ಕರ್ನಾಟಕ

karnataka

ETV Bharat / city

ಖಾಕಿಗೂ ತಟ್ಟಿದ ಕೊರೊನಾ ಬಿಸಿ: ನಗರ ಪೊಲೀಸ್​​​ ಆಯುಕ್ತರಿಂದ ಸಿಬ್ಬಂದಿಗೆ ನಿರ್ದೇಶನ

ಪೊಲೀಸರಿಗೂ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಬೆಂಗಳೂರು ಮಹಾನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರು ಪೊಲೀಸ್​ ಸಿಬ್ಬಂದಿಗೆ ಕೆಲ ಸೂಚನೆಗಳನ್ನು ನೀಡಿದ್ದು, ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸಿದ್ದಾರೆ.

By

Published : May 25, 2020, 1:54 PM IST

bhaskar-rao-directions-to-police
ಪೊಲೀಸ್​ ಆಯುಕ್ತ

ಬೆಂಗಳೂರು: ಪೊಲೀಸರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್, ಪೊಲೀಸ್ ಠಾಣೆಗಳಿಗೆ ಕೆಲವು ನಿರ್ದೇಶನ ನೀಡಿದ್ದಾರೆ.

ಮಾರ್ಚ್​ ತಿಂಗಳಿಂದಲೇ ನಾವು ಎಲ್ಲಾ ಪೊಲೀಸ್​ ಠಾಣೆಯಲ್ಲೂ ಅರಿವು ಮೂಡಿಸಿದ್ವಿ. ಆದ್ರೆ ಮಹಾಮಾರಿ ಕೊರೊನಾ ವಾರಿಯರ್​​​​ಗಳನ್ನೂ ಬಿಡುತ್ತಿಲ್ಲ. ಸದ್ಯ ನಾವೆಲ್ಲರೂ ಜಾಗೃತರಾಗಿಬೇಕು. ಒಬ್ಬರನ್ನೊಬ್ಬರು ಕಾಪಾಡಿಕೊಳ್ಳಬೇಕು. ಉನ್ನತ ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಆರೋಗ್ಯವಾಗಿರುವಂತೆ ನೋಡಿಕೊಂಡು ಒಬ್ಬರಿಗೊಬ್ಬರು ಸಹಕಾರ ನೀಡಬೇಕು.

ನಾವೆಲ್ಲಾ ಸರ್ಕಾರದ ಬಲ, ನಾವೇ ಸೋಂಕಿತರಾದರೆ ಹೇಗೆ? ಅದಕ್ಕಾಗಿ ಸೋಂಕು ಹರಡದಂತೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಠಾಣೆಯಲ್ಲಿಯೂ ಹಗ್ಗ ಕಟ್ಟಿ ಅಂತರ ಕಾಪಾಡಿಕೊಳ್ಳಬೇಕು. ಬಂದವರಿಗೆ ಸ್ಯಾನಿಟೈಸ್​ ಮಾಡಬೇಕು. ಈಗಾಗಲೇ ಠಾಣೆಯಲ್ಲಿರುವ ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಸೂಚನೆ ನೀಡಿದ್ದೇನೆ.

ಎಲ್ಲರೂ ಬಿಸಿ ನೀರು ಕುಡಿಯಿರಿ. ಅನಿವಾರ್ಯ ಇರುವ ಕೆಲವೊಂದು ಪೊಲೀಸ್ ಠಾಣೆಯಲ್ಲಿ ವಾಷಿಂಗ್ ಮೆಷಿನ್ ಕೂಡ ಇಡುತ್ತೇವೆ. ಸ್ವಚ್ಛ ಬಟ್ಟೆಗಳನ್ನ ಬಳಸಬೇಕು. ಹಾಗೆಯೇ ಸೋಂಕಿತ ಸಿಬ್ಬಂದಿಗೆ ಎಲ್ಲಾ ರೀತಿಯಲ್ಲಿ ಸೌಲಭ್ಯ ನೀಡುತ್ತೇವೆ. ಅವರ ಕುಟುಂಬಕ್ಕೂ ಒಳ್ಳೆಯ ಕಡೆ ಕ್ವಾರಂಟೈನ್ ಮಾಡಿಸುತ್ತಿದ್ದೇವೆ ಎಂದು ನಗರ ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ.

ABOUT THE AUTHOR

...view details