ಬೆಂಗಳೂರು: ಉದ್ಯಮ ಕ್ಷೇತ್ರದಲ್ಲಿ ನವ ಚಿಂತನೆ ಅಳವಡಿಸಿಕೊಳ್ಳಬೇಕು. ಇದರಿಂದ ಐಟಿ - ಬಿಟಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್ 2021) ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಬೆಂಗಳೂರು ತಂತ್ರಜ್ಞಾನ ಶೃಂಗ (Bengaluru Tech Summit) ಉದ್ಘಾಟನೆ ಮಾಡಿದ ವೆಂಕಯ್ಯನಾಯ್ಡು (Venkaiah Naidu) ಇತ್ತೀಚಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಇದರಿಂದ ಪಾಠ ಕಲಿತು ಎಲ್ಲ ಕ್ಷೇತ್ರಗಳು ಸುಧಾರಣೆಗೊಳ್ಳಬೇಕು. ಈ ನಿಟ್ಟಿನಲ್ಲಿ ಬಿಟಿಎಸ್ 2021(BTS-2021) ಒಂದು ಅತ್ಯುತ್ತಮ ವೇದಿಕೆಯಾಗಿದೆ. ಜಗತ್ತಿನ ಎಲ್ಲ ನಾಯಕರು ಒಂದಾಗುವ ಅವಕಾಶ ಇದೆ ಎಂದರು.
ವಿಶ್ವದ ಎಲ್ಲ ಅತಿದೊಡ್ಡ ಸಂಸ್ಥೆಗಳ ನಾಯಕತ್ವದಲ್ಲಿ ಭಾರತೀಯರಿದ್ದಾರೆ. ಇದು ಭಾರತೀಯರ ಜ್ಞಾನ, ಶ್ರಮವನ್ನು ಸಾರಿ ಹೇಳುತ್ತಿದೆ. ಮುಂಬರುವ ದಿನಗಳಲ್ಲಿ ಜ್ಞಾನಾರ್ಜನೆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದ ಅವರು, ಇಡೀ ದೇಶ ಡಿಜಿಟಲ್ ಇಂಡಿಯಾದತ್ತ ಮುನ್ನುಗ್ಗುತ್ತಿದೆ. ಇದರಿಂದ ನೇರ ಹೂಡಿಕೆಯಲ್ಲಿ ಹೆಚ್ಚು ಪ್ರಗತಿ ಆಗುತ್ತಿದೆ. ಒಟ್ಟಿನಲ್ಲಿ ತಂತ್ರಜ್ಞಾನ ಜನ ಸಾಮಾನ್ಯನಿಗೆ ತಲುಪುವುದು ಮುಖ್ಯವಾಗಿದೆ. ಭಾರತ ಈ ಹಾದಿಯಲ್ಲಿ ನಡೆಯುತ್ತಿದೆ ಎಂದರು.
ಐಟಿ-ಬಿಟಿ ಮುಖ್ಯ ಉದ್ದೇಶ ಜನರ ಸಂತೋಷ ವೃದ್ಧಿ, ಕೃಷಿ ನಮ್ಮ ದೇಶದ ಮೂಲ ಸಂಸ್ಕೃತಿ. ದೇಶದ ಬಹುಪಾಲು ಜನರು ಕೃಷಿ ಮೇಲೆ ಅವಲಂಬಿಸಿದ್ದಾರೆ. ಸಾಕಷ್ಟು ನವೀನತೆ ಉದ್ಯಮ ಕ್ಷೇತ್ರದಲ್ಲಿ ಆಗುತ್ತಿದೆ. ರಿಫಾರ್ಮ್, ಪರ್ಫಾರ್ಮ್, ಟ್ರಾನ್ಸ್ಫಾರ್ಮ್ (Reform, Perform, Transform) ಪ್ರಧಾನಿ ಮೋದಿಯವರ (Prime minister Narendra Modi) ಮೂಲ ಮಂತ್ರವಾಗಿದೆ. ಈ ಮೂರು ದಿನಗಳ ಶೃಂಗಸಭೆಯಲ್ಲಿ ಜನ ಸಾಮಾನ್ಯರಿಗೆ ಹೆಚ್ಚು ಉಪಯೋಗವಾಗುವ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ತಂತ್ರಜ್ಞಾನದ ಹಬ್: ಬಸವರಾಜ ಬೊಮ್ಮಯಿ