ಬೆಂಗಳೂರು: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ದ್ವಿಚಕ್ರ ವಾಹನದ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೆಬ್ಬಾಳ ಬಳಿ ನಡೆದಿದೆ.
ಬೆಂಗಳೂರಲ್ಲಿ ಭೀಕರ ಅಪಘಾತ: ಬೈಕ್ ಸವಾರನ ತಲೆಯ ಮೇಲೆ ಹರಿದ ಲಾರಿ - ಬೆಂಗಳೂರಿನಲ್ಲಿ ಅಪಘಾತ
ಲಾರಿ ಚಕ್ರವೊಂದು ಬೈಕ್ ಹಿಂಬದಿ ಸವಾರನ ತಲೆ ಮೇಲೆ ಹರಿದು, ಸವಾರ ಮೃತಪಟ್ಟ ಘಟನೆ ಹೆಬ್ಬಾಳದ ಬಳಿ ಬೆಳ್ಳಂಬೆಳಗ್ಗೆ ಸಂಭವಿಸಿದೆ.
![ಬೆಂಗಳೂರಲ್ಲಿ ಭೀಕರ ಅಪಘಾತ: ಬೈಕ್ ಸವಾರನ ತಲೆಯ ಮೇಲೆ ಹರಿದ ಲಾರಿ accident](https://etvbharatimages.akamaized.net/etvbharat/prod-images/768-512-11853031-thumbnail-3x2-bng.jpg)
ಅಪಘಾತ
ರಂಗನಾಥ್ ಮೃತ ವ್ಯಕ್ತಿ. ಮಂಜುನಾಥ್ ಮತ್ತು ರಂಗನಾಥ್ ದ್ವಿಚಕ್ರವಾಹನದಲ್ಲಿ ವೀರಣ್ಣಪಾಳ್ಯದಿಂದ ಹೆಬ್ಬಾಳದ ಕಡೆ ಹೋಗುತ್ತಿದ್ದರು. ಈ ವೇಳೆ ಮಾರ್ಗದಲ್ಲಿ ಅಪಘಾತ ಸಂಭವಿಸಿ, ಹಿಂಬದಿ ಸವಾರನ ತಲೆಯ ಮೇಲೆ ಲಾರಿ ಹರಿದಿದೆ. ಪರಿಣಾಮ ರಂಗನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮಂಜುನಾಥ್ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.