ಬೆಂಗಳೂರು:ಆಟೋದಲ್ಲಿ ಬಂದು ಸಾರ್ವಜನಿಕರ ಮೊಬೈಲ್ ಮತ್ತು ಚಿನ್ನಾಭರಣ ದೋಚುತ್ತಿದ್ದ ಇಬ್ಬರು ದರೋಡೆಕೋರರನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಮ್ಮದ್ ಅರ್ಬಾಜ್ (24) ಮತ್ತು ಥಣಿಸಂದ್ರದ ಸೈಯದ್ ಅರ್ಬಾಜ್ (24) ಎಂದು ಗುರುತಿಸಲಾಗಿದೆ.
ಈ ಆರೋಪಿಗಳಿಂದ ಸುಮಾರು 2.15 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.