ಕರ್ನಾಟಕ

karnataka

ETV Bharat / city

ಹೊಸ ವರ್ಷ: ಹೋದ್ಯಾ ಕೊರೊನಾ ಅಂದ್ರೆ ಬಂದೆ ಅಂತು ಒಮಿಕ್ರಾನ್.. ಹಿಸ್ಟರಿ ರಿಪೀಟ್ಸ್​! - 2021ರ ಕರ್ನಾಟಕ ಕೋವಿಡ್ ಸಂಬಂಧಿ ಸುದ್ದಿಗಳು

ಹೊಸ ವರ್ಷಕ್ಕೆ ಕಾಲಿಡುವ ಹೊತ್ತಿನಲ್ಲಿ ಒಮಿಕ್ರಾನ್ ಎಂಟ್ರಿ ಕೊಟ್ಟು ಸಂಭ್ರಮಕ್ಕೆ ಕೊಕ್ಕೆ ಹಾಕಿದೆ. ಇನ್ನು 2021ರಲ್ಲಿ ಕೊರೊನಾದಿಂದ ಉಂಟಾದ ರಾದ್ಧಾಂತಗಳ ಕಿರುನೋಟ ಇಲ್ಲಿದೆ..

Year End Story
Year End Story

By

Published : Dec 25, 2021, 4:37 PM IST

Updated : Dec 25, 2021, 5:08 PM IST

ಬೆಂಗಳೂರು: ಹಳೆಯ ಕಹಿ ನೆನಪುಗಳನ್ನ ಮರೆತು ಹೊಸ ವರ್ಷಕ್ಕೆ ಅಣಿಯಾಗುತ್ತಿರುವ ಹೊತ್ತಲ್ಲೇ ಹೋದ್ಯಾ ಪಿಶಾಚಿ ಅಂದ್ರೆ ಮತ್ತೆ ಮತ್ತೆ ಬರ್ತಾನೆ ಇರ್ತಿನಿ ಅಂತಿದೆ ಕೊರೊನಾ ರೂಪಾಂತರಿ ತಳಿ. ಹೌದು, ಹೊಸ ವರ್ಷದ ಸಂಭ್ರಮಕ್ಕೆ ದಿನಗಳ ಲೆಕ್ಕ ಹಾಕುತ್ತಿದ್ದರೆ, ಇತ್ತ ಆರೋಗ್ಯ ವಲಯದಲ್ಲಿ ಹೊಸ ತಳಿಗಳ ನಿಯಂತ್ರಣಕ್ಕೆ ಸರ್ಕಾರ ಅಣಿಯಾಗುವ ಸಂದರ್ಭ ಸೃಷ್ಟಿಯಾಗಿದೆ. ಕಳೆದ ಎರಡು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಸಂಚಲನ ಮುಂದಿನ ನವ ವಂಸತಕ್ಕೂ ಮುಂದುವರೆಯಲಿದ್ದು, ಜನರು ಆತಂಕದಲ್ಲೇ ಹೊಸ ವರ್ಷವನ್ನ ಸ್ವಾಗತಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕಣ್ಮುಚ್ಚಿ ಕಣ್ಣು ತೆಗೆಯೋ ವೇಳೆಗೆ 2021ರ ವರುಷ ಉರುಳಿದೆ. ಹಿಂದೆ ತಿರುಗಿ ನೋಡಿದರೆ ಅಲ್ಲಿ ವರ್ಷದ ಮೊದಲ ಮಾಸದಲ್ಲೇ ಕೊರೊನಾದ ಶಕ್ತಿಶಾಲಿ ಡೆಲ್ಟಾ ಸೋಂಕು ಆರ್ಭಟಿಸಿ ಅದೆಷ್ಟೋ ಸಾವು-ನೋವಿಗೆ ಕಾರಣವಾಯ್ತು. ಅಸ್ತ್ರವಾಗಿ ಲಸಿಕೆ ಬಂದರೂ ಮೊದ ಮೊದಲು ನಿರಾಕರಿಸಿದ ಜನ ನಂತರ ಕ್ಯೂನಲ್ಲಿ ನಿಂತು ಲಸಿಕೆ ಪಡೆದ ಘಟನೆಗಳು ನಡೆದವು.

