ಕರ್ನಾಟಕ

karnataka

ETV Bharat / city

ಉಪ ಚುನಾವಣೆ ಫಲಿತಾಂಶದ ಅವಲೋಕನ: ಪ್ರಮುಖ ವಿಷಯಗಳ ಕುರಿತೂ ಸಭೆ ನಡೆಸಿದ ಬಿಜೆಪಿ - Belgaum Lok Sabha constituency

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅಂತರದ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಬಹಳ ಮುಂದಾಲೋಚನೆಯ ತಯಾರಿ ಮಾಡಿಕೊಂಡಿದ್ದರು. ಪ್ರಬಲ ಅಭ್ಯರ್ಥಿಯಾಗಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟದ ಫ್ಯಾಕ್ಟರ್, ಎಂಇಎಸ್ ಅಭ್ಯರ್ಥಿ ಕಾರಣ ಮತ ವಿಭಜನೆಯಿಂದಾಗಿ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಉಪ ಚುನಾವಣೆಯ ಸೋಲು- ಗೆಲುವಿನ ಕುರಿತು ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು..

BJP held a meeting on key issues, including by-election overview
BJP held a meeting on key issues, including by-election overview

By

Published : Jun 4, 2021, 8:56 PM IST

Updated : Jun 4, 2021, 9:02 PM IST

ಬೆಂಗಳೂರು: ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಹಿನ್ನೆಲೆ ರಾಜ್ಯ ಬಿಜೆಪಿ ಘಟಕ ಸಭೆ ನಡೆಸಿತು. ಉಪ ಚುನಾವಣಾ ಅವಲೋಕನ, ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಹೋಗಬೇಕು, ಕೊರೊನಾ ವಿಚಾರದಲ್ಲಿ ಸರ್ಕಾರದ ಕೈ ಬಲಪಡಿಸಬೇಕು ಎನ್ನುವುದು ಸೇರಿ ಹಲವು ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಹತ್ವದ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಡಿಸಿಎಂ ಅಶ್ವತ್ಥ್‌ ನಾರಾಯಣ್, ಸಚಿವರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಸಿದ್ದರಾಜು ಭಾಗವಹಿಸಿದ್ದರು. ಐದು ಪ್ರಮುಖ ವಿಷಯದ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.

ಉಪ ಚುನಾವಣಾ ಫಲಿತಾಂಶದ ಅವಲೋಕನ, ಮುಂಬರಲಿರುವ ಚುನಾವಣೆಗೆ ಸಿದ್ಧತೆ, ಕೊರೊನಾ ನಿರ್ವಹಣೆ, ಮೂರನೇ ಅಲೆಗೆ ಸಿದ್ಧತೆ, ಸಿ.ಪಿ ಯೋಗೇಶ್ವರ್ ವಿಷಯ, ಶಾಸಕರನ್ನು ವಿಶ್ವಾಸಕ್ಕೆ ಪಡೆದು ಆಡಳಿತ ನಡೆಸಬೇಕು, ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಹೋಗಬೇಕು ಎನ್ನುವ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.

ಉಪ ಚುನಾವಣೆ ಅವಲೋಕನ :ಬಸವಕಲ್ಯಾಣದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಂಘಟನಾತ್ಮಕ ಕೆಲಸ, ಪಕ್ಷದ ಪರ ಜನತೆಯ ಒಲವು-ಗೆಲ್ಲಲು ಅನುಕೂಲವಾಯಿತು. ಆದರೆ, ಮಸ್ಕಿಯಲ್ಲಿ ಆಡಳಿತ ವಿರೋಧಿ ಅಲೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕಾಂಗ್ರೆಸ್ ಅಭ್ಯರ್ಥಿ ಪರ ಅನುಕಂಪ, 5ಎ ಕೆನಾಲ್ ಕಾರ್ಯಸಾಧುವಲ್ಲ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‌ ನೀಡಿದ್ದ ಹೇಳಿಕೆಯಿಂದಾಗಿ ಸೋಲಬೇಕಾಯಿತು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅಂತರದ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಬಹಳ ಮುಂದಾಲೋಚನೆಯ ತಯಾರಿ ಮಾಡಿಕೊಂಡಿದ್ದರು. ಪ್ರಬಲ ಅಭ್ಯರ್ಥಿಯಾಗಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟದ ಫ್ಯಾಕ್ಟರ್, ಎಂಇಎಸ್ ಅಭ್ಯರ್ಥಿ ಕಾರಣ ಮತ ವಿಭಜನೆಯಿಂದಾಗಿ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಉಪ ಚುನಾವಣೆಯ ಸೋಲು- ಗೆಲುವಿನ ಕುರಿತು ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು.

ಕೊರೊನಾ ನಿಯಂತ್ರಣದ ಚರ್ಚೆ :ಕೊರೊನಾ 2ನೇ ಅಲೆಯ ನಿರ್ವಹಣೆ ಸಂಘಟನೆ ಹಾಗೂ ಸರ್ಕಾರದಿಂದ ಆಗಬೇಕಾಗಿದ್ದ ಪ್ರಮಾಣದಲ್ಲಿ ಆಗಿಲ್ಲ, ಈಗಲೂ ಕಾಲ ಮಿಂಚಿಲ್ಲ, ಈಗಿರುವ ಕಾರ್ಯವನ್ನೇ ಯಥಾವತ್ತಾಗಿ ಮುಂದುವರೆಸಿಕೊಂಡು ಕೆಲಸ ಮಾಡಬೇಕು.

ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಸೋಂಕು ನಿಯಂತ್ರಣಕ್ಕೆ ನೆರವಾಗಬೇಕು, ಸೋಂಕಿತರು ಮತ್ತು ಅವರ ಕುಟುಂಬಕ್ಕೆ ನೆರವು ಕೊಡಿಸಲು ಮುಂದಾಗಬೇಕು,ಸೋಂಕಿತರ ಕುಟುಂಬ ಗುರುತಿಸಬೇಕು. ರೋಗ ಲಕ್ಷಣ ಇಲ್ಲದೇ ಇದ್ದಲ್ಲಿ ಅಥವಾ ಕಡಿಮೆ ಇದ್ದಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೇರಿಸಲು ಮನವೊಲಿಸಬೇಕು.

ವೈದ್ಯಕೀಯ ಕಿಟ್ ಕೊಡುವುದು, ಸೋಂಕಿತರ ಕುಟುಂಬಸ್ಥರು, ಸಂಪರ್ಕಿತರ ತಪಾಸಣೆ ಮಾಡಿಸಬೇಕು, ಸದ್ಯ ಈ ರೀತಿ ಕೆಲಸ ಆಗುತ್ತಿವೆ, ಇದನ್ನು ಮುಂದುವರೆಸಬೇಕು. ಸಚಿವರು ಮತ್ತು ಶಾಸಕರು ಈ ಕಾರ್ಯಗಳನ್ನ ಮಾಡಲು ಕಾರ್ಯಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎನ್ನುವ ಸೂಚನೆ ನೀಡಲು ನಿರ್ಧಾರ ಕೈಗೊಳ್ಳಲಾಯಿತು.

ಮೂರನೇ ಅಲೆ ಬಗ್ಗೆ ಚರ್ಚೆ :ಮೂರನೇ ಅಲೆ ಎದುರಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಜ್ಞರ ವರದಿ ಬರುತ್ತಿದ್ದಂತೆ ಅದಕ್ಕೆ ಪೂರಕವಾಗಿ ಕ್ರಮಕೈಗೊಳ್ಳಲಿದೆ. ಆದರೆ, ನಮ್ಮ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏನಿದೆ? ಏನು ಬೇಕು ಎಂದು ಕಾರ್ಯಕರ್ತರು ಸಚಿವರ ಗಮನಕ್ಕೆ ತರಬೇಕು, ಪ್ರಕರಣ ಕಡಿಮೆ ಇದೆ ಎಂದು ಮೈಮರೆಯುವುದು ಬೇಡ, ನಿಯಂತ್ರಣಕ್ಕೆ ಪಕ್ಷದಿಂದಲೂ ಕೆಲಸ‌ ಮುಂದುವರೆಸಬೇಕು, ಕ್ರಿಯಾಶೀಲತೆಯಿಂದ ತೊಡಗಿಕೊಳ್ಳಬೇಕು. ಈ ವಿಚಾರದಲ್ಲಿ ಪಕ್ಷ, ಸರ್ಕಾರ ಒಟ್ಟಿಗೆ ಹೋಗಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಯಿತು.

ಸಿ.ಪಿ ಯೋಗೀಶ್ವರ್ ವಿಷಯ ಚರ್ಚೆ :ಸಚಿವ ಸಿ.ಪಿ ಯೋಗೇಶ್ವರ್ ಸರ್ಕಾರದ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆ, ಕೆಲ ಶಾಸಕರ ಅಸಮಾಧಾನದ ಬಗ್ಗೆ ಚರ್ಚೆಯಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಈ ವಿಷಯ ಬಿಡಲಾಗಿದೆ. ಸದ್ಯದಲ್ಲೇ ಅವರು ಸಿಎಂ ಜೊತೆ ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಯಿತು.

ಶಾಸಕರ ಬೇಡಿಕೆ ಈಡೇರಿಸಬೇಕು :ಎಲ್ಲಾ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ಪಡೆದು ಅವರ ಕೆಲಸಗಳ ಬೇಡಿಕೆಗೆ ಸ್ಪಂದಿಸಬೇಕು. ಅವರಿಂದ ಅವಕಾಶವಿರುವ ಎಲ್ಲ ಕೆಲಸ ಮಾಡಿ ಕೊಡಬೇಕು, ಸಚಿವರನ್ನು ಮೀರಿದ ಬೇಡಿಕೆ ಅಥವಾ ತಾಂತ್ರಿಕ ಸಮಸ್ಯೆ ಇರುವ ವಿಷಯದಲ್ಲಿ ಸಿಎಂ ಜೊತೆ ಚರ್ಚಿಸಿ ಆದಷ್ಟು ಬೇಗ ಆ ಕೆಲಸಗಳನ್ನು ಮಾಡಿಕೊಡಬೇಕು. ಅಪಸ್ವರಕ್ಕೆ ಅವಕಾಶ ಮಾಡಿಕೊಡದೆ, ನಿರ್ಲಕ್ಷ್ಯ ಮಾಡದೇ ಸಚಿವರು, ಶಾಸಕರ ಬೇಡಿಕೆಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಬೇಕೆಂದು ನಿರ್ಧರಿಸಲಾಯಿತು.

Last Updated : Jun 4, 2021, 9:02 PM IST

ABOUT THE AUTHOR

...view details