ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೌನವಾಗಿರೋದ್ಯಾಕೆ? ಎಂಬ ಪ್ರಿಯಾಂಕ್ ಖರ್ಗೆ (priyank kharge) ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ್ (Minister BC patil), ಎಲ್ಲರ ಹೇಳಿಕೆಗಳಿಗೆ ರಾಜ್ಯಾಧ್ಯಕ್ಷರು ಉತ್ತರ ಕೊಡಲು ಆಗಲ್ಲ. ಇನ್ನೂ ದೊಡ್ಡ ಖರ್ಗೆಯವರು ಹೇಳಿದ್ರೆ ಹೇಳಬಹುದು. ಒಂದು ಲೆವಲ್ ಅಂತ ಇರುತ್ತದೆ. ಈಗಿನ್ನೂ 2ನೇ ಬಾರಿ ಎಂಎಲ್ಎ ಆಗಿರುವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಚಿವರು, ಬಿಟ್ ಕಾಯಿನ್ (Bitcoin Scam) ಅನ್ನುವ ಬದಲು ಬೆಟ್ ಕಾಯಿನ್ ಪ್ರಕರಣ ಎನ್ನಬೇಕು. ಕಾಂಗ್ರೆಸ್ನವರು ಅದರ ಮೇಲೆ ಬೆಟ್ ಮಾಡೋಕೆ ಹೊರಟಿದ್ದಾರೆ. ಅದನ್ನ ಉಪಯೋಗಿಸಿಕೊಂಡು ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದರು.
ದಾಖಲೆ ಇದ್ದರೆ ಬಿಡುಗಡೆ ಮಾಡಲಿ:
2018ರಲ್ಲಿ ಬಿಟ್ ಕಾಯಿನ್ ಹಗರಣ ಆಗಿತ್ತು ಅಂತ ಹೇಳುತ್ತಿದ್ದಾರೆ. ಹಾಗಿದ್ದರೆ ಆಗ ಯಾಕೆ ಆಗ ಸುಮ್ಮನೆ ಕೂತಿದ್ದರು. ಚುನಾವಣೆ ಹತ್ತಿರ ಬರುತ್ತಿದೆ ಅಂತ ಹೀಗೆಲ್ಲಾ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇಬ್ಬರು ಪ್ರಭಾವಿಗಳಿದ್ದರೆ ಹೇಳಲಿ. ಇದಕ್ಕೆ ಹರ್ಬಿ ಹಾವು ಅಂತಾರೆ. ಹಾವು ಬಿಟ್ಟು ಬಿಡ್ತೀನಿ ಹಾವು ಬಿಟ್ಟು ಬಿಡ್ತೀನಿ ಅಂತಿದಾರೆ.
ಇದ್ರೆ ಬಿಡಲಿ. ಅವರಿಗೆ ಯಾರು ತಡೆ ಹಾಕಿದ್ದಾರೆ. ಸುಮ್ಮನೆ ಗುಮ್ನನಗುಸ್ಕನ ತರಹ ಇವತ್ತ್ ಹೇಳ್ತೀನಿ, ನಾಳೆ ಹೇಳ್ತೀನಿ ಎನ್ನುತ್ತಿದ್ದಾರೆ. ನಾಳೆ ಬಾ ಅನ್ನೋ ಒಂದು ಕಥೆ ಇದೆ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಇದು ಒಂಥರಾ ಬ್ಲಾಕ್ ಮೇಲ್. ಇಬ್ಬರ ಹೆಸರಿದೆ ಅಂತ ಬ್ಲಾಕ್ ಮೇಲಿಂಗ್ ಮಾಡ್ತಿದ್ದಾರಾ?. ಏನ್ ರೋಲ್ ಕಾಲ್ ಮಾಡ್ತಿದ್ದಾರಾ ಅಥವಾ ಬ್ಲ್ಯಾಕ್ ಮೇಲಿಂಗ್ ಮಾಡ್ತಿದ್ದಾರಾ ಗೊತ್ತಿಲ್ಲ. ಏನು ಅವರರ ಉದ್ದೇಶ ಅಂತ?. ಹೆಸರು ಗೊತ್ತಿದ್ದರೆ ಹೇಳಲಿ ಎಂದು ಆಗ್ರಹಿಸಿದರು.
ಆರೋಪ ಮಾಡೋದು ಕಾಂಗ್ರೆಸ್ನ ಆಜನ್ಮ ಸಿದ್ಧ ಹಕ್ಕು: