ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಿದರೆ ಒಳ್ಳೆಯದು: ಬಿಬಿಎಂಪಿ ಆಯುಕ್ತ

ನಗರದಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡುವುದರ ಜೊತೆಗೆ ನಗರವನ್ನು ಸುಂದರವಾಗಿ ಇಡಬೇಕಾಗಿರೋದು ಪಾಲಿಕೆಯ ಕೆಲಸ. ಆರೋಗ್ಯ ಇಲಾಖೆಯ ಅಭಿಪ್ರಾಯ ಕೇಳಿ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಆಯುಕ್ತರು ತಿಳಿಸಿದರು.

bbmp commissioner
ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಿದರೆ ಒಳ್ಳೆಯದು: ಬಿಬಿಎಂಪಿ ಆಯುಕ್ತ

By

Published : Nov 5, 2020, 3:17 AM IST

ಬೆಂಗಳೂರು: ವಾಯು ಮಾಲಿನ್ಯದಿಂದ ನಗರವನ್ನು ಕಾಪಾಡಲು ಪಟಾಕಿ ಬ್ಯಾನ್ ಮಾಡಿದರೆ ಒಳ್ಳೆಯದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಿದರೆ ಒಳ್ಳೆಯದು: ಬಿಬಿಎಂಪಿ ಆಯುಕ್ತ


ದೀಪಾವಳಿ ಹಬ್ಬದಲ್ಲಿ ಪಟಾಕಿ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ. ಪಾಲಿಕೆ ನಿರ್ಧಾರದ ಪ್ರಕಾರ ಮಾಲಿನ್ಯ ನಿಯಂತ್ರಣ ಮಾಡುವುದು ದೊಡ್ಡ ಸವಾಲಾಗಿದೆ. ಒಂದು ಕಡೆ ಮಾಲಿನ್ಯ, ಮತ್ತೊಂದು ಕಡೆ ಕೋವಿಡ್ ಮುನ್ನೆಚ್ಚರಿಕೆ ವೇಳೆ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ. ಹೀಗಾಗಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡುವ ವಿಚಾರ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.


ನಗರದಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡುವುದರ ಜೊತೆಗೆ ನಗರವನ್ನು ಸುಂದರವಾಗಿ ಇಡಬೇಕಾಗಿರೋದು ಪಾಲಿಕೆಯ ಕೆಲಸ. ಆರೋಗ್ಯ ಇಲಾಖೆಯ ಅಭಿಪ್ರಾಯ ಕೇಳಿ ಸರ್ಕಾರ ನಿರ್ಧಾರ ಮಾಡುತ್ತದೆ. ಅದಾದ ಮೇಲೆ ಪಾಲಿಕೆಯು ಸರ್ಕಾರದ ಆದೇಶವನ್ನ ಪಾಲಿಸುತ್ತೇವೆ ಎಂದಿದ್ದಾರೆ.

ABOUT THE AUTHOR

...view details