ಬೆಂಗಳೂರು:ಪ್ರಶ್ನೋತ್ತರ ಕಲಾಪದ ವೇಳೆ ಜನ್ಮದಿನದ ವಿಷಯ ಪ್ರಸ್ತಾಪವಾಗಿ ವಿಧಾನಸಭೆಯಲ್ಲಿ ಹಾಸ್ಯ ಪ್ರಸಂಗ ನಡೆಯಿತು.
ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಪ್ರಶ್ನೋತ್ತರ ವೇಳೆ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಈ ಮಧ್ಯೆ ಕಾಂಗ್ರೆಸ್ ಸದಸ್ಯ ಕೃಷ್ಣಭೈರೇಗೌಡ ಅವರು ಎದ್ದು ನಿಂತು, ಇಂದು ಸೌಮ್ಯಾ ರೆಡ್ಡಿ ಅವರ ಹುಟ್ಟುಹಬ್ಬ ಎಂದು ಸ್ಪೀಕರ್ ಅವರ ಗಮನಕ್ಕೆ ತಂದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಎಲ್ಲ ಸದಸ್ಯರ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಈ ವೇಳೆ ಹುಣಸೂರು ಶಾಸಕ ಮಂಜುನಾಥ್ ಮಾತನಾಡಿ, ಈ ಹಿಂದೆ ಸದನ ನಡೆಯುವ ಸಂದರ್ಭದಲ್ಲಿ ಶಾಸಕರ ಜನ್ಮದಿನವಿದ್ದರೆ ಹೂಗುಚ್ಛ ನೀಡಿ ಶುಭಾಶಯ ಕೋರುತ್ತಿದ್ದರು. ಈ ಪದ್ಧತಿಯನ್ನು ಮತ್ತೆ ಮುಂದುವರಿಸುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿದರು.