ಕರ್ನಾಟಕ

karnataka

ETV Bharat / city

ಪರಿಷತ್‌ ಚುನಾವಣೆ: ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್​ 1 ಸ್ಥಾನ ಗೆಲ್ಲಲು ಅವಕಾಶ - ಏಳು ಸ್ಥಾನಗಳಿಗೆ ಎಂಎಲ್​ಸಿ ಚುನಾವಣೆ

ಏಳು ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ 4, ಕಾಂಗ್ರೆಸ್  2 ಮತ್ತು ಜೆಡಿಎಸ್​ 1 ಸ್ಥಾನ ಗೆಲ್ಲಲು ಅವಕಾಶವಿದೆ.

BJP Majority in MLC election, MLC election 2022, MLC election to seven seats, MLC election update, ಎಂಎಲ್​ಸಿ ಚುನಾವಣೆಯಲ್ಲಿ ಬಿಜೆಪಿ ಬಹುಮತ, ಎಂಎಲ್​ಸಿ ಚುನಾವಣೆ 2022, ಏಳು ಸ್ಥಾನಗಳಿಗೆ ಎಂಎಲ್​ಸಿ ಚುನಾವಣೆ, ಎಂಎಲ್​ಸಿ ಚುನಾವಣಾ ಅಪ್​ಡೇಟ್​,
ಮೇಲ್ಮನೆ ಚುನಾವಣೆ

By

Published : May 11, 2022, 8:31 AM IST

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ 4, ಪ್ರತಿ ಪಕ್ಷ ಕಾಂಗ್ರೆಸ್​ಗೆ 2 ಹಾಗು ಜೆಡಿಎಸ್​ಗೆ ಒಂದು ಸ್ಥಾನ ಗೆಲ್ಲುವ ಅವಕಾಶವಿದೆ. ಹಾಗೆಯೇ ಚುನಾವಣೆಯ ಬಳಿಕ ಬಿಜೆಪಿ ಮೇಲ್ಮನೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಲಿದೆ.

ಶಾಸಕರೇ ಮತದಾರರಾಗಿರುವ ಈ ಚುನಾವಣೆಯಲ್ಲಿ ಆಯಾ ಪಕ್ಷಗಳ ಶಾಸಕರ ಸಂಖ್ಯಾ ಬಲಾಬಲಕ್ಕನುಸಾರವಾಗಿ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿದೆ. ವಿಧಾನಸಭೆಯಲ್ಲಿ 121 ಹಾಗು ಒಬ್ಬ ಪಕ್ಷೇತರ ಶಾಸಕರ ಬಲ ಹೊಂದಿದ ಆಡಳಿತಾರೂಢ ಬಿಜೆಪಿ ನಾಲ್ಕು ಸ್ಥಾನ ಗೆಲ್ಲಬಹುದಾಗಿದೆ. 69 ಶಾಸಕರನ್ನು ಹೊಂದಿದ ಪ್ರತಿ ಪಕ್ಷ ಕಾಂಗ್ರೆಸ್ 2 ಸ್ಥಾನಗಳು ಮತ್ತು 32 ಶಾಸಕರನ್ನು ಹೊಂದಿದ ಜೆಡಿಎಸ್ ಕೇವಲ ಒಂದು ಸ್ಥಾನ ಗಿಟ್ಟಿಸಿಕೊಳ್ಳಬಹುದು. ಈ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಟ 29 ಶಾಸಕರ ಮತಗಳ ಅಗತ್ಯತೆ ಇದೆ.

