ಕರ್ನಾಟಕ

karnataka

ETV Bharat / city

ಪ್ರತಿಹಂತದಲ್ಲೂ ಅಡ್ಡಿಪಡಿಸುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್‌ ನಾರಾಯಣ - C. N. Ashwath Narayan

ವಿಶ್ವವಿದ್ಯಾಲಯದ ‌ಹಿತದೃಷ್ಟಿಯಿಂದ ಅವಧಿಗೂ ಮುನ್ನವೇ ಬೆಂಗಳೂರು ವಿವಿ ಸಿಂಡಿಕೇಟ್​ನ ಇಬ್ಬರನ್ನು ಸೇವೆಯಿಂದ ಬಿಡುಗಡೆ ‌ಮಾಡಲಾಗಿದೆ ಸಚಿವ ಅಶ್ವತ್ಥ್‌ ನಾರಾಯಣ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

Bangalore university syndicate members press mee
ಅವಧಿಗೂ ಮುನ್ನವೇ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರ ಪದಚ್ಯುತಿ

By

Published : Apr 11, 2022, 10:25 PM IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಶೈಕ್ಷಣಿಕ ಕೆಲಸದಿಂದ ಸುದ್ದಿಯಾಗಿದ್ದಕ್ಕಿಂತ ಹೆಚ್ಚಾಗಿ ಸಿಬ್ಬಂದಿಗಳ ವಿಷ್ಯಕ್ಕೆ ಸುದ್ದಿಯಾಗಿದ್ದೇ ಹೆಚ್ಚು. ಅಂದಹಾಗೆ, ಅವಧಿಗೂ ಮುನ್ನವೇ ಸಿಂಡಿಕೇಟ್ ಸದಸ್ಯರನ್ನು ಸರ್ಕಾರ ಪದಚ್ಯುತಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿವಿಯ ಇತರೆ ಸಿಂಡಿಕೇಟ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವ ಅಶ್ವತ್ಥ್‌ ನಾರಾಯಣ, ವಿಶ್ವವಿದ್ಯಾಲಯದ ‌ಹಿತದೃಷ್ಟಿಯಿಂದ ಕೆಲಸ ಮಾಡದ ಕಾರಣಕ್ಕೆ ಇಬ್ಬರನ್ನು ಸೇವೆಯಿಂದ ಬಿಡುಗಡೆ ‌ಮಾಡಲಾಗಿದೆ. ನಮ್ಮ ಉದ್ದೇಶ ಒಂದು ಒಳ್ಳೆಯ ವಿಶ್ವವಿದ್ಯಾಲಯ ಕಟ್ಟುವುದೇ ಹೊರತು ಪ್ರತಿಹಂತದಲ್ಲೂ ಅದಕ್ಕೆ ಅಡ್ಡಿಪಡಿಸುವವರನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಅಂದಿದ್ದಾರೆ.

ಆದೇಶಕ್ಕೆ‌ ತಡೆಯಾಜ್ಞೆ: ಬೆಂಗಳೂರು ವಿ.ವಿ.ಕುಲಪತಿಗಳ ನೇಮಕಾತಿ ವಿರುದ್ದ ಸಿಂಡಿಕೇಟ್ ಸದಸ್ಯರು ಅಸಮಾಧಾನ ಹೊರಹಾಕಿದ್ದರು. ಕುಲಪತಿಗಳ ನೇಮಕ ಕ್ರಮಬದ್ದವಾಗಿಲ್ಲ ಎಂದು ದಾಖಲೆಗಳನ್ನೂ ಒದಗಿಸಿದ್ದರು. ಕುಲಪತಿಗಳ ಸ್ಥಾನಕ್ಕೆ ಕೂಡಲೇ ಬೇರೊಬ್ಬರನ್ನು ನೇಮಿಸುವಂತೆ ಪಟ್ಟು‌ ಹಿಡಿದಿದ್ದರು, ಇದರ ಮಧ್ಯದಲ್ಲೇ ಸುಪ್ರೀಂಕೋರ್ಟ್‌ನಿಂದ ಹೈಕೋರ್ಟ್ ಆದೇಶಕ್ಕೆ‌ ಕುಲಪತಿ ಪ್ರೊ.ಡಾ.ಕೆ.ಆರ್.ವೇಣುಗೋಪಾಲ್ ತಡೆಯಾಜ್ಞೆ ತಂದರು.

ಇವೆಲ್ಲದರ ನಡುವೆ ಪ್ರೊ.ಡಾ.ಕೆ.ಆರ್.ವೇಣುಗೋಪಾಲ್‌ ಕೆಲವೊಂದು ವಿಚಾರಗಳಲ್ಲಿ ಏಕವ್ಯಕ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿಂಡಿಕೇಟ್ ಸದಸ್ಯರ ಅಭಿಪ್ರಾಯವನ್ನು ಕೇಳಿಯೂ ಇಲ್ಲ, ಅಭಿಪ್ರಾಯವನ್ನು ತಿಳಿಸಿದಾಗ ಗಣನೆಗೂ ತೆಗೆದುಕೊಂಡಿಲ್ಲ. ಈ‌‌ ಹಿನ್ನೆಲೆಯಲ್ಲಿ ವಿವಿಯ ಹಲವಾರು ವಿಭಾಗಗಳಲ್ಲಿ‌ ಅವ್ಯವಹಾರದ ಕುರಿತು ಆರೋಪಿಸಿದ್ದರು.