ಇನ್ನೇನು ಡೆಲ್ಟಾ ಮಾರಿ ಕಡಿಮೆ ಆಯ್ತು ಎನ್ನುವಾಗಲೇ ಸದ್ದು-ಗದ್ದಲ ಇಲ್ಲದೇ ವರ್ಷದ ಕೊನೆ ಗಳಿಗೆಯಲ್ಲಿ ಒಮಿಕ್ರಾನ್ ಕಾಲಿಟ್ಟಿದೆ. ಹಾಗಾದರೆ ಕಳೆದು ಹೋಗಿರುವ ವರ್ಷದಲ್ಲಿ ಆರೋಗ್ಯ ವಲಯದಲ್ಲಿ ಏನೆಲ್ಲ ಆಯ್ತು, ಡೆಲ್ಟಾ ಕಂಟ್ರೋಲ್​​ಗೆ ಇಲಾಖೆ ಮಾಡಿದ ಪ್ಲಾನ್ ಏನು? ವರ್ಷದ ನೆನೆಪಿನ ಬುತ್ತಿಯ ಒಂದು ವಿವರ ಇಲ್ಲಿದೆ..

  • ಎರಡನೇ ಅಲೆಯ ಆರ್ಭಟಕ್ಕೆ 5 ಕ್ಕಿಂತ ಹೆಚ್ಚು ಕೊರೊನಾ ಕೇಸ್​​ಗಳು ಪತ್ತೆಯಾದರೆ ಅದು ಕಂಟೈನ್​​ಮೆಂಟ್ ಜೋನ್ ಅಂತ ಘೋಷಿಸಲಾಗಿತ್ತು.
  • ಕೋವಿಡ್ ಲಸಿಕೆ ಕುರಿತು ಜನಜಾಗೃತಿ ಮೂಡಸಿಲು ವ್ಯಂಗ್ಯ ಚಿತ್ರ ಪ್ರದರ್ಶನ
  • ಕೋವಿಡ್ ಸಮಯದಲ್ಲಿ ಆಕ್ಸಿಜನ್ ಸಂಕಷ್ಟ ಅನುಭವಿಸಿದ್ದ ಕಿಮ್ಸ್ ಆಸ್ಪತ್ರೆ ನಂತರ ಆಕ್ಸಿಜನ್ ಪ್ಲಾಂಟ್ ನಿರ್ಮಾಣ
  • ದೇಶದಲ್ಲೇ ಮೊದಲ ಪ್ರಯೋಗವಾಗಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ಲೋಕಾರ್ಪಣೆ
  • ಕೋವಿಡ್ ಸಮಯದಲ್ಲಿ ನೇಮಕಾತಿ ಮಾಡಿದ್ದ ಗುತ್ತಿಗೆ ಹೊರಗುತ್ತಿಗೆ ನೌಕರರ ಅವಧಿ ವಿಸ್ತರಣೆ
  • ಕೇರಳ-ಮಹಾರಾಷ್ಟ್ರದಿಂದ ಬರುವ ಚಾಲಕರಿಗೆ 15 ದಿನಗಳಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ, ರಿಪೋರ್ಟ್ ನೆಗೆಟಿವ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ
  • ಎರಡನೇ ಅಲೆಯ ಆರ್ಭಟಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆಗಳಿಗೆ ಅವಕಾಶ ಇರಲಿಲ್ಲ
  • ದಿನಕ್ಕೆ 1 ಲಕ್ಷ ಆರ್​ಟಿಪಿಸಿಆರ್‌ ಟೆಸ್ಟ್ ನಡೆಸಿದ್ದ ಆರೋಗ್ಯ ಇಲಾಖೆ
  • ಸ್ವ್ಯಾಬ್ ಕಿಟ್​​ಗಳ ದುರುಪಯೋಗ: ಕರ್ತವ್ಯ ಲೋಪದಿಂದ ಕೊಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ವೈದ್ಯಾಧಿಕಾರಿ ಅಮಾನತು
  • ರೆಮ್ಡಿಸಿವಿರ್ ಔಷಧಕ್ಕೆ ಬೇಡಿಕೆ ಹೆಚ್ಚಾಗಿ ರಾಜ್ಯದಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ನಿಯಂತ್ರಿಸಲು ವಾರ್ ರೂಂ ರಚನೆ
  • ಎರಡನೇ ಅಲೆಯಲ್ಲಿ ಹಾಸಿಗಳ ಕೊರತೆ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಶೇ.50 ರಷ್ಟು ಬೆಡ್ ಮೀಸಲಿಗೆ ಆದೇಶ. ಆದೇಶ ಪಾಲಿಸದ ಖಾಸಗಿ ಆಸ್ಪತ್ರೆಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ
  • ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡದೇ ಹೋದ್ರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ - ಸಚಿವರಿಂದ ವಾರ್ನಿಂಗ್
  • ರಾಜಧಾನಿಯಲ್ಲಿ ಕೊರೊನಾ ರಣಕೇಕೆ ಹಿನ್ನೆಲೆ 118 ಖಾಸಗಿ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು
  • ಕೋವಿಡ್ ಟೆಸ್ಟ್ ರಿಸ್ಟಲ್ 24 ಗಂಟೆಯೊಳಗೆ ನೀಡುವಂತೆ ಇಲಾಖೆ ಸೂಚನೆ
  • ಏಪ್ರಿಲ್​​ನಲ್ಲಿ ಕೊರೊನಾ ಸ್ಫೋಟ, ದಿನಕ್ಕೆ 30 ಸಾವಿರ ಕೇಸ್. ಹಾಸಿಗೆ ಕೊರತೆ ನೀಗಿಸಲು ಕಡಿಮೆ, ರೋಗ ಲಕ್ಷಣ ಇರುವವರ ಡಿಸ್ಚಾರ್ಜ್ ಮಾಡಲು ಸರ್ಕಾರ ಸೂಚನೆ
  • Search My Bed ಪೋರ್ಟಲ್ ಮೂಲಕ ಖಾಸಗಿ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಮಾಹಿತಿ
  • ರಾಜಧಾನಿಯಲ್ಲಿರುವ ಆಸ್ಪತ್ರೆಗಳ ಬೆಡ್ ಹಂಚಿಕೆ ಪಾರದರ್ಶಕತೆಗಾಗಿ ನೋಡಲ್ ಆಫೀಸರ್ ನೇಮಕ
  • ಎರಡನೇ ಅಲೆಯ ತೀವ್ರತೆ ಹಿನ್ನೆಲೆ ವೈದ್ಯಕೀಯ ಮತ್ತು ಕುಟುಂಬಕ್ಕೆ ಶೇ.10ರಷ್ಟು ಹಾಸಿಗೆ ಮೀಸಲು
  • ಸಿಟಿ ಸ್ಕ್ಯಾನಿಂಗ್ ದುಬಾರಿ ದರಕ್ಕೆ ಕಡಿವಾಣ ಹಾಕಿ ಹೆಚ್ಚು ವಸೂಲಿ ಮಾಡಿದರೆ ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ
  • ಕೊರೊನಾ ಚಿಕಿತ್ಸೆ ಪಡೆಯಲು ಯಾವುದೇ RT-PCR ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ ಎಂಬ ಆದೇಶ
  • ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ ಪೋರ್ಟಲ್​​ನಲ್ಲಿ ಆಮ್ಲಜನಕ, ರೆಮ್ಡಿಸಿವರ್ ಜೊತೆ ಬೆಡ್‌ಗಳ ಮಾಹಿತಿ ಲಭ್ಯ
  • ಮೇ ತಿಂಗಳ ಮೊದಲ ವಾರದಲ್ಲಿ ನಿತ್ಯ 50,000 ಕೇಸ್ ಪತ್ತೆಯಾಗಿ 500 ಕ್ಕೂ ಹೆಚ್ಚು ಸೋಂಕಿತರ ಸಾವು ದಾಖಲು
  • ಕೋವಿಡ್​ನೊಂದಿಗೆ ಸೋಂಕಿತರಲ್ಲಿ ಬ್ಯಾಕ್‌ ಫಂಗಸ್, ಗ್ರೀನ್ ಫಂಗಸ್ ಪತ್ತೆ: ಸರ್ಕಾರದಿಂದ ಸಮಿತಿ ರಚಿಸಿ ಬೌರಿಂಗ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ವ್ಯವಸ್ಥೆ
  • ಎಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿ ಬೆಡ್​ಗಳ ಮೇಲೆ ನಿಗಾ
  • ಕೋವಿಡ್- 19 ಬಗ್ಗೆ ಯಾವುದೇ ಆಯುಷ್ ಚಿಕಿತ್ಸೆ, ಔಷಧಿಗಳ ಸುದ್ದಿ ಜಾಹೀರಾತು ಪ್ರಸಾರ ಮಾಡದಂತೆ ಆದೇಶ
  • ಕೊರೊನಾ ಸೋಂಕಿನ ಕುರಿತು ನಿಯಮ ಉಲ್ಲಂಘಟನೆ ಮಾಡಿದ್ದ ಡಾ.ರಾಜು ಹೆಚ್ಚು ಸ್ಟಿರಾಯ್ಡ್​​ ಬಳಕೆ ಆರೋಪ, ಆಸ್ಪತ್ರೆ ಬಾಗಿಲು ಮುಚ್ಚಿಸಿದ್ದಕ್ಕೆ ಸ್ಥಳೀಯರಿಂದ ವಿರೋಧ
  • ಕೋವಿಡ್ ನಿಯಮ ಪಾಲಿಸುವುದಾಗಿ ಕ್ಷಮಾಪಣಾ ಪತ್ರ ಸಲ್ಲಿಸಿದ ನಂತರ ಕ್ಲಿನಿಕ್ ಓಪನ್​​ಗೆ ಅವಕಾಶ
  • ಡೆಲ್ಟಾಗಿಂತ ವೇಗವಾಗಿ ಹರಡುವ ಕೊರೊನಾ ರೂಪಾಂತರಿ AY 4.2 ಒಮಿಕ್ರಾನ್ ಎಂಟ್ರಿ
  • ಕೊರೊನಾ ನಿಯಮ ಪಾಲನೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಒಬ್ಬ ನೋಡಲ್ ಆಫೀಸ್ ನೇಮಕ
  • ಡೆಲ್ಟಾ ಆರ್ಭಟದ ನಡುವೆ ರಾಮಬಾಣವಾಗಿ ಬಂತು ಕೋವಿಡ್ ಲಸಿಕೆ

