ಬೆಂಗಳೂರು: ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುವ ವೇಳೆ ಯಾವ ಆಯುಧ ಹರಿತ ಮಾಡಿಕೊಂಡಿದ್ದೀರಿ? ಸ್ವ ಪಕ್ಷೀಯರ ವಿರುದ್ಧವೇ ರಹಸ್ಯ ಕಾರ್ಯಾಚರಣೆ ಏನಾದರೂ ರೂಪಿಸಿಕೊಂಡು ಬಂದಿದ್ದೀರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಬಿಜೆಪಿ ಕುಟುಕಿದೆ.
ಕಳೆದ ಬಾರಿ ಮೈತ್ರಿ ಸರ್ಕಾರ ಪತನ, ಈಗ ಏನು ತಂತ್ರ: ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ..! - ಸಿದ್ದರಾಮಯ್ಯ ಟ್ಟೀಟ್
ಕಳೆದ ಬಾರಿ ಪ್ರಕೃತಿ ಚಿಕಿತ್ಸೆಗೆ ಹೋಗಿ ಮೈತಿ ಸರ್ಕಾರ ಪತನ ಮಾಡಿದ್ರಿ, ಈ ಬಾರಿ ಪಾಲಿಕೆ ಚುನಾವಣೆ ಮುಂಚೆಯೇ ಚಿಕಿತ್ಸೆ ಹೋಗಿ ಬಂದಿದ್ದಿರಾ. ಸದ್ಯ ಕಾಂಗ್ರೆಸ್ ಪತನಕ್ಕೆ ಯಾವ ರಹಸ್ಯ ಕಾರ್ಯಾಚರಣೆ ರೂಪಿಸಿದ್ದೀರಾ ಎಂದು ಬಿಜೆಪಿ ಸಿದ್ದರಾಮಯ್ಯರನ್ನ ಟೀಕಿಸಿದೆ.
ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದು ಸ್ವಸ್ಥರಾಗಿ ಮರಳುತ್ತಿರುವ ಸಿದ್ದರಾಮಯ್ಯ ಅವರಿಗೆ ಸ್ವಾಗತ. ನಿಮ್ಮ ಅನುಪಸ್ಥಿತಿಯಿಂದ ಕೆಪಿಸಿಸಿಯಲ್ಲಿನ ಒಳಜಗಳ ರಂಗು ಕಳೆದುಕೊಂಡಿತ್ತು. ನಿಮ್ಮ ಭ್ರಷ್ಟಾಧ್ಯಕ್ಷರ ವಿರುದ್ಧ ಸೆಣೆಸುವುದಕ್ಕೆ ಯಾವ ರೀತಿ ಆಯುಧ ಹರಿತ ಮಾಡಿಕೊಂಡಿದ್ದೀರಿ ಎಂಬ ಕುತೂಹಲ ರಾಜ್ಯಕ್ಕಿದೆ, ತಿಳಿಸುವಿರಾ ಎಂದು ಟ್ವೀಟ್ ಮೂಲಕ ವಿಜೆಪಿ ವ್ಯಂಗ್ಯವಾಗಿ ಪ್ರಶ್ನಿಸಿದೆ.
ಕಳೆದ ಬಾರಿ ನೀವು ಪ್ರಕೃತಿ ಚಿಕಿತ್ಸೆಗೆ ಹೋದಾಗ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ಇಟ್ಟಿದ್ದೀರಿ. ಆದರೆ, ಈ ಬಾರಿ ನೀವು ಸದ್ದೆ ಮಾಡದೇ ರಹಸ್ಯ ಕಾರ್ಯಾಚರಣೆ ರೂಪಿಸಿರುವ ಹಾಗಿದೆ. ಭ್ರಷ್ಟಾಧ್ಯಕ್ಷರಿಗೆ ಖೆಡ್ಡಾ ತಯಾರಾಗಿದೆಯಾ ಎಂದು ಟೀಕಿಸಿದೆ.