ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದಿನ ಬೆಂಚ್ ನಲ್ಲಿದ್ರೂ ಹುಲಿನೇ, ಮುಂದಿನ ಬೆಂಚ್ನಲ್ಲಿದ್ರೂ ಹುಲಿನೇ ಎಂದು ಬಿಜೆಪಿ ಸದಸ್ಯ ರಾಜೂಗೌಡ ಕೊಂಡಾಡಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, 2008, 2018 ರಲ್ಲಿ ಯಡಿಯೂರಪ್ಪರಿಂದಾಗಿಯೇ ಅಧಿಕಾರ ಮಾಡಿದ್ದೇವೆ. ಮುಂದೆಯೂ ಯಡಿಯೂರಪ್ಪ ನೇತೃತ್ವದಲ್ಲೇ ಅಧಿಕಾರಕ್ಕೆ ಬರುತ್ತೇವೆ. ಅವರು ಅಧಿಕಾರದಲ್ಲಿ ಇದ್ದರೂ ಅದೇ ಗೌರವ ಇರುತ್ತೆ, ಅಧಿಕಾರದಲ್ಲಿ ಇಲ್ಲದಿದ್ದರೂ ಅದೇ ಗೌರವ ಇರುತ್ತದೆ ಎಂದು ಹೇಳಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಇವರು, ಜನಪರ ಕಾಳಜಿ ಇರುವಂಥ ಬಜೆಟ್ ಮಂಡಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ 2013 ರಿಂದ ಹೆಚ್ಚಿನ ಅನುದಾನ ಬರುತ್ತಿದೆ. ಈ ಬಾರಿ 3 ಸಾವಿರ ಕೋಟಿಗೂ ಅಧಿಕ ಹಣ ಅನುದಾನ ನೀಡಲಾಗಿದೆ. ಅದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಬಿಎಸ್ ವೈ ಸರ್ಕಾರ ಇದ್ದಾಗಲೂ ಹೆಚ್ಚಿನ ಅನುದಾನ ನೀಡಲಾಗಿತ್ತು ಎಂದು ತಿಳಿಸಿದರು.
ಡಿಕೆಶಿಗೆ ರಾಜೂಗೌಡ ಟಾಂಗ್:ಮೊನ್ನೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಗೋವಾಕ್ಕೆ ಹೋಗಿದ್ದರು. ಅವರು ಇನ್ನೂ ಬಂದಿಲ್ಲ ಅಂತ ಬಹಳ ಚಿಂತೆ ಇತ್ತು. ನಮ್ಮ ಅಣ್ಣ ಇನ್ನೂ ಯಾಕೆ ಬಂದಿಲ್ಲ ಎಂದು ಕಾಲೆಳೆದರು. ನೀರಾವರಿ ಯೋಜನೆಗೆ ನಮ್ಮ ಸರ್ಕಾರ ದೊಡ್ಡ ಕೊಡುಗೆ ಕೊಟ್ಟಿದೆ. ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ. ಮೀಸಲಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ ಬಳಿ ಮನವಿ ಮಾಡ್ತೇನೆ. ಮೇಕೆದಾಟುವಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದೀರಿ. ಈಗ ಬೆಂಗಳೂರಿನಿಂದ ಮೇಕೆದಾಟುಗೆ ಉಲ್ಟಾ ಪಾದಯಾತ್ರೆ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ.
ಓದಿ :'ದಿ ಕಾಶ್ಮೀರ್ ಫೈಲ್ಸ್' ಚಿತ್ರ ವೀಕ್ಷಿಸಲು ಮಂತ್ರಿಮಾಲ್ಗೆ ಬಸ್ನಲ್ಲಿ ಬಂದ ಶಾಸಕರು, ಸದಸ್ಯರು