ಕರ್ನಾಟಕ

karnataka

ETV Bharat / city

ಸಿಲಿಕಾನ್ ಸಿಟಿಯ ಪೊಲೀಸರಿಂದ ರೌಡಿಶೀಟರ್​ಗಳ ಮನೆ, ಬಾರ್​ಗಳ ಮೇಲೆ ದಿಢೀರ್ ದಾಳಿ..! - ಬೆಂಗಳೂರು ಪಶ್ಚಿಮ ಪೊಲೀಸರ ಕಾರ್ಯಾಚರಣೆ

ಹೊಸ ವರ್ಷ ಆಗಮಿಸುತ್ತಿರುವ ಬೆನ್ನಲ್ಲೇ ಬೆಂಗಳೂರು ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸುತ್ತಿದ್ದು, ಸೋಮವಾರ ರಾತ್ರಿ ರೌಡಿಶೀಟರ್​ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

police raid
ರೌಡಿಶೀಟರ್​ಗಳ ಮನೆ ಮೇಲೆ ಪೊಲೀಸರ ದಾಳಿ

By

Published : Dec 29, 2020, 3:05 AM IST

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರೌಡಿಶೀಟರ್​​ಗಳ ಮನೆ, ಬಾರ್ ಹಾಗೂ ರೆಸ್ಟೋರೆಂಟ್​ಗಳ ಮೇಲೆ ನಗರ ಪಶ್ಚಿಮ ವಿಭಾಗದ ಪೊಲೀಸರು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಮೆಜೆಸ್ಟಿಕ್​ ಬಳಿಯೇ ಅಫೀಮು ಮಾರಾಟ: ಇಬ್ಬರು ಪೊಲೀಸರ ಬಲೆಗೆ

ಹೊಸ ವರ್ಷ ಸಮೀಪಿಸುತ್ತಿದ್ದಂತೆ ರೌಡಿಗಳ ಚಟುವಟಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆ ಮಾಡಿಕೊಂಡಿರುವ 155 ರೌಡಿಗಳ ನಿವಾಸ ಹಾಗೂ‌ 148 ಬಾರ್ ಹಾಗೂ ರೆಸ್ಟೋರೆಂಟ್​​ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಅನುಮಾನಾಸ್ಪಾದ ಚಟುವಟಿಕೆ ಹಾಗೂ ಅಪರಾಧಕ್ಕೆ ಸಂಚು ಹಿನ್ನೆಲೆಯಲ್ಲಿ‌ ಶಂಕೆ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಆಯುಕ್ತ ಸಂಜೀವ್ ಪಾಟೀಲ್ ತಿಳಿಸಿದ್ದಾರೆ‌‌.

ABOUT THE AUTHOR

...view details