ಕರ್ನಾಟಕ

karnataka

ETV Bharat / city

ಬಿಜೆಪಿಯವರು ವಾಮಮಾರ್ಗದಲ್ಲಿ ಗೆಲ್ಲಲು ಹೊರಟಿದ್ದಾರೆ.. ಅವರಿಗೆ ಸೋಲು ಖಚಿತ: ಉಗ್ರಪ್ಪ - ex mp ugrappa statement

ಉಪ ಚುನಾವಣೆ ಅಖಾಡ ರಾಜ್ಯದಲ್ಲಿ ರಂಗೇರಿದ್ದು, ನಾಯಕರುಗಳ ಆರೋಪ ಪ್ರತ್ಯಾರೋಪಗಳು ಚುನಾವಣಾ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಇಂದು ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್​ ಮುಖಂಡ ಉಗ್ರಪ್ಪ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

By

Published : Nov 17, 2019, 2:36 PM IST

ಬೆಂಗಳೂರು: ಬಿಜೆಪಿಯವರು ಸೋಲನ್ನ ಒಪ್ಪಿದ್ದಾರೆ, 15 ಕ್ಷೇತ್ರಗಳಲ್ಲಿ ಗೆಲ್ಲೋಕೆ ಆಗಲ್ಲ ಅನ್ನೋದು ಅವರಿಗೆ ಖಾತ್ರಿಯಾಗಿದೆ. ಹೀಗಾಗಿ ವಾಮಮಾರ್ಗದಲ್ಲಿ ಗೆಲ್ಲೋಕೆ ಹೊರಟಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಗ್ರಪ್ಪ, ಹುಣಸೂರಿನಲ್ಲಿ ಸೀರೆ ಹಂಚಿ ಬಿಜೆಪಿಯವರು ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಶಿವಾಜಿನಗರದಲ್ಲಿ ಭಾಷೆ ಆಧಾರದಲ್ಲಿ ಮತ ಕೇಳ್ತಿದ್ದಾರೆ. ಗೆಲ್ಲೋಕೆ ಇಂತಹ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಸಚಿವ ಈಶ್ವರಪ್ಪ ಅನರ್ಹರನ್ನ ಅಳಿಯಂದ್ರು ಅಂತಾರೆ. ಕೇಂದ್ರ ಸಚಿವ ಸದಾನಂದಗೌಡರು ಅನರ್ಹರನ್ನ ಸೊಸೆಯಂದಿರು ಅಂತಾರೆ. ಹೀಗಾಗಿ ಇವರಿಬ್ಬರೂ ಮರ್ಯಾದೆ ತೆಗೆದಿದ್ದಾರೆ. ಸೊಸೆಯಂದಿರು ಅಂತ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ. ಯಾವ ಹೆಣ್ಣುಮಗಳು ತವರು ಮನೆಗೆ ದ್ರೋಹ ಬಗೆಯಲ್ಲ. ಕೊಟ್ಟ ಮನೆಗೂ ದ್ರೋಹ ಮಾಡಲ್ಲ. ಆದರೆ ಅನರ್ಹರು ಎರಡೂ ಮನೆಗೆ ದ್ರೋಹ ಮಾಡಿದ್ದಾರೆ ಅನರ್ಹರನ್ನ ಮಹಿಳೆಯರಿಗೆ ಹೋಲಿಸಿ ಮರ್ಯಾದೆ ತೆಗೆದಿದ್ದಾರೆ. ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಮಾತನಾಡಿ, ರಫೇಲ್​ನಲ್ಲಿ ಹಗರಣ ನಡೆದಿಲ್ಲವೆಂದರೆ ಹೇಗೆ? ಹಾಗಾದರೆ ಜ್ಯುಡಿಶಿಯಲ್ ತನಿಖೆಗೆ ವಹಿಸಿ ಎಂದರು.

ಕಾಂಗ್ರೆಸ್ ಎಲ್ಲರಿಗೂ ನ್ಯಾಯ ಕೊಟ್ಟಿರುವಂತದ್ದು ಸರ್ವೇಜನೋ ಸುಖಿನೋಭವಂತು ನಮ್ಮ ಬದ್ಧತೆ. ನಾವು ಹಿಂದುತ್ವದ ಪಿಲಾಸಫಿಯನ್ನು ಹೊಂದಿರುವವರು. ಆದರೆ ಬಿಜೆಪಿ ಮತೀಯವಾದ ಮಾಡುತ್ತಿದ್ದಾರೆ. ಇವತ್ತು ಮತೀಯವಾದದ ವಿರುದ್ಧ ಶಿವಸೇನೆ ಸಿಡಿದೆದ್ದಿದೆ. ಹೀಗಾಗಿ ಬಿಜೆಪಿಯಿಂದ ಹೊರಗೆ ಬಂದಿದೆ ಎಂದು ಹೇಳಿದರು.

