ಕರ್ನಾಟಕ

karnataka

ETV Bharat / city

ಪಿಎಸ್ಐ ಮೇಲೆ‌ ಹಲ್ಲೆ ನಡೆಸಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದ ಪೊಲೀಸರು - Bengaluru Police shoot at rowdy sheeter leg

ಮಂಗಳವಾರ ತಡರಾತ್ರಿ ಯಶವಂತಪುರ ಪಿಎಸ್‌ಐ ವಿನೋದ್ ರಾಥೋಡ್‌ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿಶೀಟರ್ ಕಾಲಿಗೆ ಸಂಜಯನಗರ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.

Bengaluru Police shoot at rowdy sheeter's leg who attacked PSI
ಪಿಎಸ್ಐ ಮೇಲೆ‌ ಹಲ್ಲೆ ನಡೆಸಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದ ಪೊಲೀಸರು

By

Published : Dec 31, 2021, 8:51 AM IST

ಬೆಂಗಳೂರು: ಡಕಾಯಿತಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದ ಯಶವಂತಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹಾಗೂ ಕಾನ್​​ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿಶೀಟರ್ ಕಾಲಿಗೆ ಸಂಜಯನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಗಿರಿನಗರ ಪೊಲೀಸ್ ಠಾಣೆಯ ರೌಡಿಶೀಟರ್ ದಿವಾಕರ್ ಗುಂಡೇಟಿಗೆ ಒಳಗಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದು ತಿಂಗಳ ಹಿಂದೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ವೃದ್ಧರ ಮನೆಗೆ ನುಗ್ಗಿದ ಆರೇಳು ಆರೋಪಿಗಳು ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ಕೆಲ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿತ್ತು.

ಪಿಎಸ್ಐ ಮೇಲೆ‌ ಹಲ್ಲೆ ನಡೆಸಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದ ಪೊಲೀಸರು

ಈ ಸಂಬಂಧ ತನಿಖೆ ಕೈಗೊಂಡಿದ್ದ ಯಶವಂತಪುರ ಪಿಎಸ್‌ಐ ವಿನೋದ್ ರಾಥೋಡ್‌ಗೆ ಮಂಗಳವಾರ ತಡ ರಾತ್ರಿ 11 ಗಂಟೆ ಸುಮಾರಿಗೆ ಸಂಜಯನಗರ ಠಾಣಾ ವ್ಯಾಪ್ತಿಯ ಹೆಬ್ಬಾಳ ಮೇಲು ಸೇತುವೆ ಬಳಿ ಮೂವರು ಆರೋಪಿಗಳು ಓಡಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾನ್‌ಸ್ಟೇಬಲ್ ವಲ್ಲಿಸಾಬ್ ಜತೆ ಸ್ಥಳಕ್ಕೆ ಹೋಗಿದ್ದರು. ಆಗ ಆರೋಪಿಗಳು ಪೊಲೀಸರನ್ನು ಕಂಡು ಭೂಪಸಂದ್ರದ ರೈಲ್ವೆ ಗೇಟ್ ಮೂಲಕ ತೋಟ ಒಂದರ ಬಳಿ ಪರಾರಿಯಾಗಲು ಯತ್ನಿಸಿದ್ದರು. ಹಿಂಬಾಲಿಸಿದ ಪಿಎಸ್‌ಐ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದರು. ಈ ವೇಳೆ ಆರೋಪಿಯೊಬ್ಬ ಕಾನ್‌ಸ್ಟೇಬಲ್ ವಲ್ಲಿಸಾಬ್​​ರನ್ನು ತಳ್ಳಿದ್ದಾನೆ. ಕೆಳಗೆ ಬೀಳುತ್ತಿದ್ದ ವಲ್ಲಿಸಾಬ್​​ರನ್ನು ಹಿಡಿದುಕೊಳ್ಳಲು ಪಿಎಸ್‌ಐ ವಿನೋದ್ ಮುಂದಾದಾಗ ಆರೋಪಿಗಳು ಪಿಎಸ್‌ಐ ಎರಡೂ ಕೈಗಳ ಮೊಣಕೈಗೆ ಚಾಕುವಿನಿಂದ ಇರಿದಿದ್ದರು.‌

ಇದನ್ನೂ ಓದಿ: ಡಕಾಯಿತಿ ಪ್ರಕರಣದ ಆರೋಪಿಗಳನ್ನು ಬಂಧಿಸಲು ತೆರಳಿದ ಪಿಎಸ್‌ಐಗೆ ಮಾರಣಾಂತಿಕ ಹಲ್ಲೆ

ಈ ಸಂಬಂಧ ಸಂಜಯನಗರ ಪೊಲೀಸ್ ಇನ್​​ಸ್ಟೆಕ್ಟರ್ ಬಾಲರಾಜ್ ಪ್ರಕರಣ ದಾಖಲಿಸಿಕೊಂಡಿದ್ದರು‌. ಆರೋಪಿಯು ಜಾಲಹಳ್ಳಿ ಬಳಿ ಅಡಗಿಕೊಂಡಿರುವ ಮಾಹಿತಿ ಅರಿತು ಇಂದು ಬೆಳ್ಳಂಬೆಳಗ್ಗೆ ಬಂಧಿಸಲು ಹೋದಾಗ ಕಾನ್​​ಸ್ಟೇಬಲ್ ಪ್ರದೀಪ್ ಮೇಲೆ ಹಲ್ಲೆ ಮಾಡಿದ್ದಾನೆ. ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದರೂ ಮತ್ತೆ ಹಲ್ಲೆಗೆ ಮುಂದಾಗಿದ್ದು, ರೌಡಿಶೀಟರ್ ಎಡಗಾಲಿಗೆ ಇನ್​​ಸ್ಪೆಕ್ಟರ್ ಬಾಲರಾಜ್ ಗುಂಡು ಹೊಡೆದು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಯಶವಂತಪುರ, ಗಿರಿನಗರ, ಸಂಜಯನಗರ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ‌.

For All Latest Updates

TAGGED:

ABOUT THE AUTHOR

...view details