    ಕೊರೊನಾ ವೈರಸ್​​ಗೆ ಇಂದಿಗೂ ಯಾವುದೇ ಪ್ರತ್ಯೇಕವಾದ ಔಷಧಿ ಕಂಡು ಹಿಡಿದಿಲ್ಲ. ಸೋಂಕಿತನ ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗಿದೆ. ಎರಡನೇ ಅಲೆಯ ಆರ್ಭಟದ ಮಧ್ಯೆ ರಾಮಬಾಣವಾಗಿ ಬಂದಿದ್ದು ಕೋವಿಡ್ ಲಸಿಕೆ, ಮೊದ ಮೊದಲು ಲಸಿಕೆ ಕುರಿತು ಅನುಮಾನಿಸಿದ ಜನ್ರು ನಂತ್ರದ ದಿನಗಳಲ್ಲಿ ಕೊರತೆಯಾಗುವ ಸ್ಥಿತಿ ನಿರ್ಮಾಣವಾಯ್ತು. ಜನವರಿ 16ರಂದು ದೇಶದ್ಯಾಂತ ಲಸಿಕೀಕರಣ ಶುರುವಾಯ್ತು.
  • ಕೊರೊನಾ ಲಸಿಕೆ ವಿತರಣೆಗೂ ಮುನ್ನ ಎಲ್ಲ ಜಿಲ್ಲೆಗಳಿಗೂ ಸಿರಿಂಜುಗಳ ವಿತರಣೆ ಕಾರ್ಯ ಆರಂಭ
  • ಜನವರಿ 8 ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡ್ರೈ ರನ್, ಜನವರಿ 16ರಂದು ಲಸಿಕೀಕರಣಕ್ಕೆ ಚಾಲನೆ
  • ಮೊದಲು ಕೊರೊನಾ ವಾರಿಯರ್ಸ್ ಆಗಿರುವ ಡಿ ಗ್ರೂಪ್ ನೌಕರರಿಗೆ ಲಸಿಕೆ
  • ಆರೋಗ್ಯ ಕಾರ್ಯಕರ್ತರು ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಡೆಡ್ ಲೈನ್ ನಿಗದಿ
  • ತುರ್ತುಪರಿಸ್ಥಿತಿ ನಿಭಾಯಿಸಲು ವೈದ್ಯರಿಗೆ ಬೇಸಿಕ್ ಲೈಫ್ ಸಪೋರ್ಟ್ ಟ್ರೈನಿಂಗ್
  • ಎರಡನೇ ಹಂತವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾರ್ಚ್ 1ರಿಂದ ಲಸಿಕಾಭಿಯಾನ. ಈ ವೇಳೆ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರಿಗೂ ಅವಕಾಶ
  • ಲಸಿಕೀಕರಣ ಮಧ್ಯೆ ಮನೆಯಲ್ಲೇ ವ್ಯಾಕ್ಸಿನ್ ಪಡೆದ ಸಚಿವ ಬಿ.ಸಿ ಪಾಟೀಲ್​ಗೆ ಇಲಾಖೆ ನೋಟಿಸ್ ಜಾರಿ
  • ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷವಾಗಿ ಲಸಿಕಾ ಕೇಂದ್ರಗಳಲ್ಲಿ ಪಿಂಕ್ ಬೂತ್ ನಿರ್ಮಾಣ
  • ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಎದುರಾಗಿ ಎಲ್ಲೆಡೆ ರಾರಾಜಿಸಿದ 'ನಾಳೆ ಬಾ' ಬೋರ್ಡ್​ಗಳು
  • ಕೊರೊನಾ ಹೋಗಲಾಡಿಸಲು ನಿಂಬೆರಸ ಪ್ರಯೋಗ ಕುರಿತು ವಿಆರ್​ಎಲ್ ಮಾಲೀಕ ವಿಜಯ್ ಸಂಕೇಶ್ವರ ಹೇಳಿಕೆ ಚರ್ಚೆಗೆ ಗ್ರಾಸ. ನಿಂಬೆಹಣ್ಣಿನ ರಸದಿಂದ ಕೊರೊನಾ ಹೋಗುವುದಾದರೆ ಡಬಲ್ ನೋಬೆಲ್ ಪ್ರಶಸ್ತಿ ಕೊಡಿಸಬಹುದಿತ್ತು ಅಂತ ಜಯದೇವ ಆಸ್ಪತ್ರೆಯ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯ
  • ಮೊದಲ ಡೋಸ್ ಕೋವಿಶೀಲ್ಡ್ ಪಡೆದ ಬಳಿಕ 2ನೇ ಡೋಸ್ ಅನ್ನ 12-16 ವಾರಗಳ ಅಂತರದಲ್ಲಿ ನೀಡಲು ಸಲಹೆ
  • 18-44 ವರ್ಷ ವಯೋಮಾನದವರಿಗೆ ಲಸಿಕೆಗಾಗಿ ಆನ್ ಲೈನ್ ನೋಂದಣಿ ಅಷ್ಟೇ ಅಲ್ಲ ಸ್ಥಳದಲ್ಲೇ ನೋಂದಣಿಗೂ ಅವಕಾಶ
  • ಕೇಂದ್ರದಿಂದ ಉಚಿತ ಕೋವಿಡ್ ಲಸಿಕೆ ವಿತರಣೆ ಹಿನ್ನೆಲೆ ನೇರ ಲಸಿಕಾ ಖರೀದಿ ನಿಲ್ಲಿಸಿದ ರಾಜ್ಯ ಸರ್ಕಾರ
  • ಕೋವಿಡ್ ಲಸಿಕೆ ವಿಶೇಷ ಅಭಿಯಾನ: ಆರೋಗ್ಯ ಕಾರ್ಯಕರ್ತರಿಂದ ಮನೆ ಮನೆ ಭೇಟಿ

    ಕೊರೊನಾ ವಾರಿಯರ್ಸ್​ಗಳಿಂದ ಮುಷ್ಕರದ ಬಿಸಿ
  • ಮಿಕ್ಸೋಪತಿ ವಿರುದ್ಧ ತಿರುಗಿ ಬಿದ್ದ ವೈದ್ಯರಿಂದ 14 ದಿನಗಳ ಉಪವಾಸ ಸತ್ಯಾಗ್ರಹ
  • ನಿಮ್ಹಾನ್ಸ್ ಆವರಣದಲ್ಲಿ ನರ್ಸಿಂಗ್ ಮುಖ್ಯಸ್ಥೆ ವಿರುದ್ಧ ತಿರುಗಿ ಬಿದ್ದ ಸಿಬ್ಬಂದಿಯಿಂದ ಪ್ರತಿಭಟನೆ
  • ಶೈಕ್ಷಣಿಕ ಶುಲ್ಕ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ನಿವಾಸಿ ವೈದ್ಯರು ಮುಷ್ಕರ
  • ವಿವಿಧ ಬೇಡಿಕೆ ಈಡೇರಿಕೆಗಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಿ ಸರ್ಕಾರದ ವಿರುದ್ಧ ರೆಸಿಡೆಂಟ್ ಡಾಕ್ಟರ್ಸ್ ಪ್ರತಿಭಟನೆ

