ಕರ್ನಾಟಕ

karnataka

ETV Bharat / city

ಬೆಂಗಳೂರಿನ ಖಾಸಗಿ ಆಸ್ಪತ್ರೆ ಛಾವಣಿ ಕುಸಿತ: ಅವಶೇಷದಡಿ ನಾಲ್ವರು ಕಾರ್ಮಿಕರು, ಇಬ್ಬರ ರಕ್ಷಣೆ - ಬೆಂಗಳೂರಿನ ಖಾಸಗಿ ಆಸ್ಪತ್ರೆ ಮೇಲ್ಚಾವಣಿ ಕುಸಿತ

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಛಾವಣಿ ಕುಸಿದು ಬಿದ್ದಿದೆ. ಅವಶೇಷದಡಿ ನಾಲ್ವರು ಕಾರ್ಮಿಕರು ಸಿಲುಕಿಕೊಂಡಿದ್ದು, ಇಬ್ಬರನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ. ಉಳಿದ ಇನ್ನಿಬ್ಬರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Two workers trapped under rubble
ರಕ್ಷಣಾ ಕಾರ್ಯಾಚರಣೆ

By

Published : May 31, 2022, 9:14 AM IST

Updated : May 31, 2022, 12:54 PM IST

ಬೆಂಗಳೂರು: ನಿನ್ನೆ(ಸೋಮವಾರ) ರಾತ್ರಿ ಸುರಿದ ಮಳೆಗೆ ನಗರದ ಖಾಸಗಿ‌ ಆಸ್ಪತ್ರೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿದ್ದು, ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.


ನೃಪತುಂಗ ರಸ್ತೆಯಲ್ಲಿರುವ ಸೆಂಟ್ ಮಾರ್ಥಾಸ್ ಆಸ್ಪತ್ರೆಯ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕಾಗಿ ನಾಲ್ವರು ಕಾರ್ಮಿಕರು ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕೆಲಸಕ್ಕಾಗಿ‌ ಆಗಮಿಸಿದ್ದರು. ಈ ಸಂದರ್ಭ ಏಕಾಏಕಿ ಛಾವಣಿ ಕುಸಿದು ಕೆಳಗೆ ಬಿತ್ತು.‌ ಕೆಲಸ ಮಾಡುತ್ತಿದ್ದ ನಾಲ್ವರು ಅವಶೇಷದಡಿ ಸಿಲುಕಿಕೊಂಡರು. ಕೂಡಲೇ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದರು. ಅವಶೇಷದಡಿ ಮತ್ತಿಬ್ಬರು ಸಿಲುಕಿಕೊಂಡಿದ್ದು, ಜೆಸಿಬಿ ಬಳಸಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯ; ಕೊಡಗಿನಲ್ಲಿ ಅಣಕು ಪ್ರದರ್ಶನ

Last Updated : May 31, 2022, 12:54 PM IST

ABOUT THE AUTHOR

...view details