ಬೆಳಗಾವಿ:ಇತ್ತೀಚೆಗೆ ಭಾರಿ ಮಳೆಯಿಂದಾಗಿ ಆದ ಹಾನಿಗೆ ಪರಿಹಾರ ನೀಡಲು ಅನುದಾನವಾಗಿ ಪ್ರತಿ ಶಾಸಕರಿಗೆ 52 ಕೋಟಿ ರೂಪಾಯಿ ನೀಡುವುದಾಗಿ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ನಿನ್ನೆ ಖಾಸಗಿ ಹೋಟೆಲ್‌ನಲ್ಲಿ ತಡರಾತ್ರಿ ವರೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಶಾಸಕರು ಅತಿವೃಷ್ಟಿ ಪರಿಹಾರಕ್ಕಾಗಿ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಅತೃಪ್ತಿ ಹೊರ ಹಾಕಿದ್ದಾರೆ. ಈ ವೇಳೆ ಸಿಎಂ ಪ್ರತಿ ಶಾಸಕರಿಗೆ 52 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದರು. ಅದರಲ್ಲಿ ಎರಡು ಕೋಟಿ ದೇವಸ್ಥಾನ ನಿರ್ಮಾಣ ಅಥವಾ ಜೀರ್ಣೋದ್ಧಾರಕ್ಕೆ ಬಳಸಲು ಅನುದಾನ ನೀಡುವುದಾಗಿ ತಿಳಿಸಿದರು.
ಪರಿಷತ್ ಚುನಾವಣೆ ಸದ್ದು..
ಶಾಸಕಾಂಗ ಸಭೆಯಲ್ಲಿ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಪರಿಷತ್ ಚುನಾವಣೆಯಲ್ಲಿ ಕೆಲವರು ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ. ಶಾಸಕರಾದ ನಮ್ಮನ್ನೇ ಕಡೆಗಣನೆ ಮಾಡಲಾಗಿದೆ. ಇದು ಸರಿಯಾದ ಕ್ರಮ ಅಲ್ಲ. ಪಕ್ಷಕ್ಕೆ ನಾವು ದುಡಿದಿಲ್ವಾ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಗೆ ಬಂದಿರುವ ಕೆಲವು ಹಾಲಿ ಶಾಸಕರು ಪುನಃ ಕಾಂಗ್ರೆಸ್ಗೆ ಹೋಗಲು ಸಿದ್ಧರಾಗಿದ್ದಾರೆ ಎಂದು ಯತ್ನಾಳ್ ಸಭೆಯಲ್ಲೇ ಸೂಚ್ಯವಾಗಿ ತಿಳಿಸಿದರು ಎನ್ನಲಾಗ್ತಿದೆ. ಇದಕ್ಕೆ ಕೆಲ ಶಾಸಕರೂ ಧ್ವನಿಗೂಡಿಸಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಚಿವರು ಮಾತು ಕೇಳುತ್ತಿಲ್ಲ: