ಕರ್ನಾಟಕ

karnataka

ETV Bharat / city

ಪೊಲೀಸರೊಂದಿಗೆ ರಂಪಾಟ ನಡೆಸಿದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ - ದಿವ್ಯಾ ಸುರೇಶ್ ಪೊಲೀಸರೊಂದಿಗೆ ಕಿರಿಕ್

ಕರ್ಫ್ಯೂ ಇದೆ ಮನೆಗೆ ತೆರಳಿ ಎಂದ ಕಾರಣಕ್ಕೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರು ಪೊಲೀಸರೊಂದಿಗೆ ರಂಪಾಟ ನಡೆಸಿದ್ದಾರೆ‌ ಎಂಬ ಆರೋಪ ಕೇಳಿಬಂದಿದೆ.

bigg-boss-fame-divya-suresh-in-mg-road
ಕುಡಿದು ರಂಪಾಟ ನಡೆಸಿದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್

By

Published : Dec 29, 2021, 12:24 AM IST

Updated : Dec 29, 2021, 11:51 AM IST

ಬೆಂಗಳೂರು: ಎಂ.ಜಿ.ರಸ್ತೆಯಲ್ಲಿ ಓಡಾಡುತ್ತಿದ್ದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರಿಗೆ ಮನೆಗೆ ತೆರಳಿ ಎಂದು ಹೇಳಿದ್ದಕ್ಕೆ ಪೊಲೀಸರೊಂದಿಗೆ ರಂಪಾಟ ನಡೆಸಿರುವ ಆರೋಪ ಕೇಳಿಬಂದಿದೆ.‌ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ಪುಂಡಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.‌ ಮತ್ತೊಂದೆಡೆ ಮಾಧ್ಯಮವೊಂದರ ಕ್ಯಾಮೆರಾ ಹೊಡೆದು ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪೊಲೀಸರೊಂದಿಗೆ ದಿವ್ಯಾ ಸುರೇಶ್ ವಾಗ್ವಾದ

ಲಾಂಗ್ ಡ್ರೈವ್ ಹೊರಟಿದ್ದವನ ಕಾರು ಸೀಜ್: ನೈಟ್ ಕರ್ಫ್ಯೂ ಇದ್ದರೂ ವ್ಯಕ್ತಿಯೊಬ್ಬ ಚಾಲನೆ ಮಾಡುತ್ತಿದ್ದ ಹುಂಡೈ ಕ್ರೇಟಾ ಕಾರನ್ನು ಉಪ್ಪಾರಪೇಟೆ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಗುಜರಾತ್ ಮೂಲದ ರಾಶೀಶ್ ಕುಮಾರ್ ಎಂಬಾತನ ಕಾರನ್ನು ಪೊಲೀಸರು‌ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ದಿವ್ಯಾ ಸುರೇಶ್

ಹೆಚ್ಎಸ್ಆರ್ ಲೇಔಟ್​​ನಿಂದ ಮೆಜೆಸ್ಟಿಕ್ ಬಂದಿದ್ದ ಚಾಲಕ ನಂದಿಬೆಟ್ಟಕ್ಕೆ ನೈಟ್ ಔಟ್ ಹೋಗಲು ಮುಂದಾಗಿದ್ದನು. ಈ ವೇಳೆ ಮೆಜೆಸ್ಟಿಕ್​ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಉಪ್ಪಾರಪೇಟೆ ಸಂಚಾರಿ ಪೊಲೀಸರ ಕೈಗೆ ಚಾಲಕ ಸಿಕ್ಕಿಬಿದ್ದಿದ್ದಾನೆ. ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಗೊತ್ತಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಪ್ರಕರಣದ ಅಡಿ ಉಪ್ಪಾರಪೇಟೆ ಪೊಲೀಸರು ಕೇಸ್ ದಾಖಲಿಸಿ, ಕಾರನ್ನು ಸೀಜ್ ಮಾಡಿದ್ದಾರೆ.

ಪೊಲೀಸರಿಂದ ತಪಾಸಣೆ:ಒಮಿಕ್ರಾನ್ ಸೋಂಕು ಭೀತಿಯಿಂದ ಜನದಟ್ಟಣೆ ನಿಯಂತ್ರಿಸಲು ಮಂಗಳವಾರದಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಪೊಲೀಸರು ರಾತ್ರಿ 10 ಗಂಟೆ ಆಗುತ್ತಿದ್ದಂತೆ ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಿದರು‌.

ಮೊದಲ ದಿನವಾಗಿದ್ದರಿಂದ 9 ಗಂಟೆಯಿಂದಲೇ ಹೊಯ್ಸಳ ಮೂಲಕ ಅಂಗಡಿ-ಮುಂಗಟ್ಟು ಮುಚ್ಚುವಂತೆ ಮೈಕ್​ನಲ್ಲಿ ಪೊಲೀಸರು ಅನೌನ್ಸ್ ಮಾಡಿದರು. ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆಯಂತೆ ಅನಾವಶ್ಯಕವಾಗಿ ಓಡಾಡುತ್ತಿದ್ದವರಿಗೆ ವಾರ್ನ್ ಮಾಡಿ ಬಿಟ್ಟು ಕಳುಹಿಸುವುದು ಕೂಡಾ ಕಂಡು ಬಂತು.

ಇದನ್ನೂ ಓದಿ:ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಜ್ವರ; ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್‌

Last Updated : Dec 29, 2021, 11:51 AM IST

ABOUT THE AUTHOR

...view details