ಬೆಂಗಳೂರು :ಮನೆಗಳ ಮುಂದೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿ 2.37 ಲಕ್ಷ ರೂ. ಮೌಲ್ಯದ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಗರ ನಿವಾಸಿ ಶೇಖ್ ಮುದಾಸೀರ್ ಅಹಮದ್ (33) ಮತ್ತು ಶಿವಾಜಿನಗರದ ಸೈಯದ್ ನಾಜೀಮ್ (25) ಬಂಧಿತರು.
ಫೆಬ್ರವರಿ 28ರಂದು ರಾತ್ರಿ ಅಗ್ರಹಾರ ಬಡಾವಣೆಯ ಮನೆಯೊಂದರ ಮುಂಭಾಗದಲ್ಲಿ ನಿಲ್ಲಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.