ಬೆಂಗಳೂರು: ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿ ನವೀನ್ನನ್ನು ಕರೆ ತಂದು ಡಿ.ಜೆ.ಹಳ್ಳಿ ಪೊಲೀಸರು ಮಹಜರು ಮಾಡಿದ್ದಾರೆ.
ಗಲಭೆ ಪ್ರಕರಣ: ಮಹಜರು ವೇಳೆ ನವೀನ್ ಮೊಬೈಲ್ ಪತ್ತೆ - ಮಹಜರು ಮಾಡುವಾಗ ಪತ್ತೆಯಾಯ್ತು ನವೀನ್ ಮೊಬೈಲ್
ಗಲಭೆ ವೇಳೆ ಆತಂಕದಿಂದ ಮನೆಯಿಂದ ಹಾರಿ ಎಸ್ಕೇಪ್ ಆಗುವಾಗ ಮನೆ ಬಳಿ ಮೊಬೈಲ್ ಬಿದ್ದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತನ್ನ ಮೊಬೈಲ್ ಫೋನ್ನಿಂದಲೇ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ನವೀನ್ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.
![ಗಲಭೆ ಪ್ರಕರಣ: ಮಹಜರು ವೇಳೆ ನವೀನ್ ಮೊಬೈಲ್ ಪತ್ತೆ bengaluru-riot-case-naveen-mobile-found](https://etvbharatimages.akamaized.net/etvbharat/prod-images/768-512-8430017-thumbnail-3x2-news.jpg)
ಅಜ್ಞಾತ ಸ್ಥಳದಿಂದ ಆರೋಪಿ ನವೀನ್ನನ್ನು ಕಾವಲ್ ಭೈರಸಂದ್ರದಲ್ಲಿರುವ ಮನೆಗೆ ಕರೆ ತಂದು ಪರಿಶೀಲನೆ ನಡೆಸಿದರು. ಇಂದು ಬೆಳಗ್ಗೆ 7.30ರ ಸುಮಾರಿಗೆ ಸುಮಾರು 50 ಪೊಲೀಸರ ಭದ್ರತೆಯಲ್ಲಿ ಕರೆ ತಂದು ಮಹಜರಿಗೆ ಹಾಜರುಪಡಿಸಿದರು. ಮನೆ ಬಳಿ ಪರಿಶೀಲಿಸುವಾಗ ನವೀನ್ ಫೋನ್ ಪತ್ತೆಯಾಗಿದೆ.
ಮೊಬೈಲ್ ಫೋನ್ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಿದೆ. ಇದುವರೆಗೆ ಫೋನ್ ಕಾಣೆಯಾಗಿದೆ ಎಂದು ನವೀನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ. ಗಲಭೆ ವೇಳೆ ಆತಂಕದಿಂದ ಮನೆಯಿಂದ ಹಾರಿ ಎಸ್ಕೇಪ್ ಆಗುವಾಗ ಮನೆ ಬಳಿ ಮೊಬೈಲ್ ಬಿದ್ದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತನ್ನ ಮೊಬೈಲ್ ಫೋನ್ನಿಂದಲೇ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ನವೀನ್ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.
TAGGED:
ಬೆಂಗಳೂರು ಗಲಭೆ ಪ್ರಕರಣ