ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮತ್ತೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ, ಮಾನ್ಯ ಕುಮಾರಸ್ವಾಮಿ ಅವರೇ, ಈ ದೇಶದಲ್ಲಿ ಪ್ರಜ್ಞಾವಂತರು, ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ? ಎಂದು ಪ್ರಶ್ನಿಸಿದೆ.
ಹೆಚ್ಡಿಕೆಗೆ 'ಬೈಗಮಿ' ಬಗ್ಗೆ ಪ್ರಶ್ನಿಸಿ ಬಿಜೆಪಿ ಟ್ವೀಟ್ - ಬಿಜೆಪಿ ಲೇಟೆಸ್ಟ್ ಟ್ವೀಟ್
ಮಾನ್ಯ ಕುಮಾರಸ್ವಾಮಿ ಅವರೇ, ಈ ದೇಶದಲ್ಲಿ ಪ್ರಜ್ಞಾವಂತರು, ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ? ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಹೆಚ್ಡಿಕೆ ವಿರುದ್ಧ ವ್ಯಂಗ್ಯವಾಡಿದೆ.
ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್
ಅವುಗಳ ಪಟ್ಟಿಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ. ಅವೆಲ್ಲವೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೂ ಹೌದು ಎಂದು ಬಿಜೆಪಿ ಹೆಚ್ಡಿಕೆ ಕಾಲೆಳೆದಿದೆ.
- ಸಿಗ್ನಲ್ ಜಂಪ್
- ವಿಶ್ವಾಸ ದ್ರೋಹ ( ಬ್ರೀಚ್ ಆಫ್ ಟ್ರಸ್ಟ್ )
- ಭ್ರಷ್ಟಾಚಾರ
- ಸ್ವಜನ ಪಕ್ಷಪಾತ
- ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ(ದ್ವಿಪತ್ನಿತ್ವ)
ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ನೀವು (ಕುಮಾರಸ್ವಾಮಿ) ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ? ಎಂದು ಎಚ್ಚರಿಸಿದೆ.