ಬೆಂಗಳೂರು: ಬಿಟ್ ಕಾಯಿನ್ ಹಗರಣ (bitcoin case) ವಿಚಾರದಲ್ಲಿ ಕಾಂಗ್ರೆಸ್ ನಾಯಕರು(congress leaders) ಅಕ್ಷರಶಃ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲದ ವಸ್ತುವನ್ನು ಇದೆಯೆಂದು ಸ್ಥಾಪಿಸುವ ಭ್ರಮಾತ್ಮಕ ಕಾಯಿಲೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವಂತಿದೆ ಎಂದು ಬಿಜೆಪಿ(bjp) ಟೀಕಿಸಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಿಟ್ ಕಾಯಿನ್ ದಂಧೆ ನಡೆದಿದೆ. ಈ ದಂಧೆಯ ಆರೋಪಿಯು ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮಹಮ್ಮದ್ ನಲಪಾಡ್ ಹಾಗೂ ಮಾಜಿ ಸಚಿವ ಲಮಾಣಿ ಪುತ್ರ ದರ್ಶನ್ ನಡುವೆ ಅವ್ಯವಹಾರ ನಡೆಸಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಿದೆ ಎಂದು ಬಿಜೆಪಿ ಟ್ವಿಟ್(bjp tweet against congress) ಮಾಡಿ ಕಾಂಗ್ರೆಸ್ಗೆ ತಿರುಗೇಟು ನೀಡಿದೆ.
ಬಿಟ್ ಕಾಯಿನ್ ದಂಧೆಯ ಆರೋಪಿ ಶ್ರೀಕಿ(shreeki)ಯನ್ನು ಸಿದ್ದರಾಮಯ್ಯ(Siddaramaiah) ಅವಧಿಯಲ್ಲಿ ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು. ಅದೇ ಸಿದ್ದರಾಮಯ್ಯ ಈಗ ಬಿಟ್ ಕಾಯಿನ್ ಆರೋಪಿಗೆ ಕಾಂಗ್ರೆಸ್ ನಾಯಕರ ಜೊತೆ ಇರುವ ಸಂಬಂಧವನ್ನು ಉಲ್ಲೇಖ ಮಾಡದೇ, ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಬಿಟ್ ಕಾಯಿನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ.