ಕರ್ನಾಟಕ

karnataka

ETV Bharat / city

ಮುಂದುವರೆದ ಬಿಜೆಪಿ-ಕಾಂಗ್ರೆಸ್ ದಲಿತ ಟ್ವೀಟ್ ವಾರ್: ಸಿದ್ದರಾಮಯ್ಯ ಅವರದ್ದು ಬಣ್ಣದ ತಗಡಿನ ತುತ್ತೂರಿ ಎಂದ ಬಿಜೆಪಿ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ದಲಿತರು ಎಂದರೆ ಕೇವಲ ಮತಬ್ಯಾಂಕ್. ಈ ಕಾರಣಕ್ಕಾಗಿಯೇ ತಮ್ಮ ಸರ್ಕಾರವಿದ್ದಾಗ ದಲಿತ ಸಮುದಾಯದ ಅಭಿವೃದ್ಧಿಗೆ ಹಣ ನೀಡಿದ್ದೇನೆ ಎಂದು ಹೇಳುತ್ತಾರೆ. ಆಂತರ್ಯದಲ್ಲಿ ದಲಿತ ನಾಯಕರನ್ನು ತುಳಿದು ಅಧಿಕಾರಕ್ಕೆ ಏರುತ್ತಾರೆ. ಸಿದ್ದರಾಮಯ್ಯ ಅವರದ್ದು ಬಣ್ಣದ ತಗಡಿನ ತುತ್ತೂರಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

continued bjp and congress tweet war
ಬಿಜೆಪಿ- ಕಾಂಗ್ರೆಸ್ ದಲಿತ ಟ್ವೀಟ್ ವಾರ್

By

Published : Nov 4, 2021, 1:28 PM IST

Updated : Nov 4, 2021, 1:43 PM IST

ಬೆಂಗಳೂರು:ಬಿಜೆಪಿ ಮತ್ತು ಕಾಂಗ್ರೆಸ್​ ಮಧ್ಯೆ ಟ್ವೀಟ್​ ವಾರ್​ ಮತ್ತೆ ಮುಂದುವರಿದಿದೆ. ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎಂದು ಟೀಕಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ತಾನೊಬ್ಬ ಅಹಿಂದ ನಾಯಕ ಎಂದು ಅಧಿಕಾರಕ್ಕೆ ಬಂದ ಮೇಲೆ ದಲಿತ ಸಮುದಾಯದ ಪರವಾಗಿ ಕೆಲಸ ಮಾಡುವುದು ನಿಮ್ಮ ಕರ್ತವ್ಯ. ಅದರಲ್ಲಿ ಹೆಚ್ಚುಗಾರಿಕೆ ಮೆರೆಯುವ ಅಗತ್ಯವಿಲ್ಲ. ನಾನೇ ಮಾಡಿದ್ದು ಎಂದು ಬೀಗುವಾಗ ಹತ್ತು ಬಾರಿ ಯೋಚಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಟ್ವೀಟ್​ ಮೂಲಕ ಟಾಂಗ್ ನೀಡಿದೆ.

ಎಷ್ಟು ಬಾರಿ ಹಳೆ ಕತೆ ಹೇಳುತ್ತೀರಿ ಸ್ವಾಮಿ? ಜನ ಹೊಸದನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಂದೆ ನಿಂತು "ದಲಿತರನ್ನು ಮುಖ್ಯಮಂತ್ರಿ" ಮಾಡುತ್ತೇನೆ ಎಂದು ಹೇಳಿ ನೋಡೋಣ. ಆಗ ನಿಮ್ಮ ದಲಿತ ಪ್ರೇಮವನ್ನು ಒಪ್ಪಿಕೊಳ್ಳೋಣ ಎಂದು ಟ್ವೀಟ್ ಮಾಡಿ ಟೀಕಿಸಿದೆ.

ಮತಬ್ಯಾಂಕ್​ ಆಗಿ ಬಳಕೆ:

ಸಿದ್ದರಾಮಯ್ಯನವರಿಗೆ ದಲಿತರು ಎಂದರೆ ಕೇವಲ ಮತಬ್ಯಾಂಕ್. ಈ ಕಾರಣಕ್ಕಾಗಿಯೇ ತಮ್ಮ ಸರ್ಕಾರವಿದ್ದಾಗ ದಲಿತ ಸಮುದಾಯದ ಅಭಿವೃದ್ಧಿಗೆ ಹಣ ನೀಡಿದ್ದೇನೆ ಎಂದು ಹೇಳುತ್ತಾರೆ. ಆಂತರ್ಯದಲ್ಲಿ ದಲಿತ ನಾಯಕರನ್ನು ತುಳಿದು ಅಧಿಕಾರಕ್ಕೆ ಏರುತ್ತಾರೆ. ಸಿದ್ದರಾಮಯ್ಯ ಅವರದ್ದು ಬಣ್ಣದ ತಗಡಿನ ತುತ್ತೂರಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸಿದ್ದರಾಮಯ್ಯನವರೇ, ದಲಿತ ಪರ ಕಾಳಜಿ ಮೆರೆದಿದ್ದೀರಲ್ಲವೇ? ಹಾಗಾದರೆ, ಕೊರಟಗೆರೆಯಲ್ಲಿ ದಲಿತ ನಾಯಕ ಡಾ.ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದು‌ ಯಾರು? ಮುಖ್ಯಮಂತ್ರಿಯಾಗುವುದಕ್ಕೆ ಪರಮೇಶ್ವರ್‌ ಅವರು ಅಡ್ಡಿಯಾಗುತ್ತಾರೆ ಎನ್ನುವ ಕಾರಣಕ್ಕೆ ನೀವೇ ಸೋಲಿಸಿದ್ದಲ್ಲವೇ? ಸತ್ಯದರ್ಶನ ಮಾಡಿಸುವಿರಾ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದೆ.

ಎಲ್ಲವೂ ಹೊಟ್ಟೆಪಾಡಿಗಾಗಿ:
ನೀವು ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಿತೂರಿ ಮಾಡಿ ದೆಹಲಿಗೆ ಸಾಗಹಾಕಿದ್ದು, ದಲಿತ ನಾಯಕ ಡಾ.ಮಹಾದೇವಪ್ಪ ಅವರನ್ನು ದೂರವಿಟ್ಟಿದ್ದು, ಡಾ.ಜಿ. ಪರಮೇಶ್ವರ್‌ ಅವರ ಏಳಿಗೆ ಸಹಿಸದ್ದು, ಈಗ ನೀವು ದಲಿತ ಪರ ಹೇಳಿಕೆ ನೀಡುತ್ತಿರುವುದೂ ಹೊಟ್ಟೆಪಾಡಿಗಾಗಿಯೇ? ಎಂದು ದಲಿತ ವಿರೋಧಿ ಸಿದ್ದರಾಮಯ್ಯ ಹ್ಯಾಷ್ ಟ್ಯಾಗ್ ಬಳಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

Last Updated : Nov 4, 2021, 1:43 PM IST

ABOUT THE AUTHOR

...view details