗೆ ಸಂಚು ರೂಪಿಸುತ್ತಿದ್ದಾರೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಹಿಜಾಬ್ ವಿವಾದ & ಹುಬ್ಬಳ್ಳಿ ಕೋಮುಗಲಭೆಗೆ ಸಾಮ್ಯತೆ ಇದೆ. ಎರಡು ಕೂಡ ಕಾಂಗ್ರೆಸ್ ಪ್ರೇರಿತ ಮತಕ್ರೋಢೀಕರಣದ ತಂತ್ರ. ಹಿಜಾಬ್ ಪ್ರಕರಣದಲ್ಲಿ ತನ್ನ ಕಾನೂನು ಘಟಕದ ಅಧ್ಯಕ್ಷರನ್ನೇ ವಾದ ಮಾಡಲು ನಿಯೋಜಿಸಿತು. ಹುಬ್ಬಳ್ಳಿ ಗಲಭೆಯ ಮತಾಂಧ ಆರೋಪಿಗಳ ಪರವಾಗಿ ಕೆಪಿಸಿಸಿಯಿಂದಲೇ ವಕೀಲರನ್ನು ನಿಯೋಜಿಸುತ್ತೀರಾ? ಎಂದು ಸರಣಿ ಟ್ವೇಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷವೇ ಹುಬ್ಬಳ್ಳಿ ಗಲಭೆಯ ರೂವಾರಿ. ಹುಬ್ಬಳ್ಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತನ್ನ ಕಾರಿನಲ್ಲಿ ಕೋಮು ಪ್ರಚೋದನೆಗೆ ಕಾರಣನಾದ ಮೌಲ್ವಿಯನ್ನು ಜೋಪಾನವಾಗಿ ಕರೆದೊಯ್ದಿದ್ದರು. ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ನಡೆಸಿದ ಪೂರ್ವನಿಯೋಜಿತ ಸಂಚು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ.

ಕರ್ನಾಟಕದ ಮೀರ್‌ಸಾಧಿಕ್ ಸಿದ್ದರಾಮಯ್ಯ ಅವರೇ, ರಾಜ್ಯದಲ್ಲಿ ಒಂದರ ಮೇಲೊಂದರಂತೆ ನಡೆಯುತ್ತಿರುವ ಕೋಮು ಪ್ರಚೋದನಾ ಚಟುವಟಿಕೆಗಳ ಹಿಂದಿರುವುದು ನಿಮ್ಮ ಕುಚೇಷ್ಠೆಯೋ ಅಥವಾ ಕೆಪಿಸಿಸಿಯ ಭ್ರಷ್ಟಾಧ್ಯಕ್ಷನ ಕೈವಾಡವೋ? ಸಮಾಜದಲ್ಲಿ ಶಾಂತಿ-ಸುಭಿಕ್ಷೆ ನೆಲೆಸುವುದು ಕಾಂಗ್ರೆಸ್ ನಾಯಕರಿಗೆ ಬೇಕಿಲ್ಲವೇ? ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಹುಬ್ಬಳ್ಳಿ ಘಟನೆಯ ದುರುಳರನ್ನು ಮೀರ್‌ಸಾಧಿಕ್ ಸಿದ್ದರಾಮಯ್ಯ ಅವರು ಅಮಾಯಕರು ಎಂದು ಶರಾ ಬರೆದಿದ್ದಾರೆ. ಶಿರಚ್ಛೇದ ಮಾಡುತ್ತೇವೆ ಎಂದು ಕೇಕೆ ಹಾಕಿದವರು ಅಮಾಯಕರೇ? ತಲೆ ಕತ್ತರಿಸಲು ಮುಂದಾಗಿರುವವರಿಗೆ ಕೆಪಿಸಿಸಿ ಕಾನೂನು ಘಟಕ ನೆರವು ನೀಡುತ್ತದೆಯೇ ಅಥವಾ ಖುದ್ದು ಸಿದ್ದರಾಮಯ್ಯ ವಾದ ಮಾಡುತ್ತಾರೋ? ಹಿಂದೂ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸುವ ಮೂಲಕ ಕಾಂಗ್ರೆಸ್ ಹುಬ್ಬಳ್ಳಿ ಘಟನೆಯನ್ನು ಮುಚ್ಚಿ ಹಾಕುವುದಕ್ಕೆ ಸಂಚು ರೂಪಿಸಿದೆ. ಅಧಿಕಾರದಲ್ಲಿ ಇದ್ದಾಗ ಹಿಂದೂ ಧರ್ಮ ವಿಭಜನೆಗೆ ಆಗ್ರಹಿಸಿದ ವ್ಯಕ್ತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಳೆ ವಿಚಾರದ ಪ್ರಚಾರಕ್ಕೆ ಹೊರಟಿದ್ದಾರೆ ಎಂದು ಟೀಕಿಸಿದೆ.

ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂದು ಕರೆಂಟ್ ಕೇಳಿದ ನಾಗರಿಕನಿಗೆ ಜೈಲು ಭಾಗ್ಯ, ಇಂದು ನೀರು ಕೇಳಿದವನಿಗೆ ಕಪಾಳ ಮೋಕ್ಷದ ಭಾಗ್ಯ. ಕೊತ್ವಾಲನ ಶಿಷ್ಯನೇ ಕೆಪಿಸಿಸಿಯ ಅಧ್ಯಕ್ಷನಾಗಿರುವಾಗ ಸೌಜನ್ಯತೆ ಎಂಬ ಪದಕ್ಕೆ ಅರ್ಥ ಇರಲು ಹೇಗೆ ಸಾಧ್ಯ? ಎಂದು ಶಾಸಕ ವೆಂಕಟರಮಣಪ್ಪ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡುವ ವಿಡಿಯೋ ಪ್ರಕಟಿಸಿ ವ್ಯಂಗ್ಯವಾಡಿದೆ.

ಇದನ್ನೂ ಓದಿ:ಮೈಸೂರು: ಬ್ಯಾರಿಕೇಡ್ ತಳ್ಳಿ ಪೊಲೀಸರಿಗೆ ಅವಾಜ್ ಹಾಕಿದ ಸಿದ್ದರಾಮಯ್ಯ

ABOUT THE AUTHOR

...view details