    ಇತರ ಘಟನಾವಳಿಗಳು:
  • ಹೊಟ್ಟೆ ನೋವು ಅಂತಾ ಬಂದವಳಿಗೆ ಎಡವಟ್ಟು ಮಾಡಿ ಮಣಿಪಾಲ್ ಆಸ್ಪತ್ರೆ ವೈದ್ಯರು ಕೋಮಾಗೆ ಕಳುಹಿಸಿದ್ದರೆಂಬ ಆರೋಪ ದೊಡ್ಡ ಸುದ್ದಿಯಾಗಿತ್ತು
  • ಕೊರೊನಾ ಸೋಂಕು ಜೊತೆ ಜೊತೆಗೆ ಹಕ್ಕಿ ಜ್ವರದ ಭೀತಿ
  • ಜಿಕಾ ವೈರಸ್ ವಿರುದ್ಧ ಕಟ್ಟೆಚ್ಚರ ವಹಿಸುವಂತೆ ಸೂಚನೆ
  • ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾದ ಕಾರಣ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ
  • ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅಡಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
  • ವಿಕ್ರಂ ಆಸ್ಪತ್ರೆ ವೈದ್ಯರು 4 ಅಡಿ ಎತ್ತರವಿರುವ 67 ವರ್ಷದ ವ್ಯಕ್ತಿಗೆ ಮರುಜೀವ ನೀಡಿ ಬ್ಯಾರಿಯಾಟ್ರಿಕ್‌ ಸರ್ಜರಿ
  • ಜಯದೇವ ಆಸ್ಪತ್ರೆಯಲ್ಲಿ 350 ಹಾಸಿಗೆಗಳ ಸುಸಜ್ಜಿತ ಕಟ್ಟಡ ಲೋಕಾರ್ಪಣೆ
  • ಬಿ.ಬಿ.ಎಂ.ಪಿ ಮತ್ತು ಇ.ಎಸ್.ಐ. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೊದಲ ಅಲೆಯಲ್ಲಿ ಸಾವನ್ನಪ್ಪಿದ್ದ ಸೋಂಕಿತರ ಮೃತದೇಹ ವಿಲೇವಾರಿ ಮಾಡದ ಕಾರಣಕ್ಕೆ ಇಎಸ್‌ಐ ಆಸ್ಪತ್ರೆಯ ಡೀನ್, ಜಿತೇಂದ್ರ ಕುಮಾರ್‌ ತಲೆದಂಡ, ಹೊಸ ಡೀನ್ ನೇಮಕ
  • ಆಯುಷ್ಮಾನ್, ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಇದ್ದರೆ, ಚಿಕಿತ್ಸೆಗೆ ಮತ್ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ ಅಂತ ಸೂಚನೆ. ಒಂದು ವೇಳೆ ರೋಗಿಗಳಿಂದ ದೂರು ಬಂದರೆ ಶಿಸ್ತು ಕ್ರಮದ ಎಚ್ಚರಿಕೆ...

2021 ಕೂಡ ಕೊರೊನಾ ಕಾಡಿದ ವರ್ಷ. ಈ ಪಿಶಾಚಿ ಹೊಯ್ತು ಅನ್ನುವಷ್ಟರಲ್ಲಿ ಇದೀಗ ಒಮಿಕ್ರಾನ್ ಕಾಲಿಟ್ಟು ಆತಂಕ ಮೂಡಿಸಿದೆ. ಕಳೆದ ವರ್ಷದಂತೆ 2022 ಸೋಂಕಿಗೆ ಬಲಿಯಾಗದಿರಲಿ. ಹೊಸ ವರ್ಷ ಸುಖ, ಶಾಂತಿ, ನೆಮ್ಮದಿ ತರುವಂತಾಗಲಿ.

Last Updated : Dec 25, 2021, 5:08 PM IST

ABOUT THE AUTHOR

...view details