ಬೆಂಗಳೂರು: ಸಿದ್ದರಾಮಯ್ಯ 'ದಲಿತ ಮುಖ್ಯಮಂತ್ರಿ' ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು ʼಕುಟುಂಬ ರಾಜಕಾರಣʼದ ಬಗ್ಗೆ ಪ್ರವಚನ ನೀಡುವುದೂ ಒಂದೇ ಎಂದು ಯಡಿಯೂರಪ್ಪ ರಾಜೀನಾಮೆ ನಂತರ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಸವಾಲೆಸದಿದ್ದ ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್ ನೀಡಿದೆ.
ದಲಿತನೊಬ್ಬ ಸಿಎಂ ಆಗಬಾರದು ಎಂದು ಪರಮೇಶ್ವರ್ ಅವರನ್ನು ಸೋಲಿಸಿದ ಸಿದ್ದರಾಮಯ್ಯ ಈಗ ದಲಿತ ಪ್ರೇಮ ತೋರ್ಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು 'ದಲಿತ ಮುಖ್ಯಮಂತ್ರಿ' ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು 'ಕುಟುಂಬ ರಾಜಕಾರಣ'ದ ಬಗ್ಗೆ ಪ್ರವಚನ ನೀಡುವುದೂ ಒಂದೇ ಎಂದು ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.
ದಲಿತ ಮುಖ್ಯಮಂತ್ರಿ ವಿಚಾರ: ಸಿದ್ದರಾಮಯ್ಯ ಸವಾಲಿಗೆ ಬಿಜೆಪಿ ಪ್ರತಿ ಸವಾಲು - ಬಿಜೆಪಿ ನಾಯಕತ್ವ ಬದಲಾವಣೆ
ದಲಿತರ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ದಲಿತ ಸಮುದಾಯಕ್ಕೆ ಸೇರಿದವರೇ ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಘೋಷಿಸಿ. ಅದೆಲ್ಲ ಹೇಗೆ ಸಾಧ್ಯ, 'ನಾನೇ ಮುಂದಿನ ಸಿಎಂ' ಎಂದು ಹೇಳಿಸಿಕೊಳ್ಳುವುದರಲ್ಲೇ ನೀವು ಬ್ಯುಸಿ ಆಗಿದ್ದೀರಿ ಅಲ್ವೇ ಎಂದು ಬಿಜೆಪಿ ಲೇವಡಿ ಮಾಡಿದೆ.
dalit cm