ಕರ್ನಾಟಕ

karnataka

ETV Bharat / city

ಶಾಸಕರಿಗೆ ತಮ್ಮ ನೋವು ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ: ನಳಿನ್ ಕುಮಾರ್ ಕಟೀಲ್ - ಶಾಸಕರಿಗೆ ತಮ್ಮ ನೋವು ವ್ಯಕ್ತಪಡಿಸಲು ಸ್ವಾತಂತ್ರ್ಯ

ಸಚಿವರುಗಳು ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಲು ಸ್ವತಂತ್ರರಿದ್ದಾರೆ. ಆದರೆ ಅದರಿಂದ ಪಕ್ಷಕ್ಕೆ ಮುಜುಗರ ಹಾನಿಯಾಗುವಂತಾದರೆ ಅವರನ್ನು ಕರೆಸಿ ಮಾತನಾಡುತ್ತೇನೆ. ಖಾತೆಗಳ ಹಂಚಿಕೆ, ಪುನರ್ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.

Nalin Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Jan 23, 2021, 12:53 PM IST

Updated : Jan 23, 2021, 2:21 PM IST

ಬೆಂಗಳೂರು: ಶಾಸಕರು ತಮ್ಮ ನೋವು ವ್ಯಕ್ತಪಡಿಸಲು ಸ್ವಾತಂತ್ರ್ಯ ಇದೆ. ಯತ್ನಾಳ್ ಅವರ ವಿಚಾರದಲ್ಲಿ ಶಿಸ್ತು ಸಮಿತಿ ಇದೆ. ಅವರ ಹೇಳಿಕೆಯನ್ನು ಪರಿಶೀಲಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬೆಂಗಳೂರಿನ ಸ್ಕೌಟ್ಸ್ ಆ್ಯಡ್ ಗೈಡ್ಸ್ ಭವನದ ಬಳಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಾಜುಗೌಡ, ತಿಪ್ಪಾರೆಡ್ಡಿ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯಿಸಿ ಎಲ್ಲವೂ ಅವರವರ ಭಾವಕ್ಕೆ, ಭಕುತಿಗೆ. ಶಾಸಕರನ್ನು ಕರೆಸಿ ಮಾತಾನಾಡುತ್ತೇವೆ. ಕೆಲವರ ಹೇಳಿಕೆಗಳು ಪಕ್ಷದ ಇಮೇಜ್​​ಗೆ ಧಕ್ಕೆ ತಂದಿಲ್ಲ. ಪಕ್ಷ ಎಲ್ಲವನ್ನೂ ಸರಿ ಮಾಡುತ್ತದೆ. ಯತ್ನಾಳ್ ಸಮಸ್ಯೆ ಬಗ್ಗೆ ಕೋರ್ ಕಮಿಟಿಯಲ್ಲೂ ಚರ್ಚೆಯಾಗಿದೆ. ಈ ವಿಷಯವನ್ನು ದೆಹಲಿಯ ಶಿಸ್ತು ಸಮಿತಿಗೆ ಮಾಹಿತಿ ಕೊಟ್ಟಿದ್ದೇವೆ. ದೆಹಲಿ ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತದೆ ಎಂದರು.

ಸಚಿವ ಸಂಪುಟ ಅಸಮಾಧಾನ, ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಕಟೀಲ್​, ಶಾಸಕರು ದೆಹಲಿಗೆ ಯಾವುದೋ ಕಾರಣಕ್ಕಾಗಿ ಹೋಗಿರುತ್ತಾರೆ. ಸಚಿವ ಸಂಪುಟ ಸಭೆ ನಡೆದಾಗ ಕೆಲವರಿಗೆ ಬೇಸರ, ನೋವು ಸಹಜ. ಸಹಜವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವೆಲ್ಲವನ್ನೂ ಪರಿಶೀಲಿಸಿ ಶಾಸಕರ ಬೇಸರ ಸಮಾಪ್ತಿ ಮಾಡುತ್ತೇವೆ ಎಂದು ಹೇಳಿದ್ರು.

ಓದಿ:ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಹಸಿರು ನಿಶಾನೆ: ನಳಿನ್ ಕುಮಾರ್ ಕಟೀಲ್ ಸಂತಸ

ಖಾತೆ ಮರುಹಂಚಿಕೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಸಚಿವರುಗಳು ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಲು ಸ್ವತಂತ್ರರಿದ್ದಾರೆ. ಆದರೆ ಅದರಿಂದ ಪಕ್ಷಕ್ಕೆ ಮುಜುಗರ, ಹಾನಿಯಾಗುವಂತಾದರೆ ಅವರನ್ನು ಕರೆಸಿ ಮಾತನಾಡುತ್ತೇನೆ. ಖಾತೆಗಳ ಹಂಚಿಕೆ, ಪುನರ್ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಎಲ್ಲವನ್ನು ಸರಿಮಾಡುತ್ತಾರೆ ಎಂದರು.