ಸಿಂಡಿಕೇಟ್ ಸದಸ್ಯರ ಸುದ್ದಿಗೋಷ್ಠಿ: ಈ ಮಧ್ಯೆ ಅವಧಿಗೂ ಮುನ್ನವೇ ಸಿಂಡಿಕೇಟ್ ಸದಸ್ಯರನ್ನು ಸರ್ಕಾರ ಪದಚ್ಯುತಿಗೊಳಿಸಿದೆ. ಈ ಕುರಿತು ಇಂದು ಖಾಸಗಿ ಹೋಟೆಲ್ ವೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಸದಸ್ಯ ಟಿ.ವಿ ರಾಜು ಮಾತಾನಡಿ, ಸರ್ಕಾರದ ನಾಮನಿರ್ದೇಶಿತ ಇಬ್ಬರು ಸದಸ್ಯರನ್ನು ಸರ್ಕಾರ ವಜಾ ಮಾಡಿದೆ. ಸಿಂಡಿಕೇಟ್ ಸದಸ್ಯರ ಸಬ್ ಕಮಿಟಿ ಇರಲಿದ್ದು, ಫಿನಾನ್ಸ್ ಕಮಿಟಿಯನ್ನು ಪುನರ್‌ರಚನೆ ಮಾಡಿದ್ದಾರೆ.

ಆದರೆ‌ ಈ ಬಗ್ಗೆ ಯಾವುದೇ ಸಿಂಡಿಕೇಟ್ ಸದಸ್ಯರಿಗೆ ಮಾಹಿತಿ ನೀಡಿಲ್ಲ ಮತ್ತು ನಾಮಿನೇಟೆಡ್ ಸದಸ್ಯರನ್ನು ಯಾವುದೇ ವಜಾ ಮಾಡಲು ವಿಸಿಗೆ ಅಧಿಕಾರ ಇಲ್ಲ. ವಿಸಿ ಅಧಿಕಾರ ಹೊರತುಪಡಿಸಿ ಈ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ. ವಿಶ್ವವಿದ್ಯಾಲಯದಲ್ಲಿ 16 ಜನರ ಕೆಲಸವನ್ನು ಖಾಯಂ ಆಗಿ ನೇಮಿಸಿದ್ದಾರೆ. ಈ ಬಗ್ಗೆ ಸಿಂಡಿಕೇಟ್ ಸದಸ್ಯರಿಗೆ ಮಾಹಿತಿ ನೀಡಿಲ್ಲ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್‌ಗಳ ನೇಮಕಾತಿ, ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದರು.

ಸಿಂಡಿಕೇಟ್ ಅಭಿಪ್ರಾಯ ಪಡೆಯದೇ ನಿರ್ಧಾರ: NEP ಗೆ ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ. ಕಟ್ಟಡ ನಿರ್ಮಾಣ ಕೆಲಸಗಳು ಕೂಡ ಸಬ್ ಕಮಿಟಿಯಲ್ಲಿ ಚರ್ಚೆ ಮಾಡದೇ ಬೇಕಾದವರಿಗೆ ಟೆಂಡರ್ ನೀಡಿದ್ದಾರೆ. ಇಲ್ಲಿ ಸಾಕಷ್ಟು ಆರ್ಥಿಕ ಮೋಸಗಳಿದೆ. ಸಿಂಡಿಕೇಟ್ ಸದಸ್ಯರಿಗೆ ತಿಳಿಸದೇ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಿಂಡಿಕೇಟ್ ಸದಸ್ಯರಿಗೆ ಕಿಂಚಿತ್ತು ಮಾರ್ಯದೆ ನೀಡಿಲ್ಲವಾದರೆ ಅದು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಅಲ್ಲಿನ ವಿಸಿ. ಇಷ್ಟಾದರೆ ಅಲ್ಲಿ ಯಾಕೆ ಇರಬೇಕು.
ಹಾಗಾಗಿ ರಾಜೀನಾಮೆ ನೀಡಬೇಕು ಎಂದು ನಮಗೆ ಅನ್ನುಸ್ತಿದೆ. ಶಿಕ್ಷಣ ವರ್ಗದಲ್ಲಿ ಈ ರೀತಿಯಾದರೆ ರಾಜ್ಯ ಯೂನಿವರ್ಸಿಟಿ ಯಾವುದೇ ಅಭಿವೃದ್ಧಿಯಾಗಲ್ಲ. ಮೌಲ್ಯಗಳಿಲ್ಲದೆ ಶಿಕ್ಷಣ ಕೇಂದ್ರ ನಡೆಯಬಾರದು ಎಂಬುದು ನಮ್ಮ ಉದ್ದೇಶ ಅಂತ ತಿಳಿಸಿದರು.

ಇದನ್ನೂ ಓದಿ:ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಕನ್ನಡ ಕಡ್ಡಾಯ ತೀರ್ಪು ಪಡೆಯುತ್ತೇವೆ : ಸಚಿವ ಅಶ್ವತ್ಥ್‌ ನಾರಾಯಣ

ABOUT THE AUTHOR

...view details