ಬೆಂಗಳೂರು :ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊಹಮ್ಮದ್ ನಲಪಾಡ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. 'ಆರು ವರ್ಷಗಳಿಂದ ಪಕ್ಷದಲ್ಲಿ ಉಚ್ಛಾಟನೆಗೊಂಡಿದ್ದ ವ್ಯಕ್ತಿ ನಾಲ್ಕೇ ವರ್ಷದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ' ಎಂದು ಟ್ವೀಟ್ನಲ್ಲಿ ವ್ಯಂಗ್ಯ ಮಾಡಲಾಗಿದೆ.
ಒಮ್ಮೆ ತಲೆ ಕಡಿಯುತ್ತೇನೆ ಎನ್ನುತ್ತಾರೆ, ಮತ್ತೊಬ್ಬರ ಕಾಲು ಮುರಿಯುತ್ತಾರೆ, ಮಗದೊಮ್ಮೆ ಅಮಾಯಕರ ಗುರುತು ಸಿಗದಂತೆ ಮುಖ ಜಜ್ಜುತ್ತಾರೆ. ಅದೇ ವ್ಯಕ್ತಿ ಈಗ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ. ದೇಶಕ್ಕೆ ಕಾಂಗ್ರೆಸ್ ಪಕ್ಷ ಯಾವ ಸಂದೇಶ ನೀಡುತ್ತಿದೆ? ಎಂದು ಬಿಜೆಪಿ ಟ್ವೀಟ್ನಲ್ಲಿ ಪ್ರಶ್ನಿಸಿದೆ.