ಮೋದಿ ಆಡಳಿತದಿಂದ ರಾಷ್ಟ್ರ ಪರಿವರ್ತನೆಯಾಗಿದೆ:

ಬಿಜೆಪಿ ಆಡಳಿತದಿಂದ ರಾಷ್ಟ್ರದಲ್ಲಿ ರಾಜಕಾರಣ, ಆಡಳಿತ, ಮಾನಸಿಕ ಪರಿವರ್ತನೆಯಾಗಿದೆ. ಪ್ರಧಾನಿ ಮೋದಿ ಅವರು ಪರಿವರ್ತನೆ ಹರಿಕಾರರಾಗಿದ್ದಾರೆ ಎಂದು ಕಟೀಲ್ ಹೇಳಿದರು.

ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಬಿಜೆಪಿ ಮಾಧ್ಯಮ ವಿಭಾಗ ಏರ್ಪಡಿಸಿದ್ದ ಮಾಧ್ಯಮ ಮಂಥನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಪಕ್ಷದ ವಕ್ತಾರನಿಗೆ ಪೂರ್ಣ ಸ್ವಾತಂತ್ರ್ಯ ಇಲ್ಲ. ನನ್ನ ಮಾತು ಪಕ್ಷದ ಮಾತಾಗಲಿದೆ. ನಮ್ಮಲ್ಲಿ ಅಧ್ಯಯನಶೀಲತೆ ಇರಬೇಕು. ಪ್ರತಿ ನಿಮಿಷ ವಿಷಯಗಳ ಸಂಗ್ರಹ ಮಾಡುವ ಜಾಣ್ಮೆ ನಮ್ಮಲ್ಲಿ ಇರಬೇಕು. 2014ರ ಬಳಿಕ ರಾಜಕಾರಣ, ಆಡಳಿತ ಹಾಗೂ ಮಾನಸಿಕವಾಗಿ ಬದಲಾವಣೆ ಆಗಿದೆ ಎಂದು ವಿವರಿಸಿದರು.

2014ರ ಹಿಂದೆ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಆಡಳಿತ ಎನ್ನುತ್ತಿದ್ದೆವು. ಆದರೆ, ಇದೀಗ 2014ರಿಂದ ಮೋದಿ ಆಡಳಿತ ಮುನ್ನ ಮತ್ತು ನಂತರ ಎಂಬ ಚಿಂತನೆ ಬಂದಿದೆ. ಅವರು ಭ್ರಷ್ಟಾಚಾರ ಮುಕ್ತ ಆಡಳಿತದ ಮೂಲಕ ಪರಿವರ್ತನೆ ತಂದಿದ್ದಾರೆ. 370ನೇ ವಿಧಿ, ತಲಾಖ್, ಶ್ರೀರಾಮ ಮಂದಿರ ಹೀಗೆ ಹಲವು ಮಹತ್ವದ ನಿರ್ಣಯ ಕೈಗೊಂಡು ಪರಿವರ್ತನೆಯ ಹರಿಕಾರರಾಗಿದ್ದಾರೆ ಎಂದು ಕಟೀಲ್​ ಬಣ್ಣಿಸಿದರು.

ಮಾಧ್ಯಮದಲ್ಲಿ ಅತಿ ಕಡಿಮೆಯಾಗಿ ಮಾತನಾಡಿದವರು ಎಂದರೆ ಅದು ಪ್ರಧಾನಿ ಮೋದಿ. ಅವರು ಪ್ರಸಿದ್ಧಿ ಹಿಂದೆ ಹೋಗಲಿಲ್ಲ. ಪ್ರಸಿದ್ಧಿ ಅವರ ಹಿಂದೆ ಬಂದಿದೆ. ಆದ್ದರಿಂದ ಅಧ್ಯಯನ ಮಾಡಿ ಮಾತನಾಡಬೇಕು ಎಂದರು.

ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿ, ಸರ್ಕಾರ ಹಾಗೂ ಪಕ್ಷದ ಕಾರ್ಯಗಳನ್ನು ಜನರಿಗೆ ತಲುಪಿಸುವುದು ಮಾಧ್ಯಮ ವಿಭಾಗ. ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಮಾಧ್ಯಮದ ಮಾರ್ಗದರ್ಶನ ಅಗತ್ಯ. ಆದ್ದರಿಂದ ಜನಪ್ರತಿನಿಧಿಗಳು ಪತ್ರಕರ್ತರ ಸಲಹೆ ಪಡೆಯುವ ಪ್ರಯತ್ನ ಮಾಡಬೇಕು. ಮಾಧ್ಯಮಗಳು ಸರ್ಕಾರ ಅನುಮೋದಿಸಿದ ಕಾಯ್ದೆಗಳನ್ನು ಜನರಿಗೆ ತಿಳಿಸಬೇಕು. ಇದರಿಂದ ಜನರ ವಿಶ್ವಾಸ ಹೆಚ್ಚಾಗುತ್ತದೆ. ಪಕ್ಷದ ಕಾರ್ಯ ಚಟುವಟಿಕೆಗಳನ್ನು ತಿಳಿಸುವ ಕೆಲಸವಾಗಬೇಕು ಎಂದರು.

Last Updated : Jan 23, 2021, 2:21 PM IST

ABOUT THE AUTHOR

...view details