ಕರ್ನಾಟಕ

karnataka

ETV Bharat / city

ಬಿಜೆಪಿ ಮುಖಂಡ ಅನಂತರಾಜು ಸಾವು ಪ್ರಕರಣ: ವಿಚಾರಣೆಗೆ ಹಾಜರಾದ ಪತ್ನಿ‌ ಸುಮಾ - ರೇಖಾ ಮತ್ತು ಸುಮಾ ಫೋನ್​ ಕಾಲ್​ ಸಂಭಾಷಣೆ

ಬಿಜೆಪಿ ಮುಖಂಡ ಅನಂತರಾಜ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತರಾಜು ಪತ್ನಿ ಸುಮಾ ವಿಚಾರಣೆಗೆ ಹಾಜರಾಗಿದ್ದಾರೆ. ಸುಮಾ ಮತ್ತು ರೇಖಾರ ಕರೆ ಸಂಭಾಷಣೆ ಬಗ್ಗೆ ತಿಳಿದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೊಟೀಸ್​ ನೀಡಿದ್ದರು.

BJP leader Anantaraju wife suma Attended hearing today in Bangalore police station
ಬಿಜೆಪಿ ಮುಖಂಡ ಅನಂತರಾಜು ಸಾವು ಪ್ರಕರಣ: ವಿಚಾರಣೆಗೆ ಹಾಜರಾದ ಪತ್ನಿ‌ ಸುಮಾ

By

Published : May 24, 2022, 5:13 PM IST

ಬೆಂಗಳೂರು: ಹೇರೋಹಳ್ಳಿ ವಾರ್ಡ್ ಬಿಜೆಪಿ ಮುಖಂಡ ಅನಂತರಾಜ್ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಡರಹಳ್ಳಿ ಪೊಲೀಸರ ಮುಂದೆ ಅನಂತರಾಜು ಪತ್ನಿ ಸುಮಾ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ತಿಂಗಳು ಅನಂತರಾಜ್ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಬಳಿಕ‌ ಪತ್ನಿ ಸುಮಾ, ತನ್ನ ಗಂಡ ಹನಿಟ್ರ್ಯಾಪ್ ‌ಒತ್ತಡಕ್ಕೆ ಮಣಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ರೇಖಾ ಎಂಬುವವರು ಸಾವಿಗೆ ಕಾರಣ ಅವರನ್ನು ಬಂಧಿಸಬೇಕೆಂದು‌ ದೂರು ನೀಡಿದ್ದರು.

ತನಿಖೆ‌ ಚುರುಕುಗೊಳಿಸಿದ್ದ ಪೊಲೀಸರು ರೇಖಾಳನ್ನು ಬಂಧಿಸುತ್ತಿದ್ದಂತೆ ರೇಖಾ ಹಾಗೂ‌ ಸುಮಾ ಅವರ‌ ನಡುವೆ ನಡೆದ ಪೋನ್ ಸಂಭಾಷಣೆ ವೈರಲ್ ಆಗಿತ್ತು. ಪ್ರಕರಣಕ್ಕೆ ತಿರುವು ಸಿಗುತ್ತಿದ್ದಂತೆ‌ ಸುಮಾ ಮೇಲೆ ಪೊಲೀಸರು ಅನುಮಾನದ ಕಣ್ಣು ಬಿಟ್ಟಿದ್ದರು. ವಿಚಾರಣೆಗೆ ಹಾಜರಾಗುವಂತೆ ಸುಮಾಗೆ ನೊಟೀಸ್ ಜಾರಿ‌ ಮಾಡಿದ್ದರು‌. ‌

ಇದನ್ನೂ ಓದಿ:ರಾಷ್ಟ್ರಕವಿ, ವಿಶ್ವಮಾನವ ಕುವೆಂಪು ಅವರಿಗೆ ಅವಮಾನ ಮಾಡಿದ್ಯಾರು?: ಕಾಂಗ್ರೆಸ್ ಟೀಕಿಸಿದ ಬಿಜೆಪಿ

ABOUT THE AUTHOR

...view details