ಬೆಂಗಳೂರು:ಕುಟುಂಬ ರಾಜಕಾರಣದಲ್ಲೂ(family politics) ಮಾನದಂಡವನ್ನು ಹುಡುಕಲು ಹೊರಟರೆ ಅಲ್ಲಿಯೂ ಹೆಚ್.ಡಿ ದೇವೇಗೌಡರದು(H.D Deve Gowda) ಒಂದು ಆದರ್ಶ ಕುಟುಂಬ. ಒಂದೇ ಕುಟುಂಬದ 8 ಜನರು ರಾಜಕಾರಣದಲ್ಲಿ ಸ್ಥಾನಮಾನ ಪಡೆದ ಕರ್ನಾಟಕದ ಏಕೈಕ ಪಕ್ಷ ಎಂಬ ಹೆಗ್ಗಳಿಕೆ ಪಡೆಯಲು ಕಾರಣವಾದ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಬಿಜೆಪಿ ಟ್ವೀಟ್(BJP tweet) ಮಾಡಿದೆ.
ಮಿಶನ್ ಕುಟುಂಬ ರಾಜಕಾರಣ ಹೆಸರಿನ ಹ್ಯಾಷ್ ಟ್ಯಾಗ್ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ದೊಡ್ಡಗೌಡರ ಕುಟುಂಬದ ಎಲ್ಲ ಕವಲುಗಳು ರಾಜಕೀಯ ಸ್ಥಾನಮಾನ ಪಡೆಯುತ್ತಿದೆ.
- ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ
- ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