ಯಶವಂತಪುರ, ಹೊಸಪೇಟೆ ಅಭ್ಯರ್ಥಿ ಆಯ್ಕೆ ವಿಚಾರ ಮಾತನಾಡಿ, ಎಲ್ಲೂ ನಾವು ಅಸಮರ್ಥರನ್ನ ಕಣಕ್ಕಿಳಿಸಿಲ್ಲ. ಪ್ರಬಲರಾಗಿರುವವರನ್ನೇ ನಾವು ಕಣಕ್ಕಿಳಿಸುತ್ತಿದ್ದೇವೆ. ವಿಜಯನಗರದಲ್ಲಿ ಘೋರ್ಪಡೆ ಸೂಕ್ತ ಆಯ್ಕೆ. ಘೋರ್ಪಡೆ ಗಣಿ ಕುಟುಂಬದಿಂದಲೇ ಬಂದವರು. ಸ್ಥಳೀಯ ಮಟ್ಟದ ರಾಜಕಾರಣದಿಂದಲೇ ಬಂದವರು. ವಿಜಯನಗರದಲ್ಲಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ. ಪಕ್ಷದ ತತ್ವ, ಸಿದ್ಧಾಂತ ನೋಡಿ ಜನ ಮತ ನೀಡ್ತಾರೆ. ಆನಂದ್ ಸಿಂಗ್ ಇಲ್ಲಿಗೆ ಬರದೇ ಇದ್ದಿದ್ರೆ ಸೋಲುತ್ತಿದ್ರು. ಕಳೆದ ಚುನಾವಣೆಯಲ್ಲೇ ಸೋಲಬೇಕಿತ್ತು. ಜನ ಸಾಕಷ್ಟು ಪ್ರಬಲರಾಗಿದ್ದಾರೆ. ಜನರೇ ಈ ಭಾರಿ ಅಂತವರಿಗೆ ಪಾಠ ಕಲಿಸ್ತಾರೆ ಎಂದರು.

ಮೋದಿ ಇವಿಎಂ ಬಳಸಿಕೊಂಡಿದ್ದೇ ಪವಾಡ. ಪ್ರಧಾನಿಯವರಿಗೆ ಧಂ, ತಾಕತ್ತಿದ್ದರೆ ಇವಿಎಂ ಕ್ಯಾನ್ಸಲ್ ಮಾಡಲಿ. ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಬ್ಯಾಲೇಟ್ ಮೇಲೆ ಗೆಲ್ಲಲಿ. ಇದು ಪ್ರಧಾನಿಗೆ ನನ್ನ ಓಪನ್ ಚಾಲೆಂಜ್. ಎಲ್ಲ ಕಡೆಯೂ ಇವಿಎಂ ದುರ್ಬಳಕೆ ಆದರೆ ಅನುಮಾನ ಬರಲ್ವೇ. ಅದಕ್ಕೆ ಕೆಲವು ಕಡೆ ಸೋತಿದ್ದಾರಷ್ಟೇ ಎಂದರು.

ಕಾಂಗ್ರೆಸ್ ಮಹಿಳೆಯರಿಗೆ ನ್ಯಾಯ ಒದಗಿಸಿದೆ:

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಹೊಸಕೋಟೆಯಿಂದ ಪದ್ಮಾವತಿ ಸುರೇಶ್​ಗೆ ಟಿಕೆಟ್ ನೀಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನ್ಯಾಯ ಒದಗಿಸಿದೆ. ಆದರೆ ಬಿಜೆಪಿಯಲ್ಲಿ ಮಹಿಳೆಯರಿಗೆ ಆದ್ಯತೆಯಿಲ್ಲ. ಒಂದೇ ಒಂದು ಟಿಕೆಟ್ ಅಲ್ಲಿ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ 15 ಕ್ಷೇತ್ರದಲ್ಲಿ ಒಂದು ಕ್ಷೇತ್ರ ಮಹಿಳೆಗೆ ನೀಡಿ ಪ್ರಾತಿನಿಧ್ಯ ಕೊಟ್ಟಿದೆ. ಉಳಿದ ಪಕ್ಷದಲ್ಲಿ ಇದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details