ಬೆಂಗಳೂರು: ಒಂದು ಕಡೆ ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸಲು ಮನವಿ ಮಾಡುವುದು. ಇನ್ನೊಂದು ಕಡೆ, ಲೋಡುಗಟ್ಟಲೆ ಕಲ್ಲು ಸಂಗ್ರಹಿಸಿ ಕಲ್ಲು ತೂರಾಟ ಮಾಡಿದವರನ್ನು ಅಮಾಯಕರು ಎನ್ನುವುದು ಇದು ಕಾಂಗ್ರೆಸ್ ನಾಯಕರ ವರಸೆ. ಆರಕ್ಷಕರ ಮೇಲೆಯೇ ದಾಳಿ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎಂದು ಹೇಳಲು ನೀವು ಯಾರು? ಎಂದು ಬಿಜೆಪಿ ಪ್ರಶ್ನಿಸಿದೆ.
ಹುಬ್ಬಳ್ಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಭಾಗಿಯಾಗಿದ್ದ ಹಿಜಾಬ್ ಪರ ಪ್ರತಿಭಟನೆಯಲ್ಲಿ ಶಿಕ್ಷಕಿಯೋರ್ವರು ರಕ್ತಪಾತದ ಬೆದರಿಕೆ ಹಾಕಿದ್ದರು. ಕಾಂಗ್ರೆಸ್ ಆಯೋಜಿಸಿದ್ದ ಈ ಪ್ರತಿಭಟನೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆಯಲ್ಲಿ ಹೇಳಿದ್ದನ್ನೇ ಮಾಡಿದ್ದಾರೆ. ವ್ಯವಸ್ಥಿತ ಪಿತೂರಿಯಿದು ಎಂದು ಟ್ವೀಟ್ ಮಾಡಿದೆ.