ಅವಿರೋಧ ಆಯ್ಕೆ ಸಾಧ್ಯತೆ:ಪರಿಷತ್ ಚುನಾವಣೆಯು ಶಾಸಕರ ಬಲಾಬಲ ಆಧರಿಸಿ ನಡೆಯುವುದರಿಂದ ಒಂದು ಪಕ್ಷ ಇಂತಿಷ್ಟೇ ಸ್ಥಾನಗಳನ್ಬು ಗೆಲ್ಲಬಹುದು ಎನ್ನುವುದು ಮೊದಲೇ ನಿರ್ಧರಿತವಾಗಿದೆ. ಆದ್ದರಿಂದ ಯಾವ ಪಕ್ಷವೂ ತನ್ನ ಶಾಸಕರ ಸಂಖ್ಯೆಗನುಗುಣವಾಗಿಯೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದರಿಂದ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆಯೇ ಹೆಚ್ಚು. ಒಂದೊಮ್ಮೆ ರಾಜಕೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿದರೆ, ಗೆಲ್ಲಲು ಸಾಕಷ್ಟು ಕಸರತ್ತು ಮಾಡಬೇಕಾಗುತ್ತದೆ. ಬೇರೆ ಪಕ್ಷದ ಶಾಸಕರ ಮತಗಳನ್ನು ಪಡೆಯುವುದು ಅನಿವಾರ್ಯವಾಗಲಿದೆ.

ಇದನ್ನೂ ಓದಿ:ಸುಪ್ರೀಂ ಸೂಚನೆ: ಡಿ ಲಿಮಿಟೇಷನ್ ಪೂರ್ಣಗೊಳ್ಳದೆ ನಡೆಯುತ್ತಾ ಪಾಲಿಕೆ ಚುನಾವಣೆ?

ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತ: ಜೂನ್ ಮೂರರಂದು ನಡೆಯುವ ಚುನಾವಣೆ ಬಳಿಕ ಮೇಲ್ಮನೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ. ನಾಲ್ಕು ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಅವಕಾಶವಿದೆ. ಇದರಿಂದಾಗಿ ಸದನದಲ್ಲಿ ಕೇವಲ ಒಂದು ಸ್ಥಾನದ ಕೊರತೆ ಎದುರಿಸುತ್ತಿದ್ದ ಬಿಜೆಪಿಗೆ ಚುನಾವಣೆ ನಂತರದ ಪರಿಸ್ಥಿತಿಯಲ್ಲಿ ನಿಚ್ಛಳ ಬಹುಮತ ಸಿಗಲಿದೆ.

ವಿಧಾನ ಪರಿಷತ್ತಿನಲ್ಲಿ ಬಿಜೆಪಿ 37 ಸದಸ್ಯರನ್ನು ಹೊಂದಿದೆ. ಒಂದು ಸ್ಥಾನದ ಅವಶ್ಯಕತೆ ಇದ್ದು ಈ ಚುನಾವಣೆಯಲ್ಲಿ ಬಿಜೆಪಿಯು ನಾಲ್ಕು ಸ್ಥಾನ ಗೆದ್ದು ಮೇಲ್ಮನೆಯಲ್ಲಿ ಮೆಜಾರಿಟಿ ಪಕ್ಷ ಎನಿಸಿಕೊಳ್ಳಲಿದೆ. ವಿಧಾನ ಪರಿಷತ್ತಿನ ಸದಸ್ಯರಾಗಿ ನಿವೃತ್ತಿಯಾಗುತ್ತಿರುವ 7 ಸದಸ್ಯರಲ್ಲಿ ಕಾಂಗ್ರೆಸ್​ನ ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ ಹಾಗೂ ಬಿಜೆಪಿಯ ಲಕ್ಷ್ಮಣ ಸವದಿ, ಲೇಹರ್ ಸಿಂಗ್ ಮತ್ತು ಜೆಡಿಎಸ್​ನ ರಮೇಶ್ ಗೌಡ, ನಾರಾಯಣ ಸ್ವಾಮಿ ಸೇರಿದ್ದಾರೆ.

ಈ ಚುನಾವಣೆಯ ಬಳಿಕ ಬಿಜೆಪಿಯ ಇಬ್ಬರು ಸದಸ್ಯರು ನಿವೃತ್ತರಾಗಿ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್​ನ ಮೂವರು ಸದಸ್ಯರು ನಿವೃತ್ತರಾಗಿ ಎರಡು ಸ್ಥಾನ ಗೆಲ್ಲಲಿದೆ. ಜೆಡಿಎಸ್​ನ ಇಬ್ಬರು ನಿವೃತ್ತರಾಗಿ ಒಂದು ಸ್ಥಾನ ಮಾತ್ರ ಚುನಾವಣೆಯಲ್ಲಿ ಗೆಲ್ಲಬಹುದು.

ABOUT THE AUTHOR

...view details