ಬೆಂಗಳೂರು :ನಗರದಲ್ಲಿ ಯುವಕರ ಪುಂಡಾಟ ಇನ್ನೂ ನಿಂತಿಲ್ಲ. ವಾಹನ ತಪಾಸಣೆ ಮಾಡುವ ಪೊಲೀಸರಿಗೂ ಕ್ಯಾರೇ ಎನ್ನದ ಪುಂಡರು ಕುಡಿದು ಪೊಲೀಸರ ಮೇಲೆಯೇ ಬೈಕ್ ಹತ್ತಿಸಿದ್ದಾರೆ.
ರಾತ್ರಿ ತಪಾಸಣೆಗೆ ನಿಂತಿದ್ದ ಪೊಲೀಸರ ಮೇಲೆಯೆ ಬೈಕ್ ಹತ್ತಿಸಿದ ಪುಂಡರು : ಸಿಸಿಟಿವಿ ದೃಶ್ಯ ಸೆರೆ - ರಾತ್ರಿ ತಪಾಸಣೆಗೆ ನಿಂತಿದ್ದ ಪೊಲೀಸರ ಮೇಲೆಯೆ ಬೈಕ್ ಹತ್ತಿಸಿದ ಪುಂಡರು
ಸೆ.10ರಂದು ಮಧ್ಯ ರಾತ್ರಿ ಸುಮಾರು 12.45ಕ್ಕೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಪುಂಡರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ..
ಸಿಸಿಟಿವಿ ದೃಶ್ಯ
ರಾತ್ರಿ ವೇಳೆ ವಾಹನ ತಪಾಸಣೆಗೆ ನಿಂತಿದ್ದ ಪೊಲೀಸ್ ಕಾನ್ಸ್ಸ್ಟೇಬಲ್ ಮೇಲೆ ಸವಾರ ಬೈಕ್ ಹತ್ತಿಸಿಕೊಂಡು ಹೋಗಿದ್ದಾನೆ. ಬೈಕ್ ಗುದ್ದಿದ ರಭಸಕ್ಕೆ ಪೊಲೀಸ್ ಪೇದೆ ಹಾರಿ ಬಿದ್ದಿದಾನೆ. ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೆ.10ರಂದು ಮಧ್ಯ ರಾತ್ರಿ ಸುಮಾರು 12.45ಕ್ಕೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಪುಂಡರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.