ಬೆಂಗಳೂರು:ಸಿಸಿಬಿ ಪೊಲೀಸರು ಬೆಂಗಳೂರಿನ ಬಾಗಲಗುಂಟೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ತಿಮಿಂಗಿಲದ ವಾಂತಿ (ಆ್ಯಂಬರ್ಗ್ರಿಸ್) ಸೇರಿದಂತೆ ಹಲವಾರು ಅತ್ಯಪರೂಪದ ಪುರಾತನ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಹೀಗೆ ಜಪ್ತಿಯಾದ ವಸ್ತುಗಳ ಪೈಕಿ ಕುತೂಹಲಕ್ಕೆ ಕಾರಣವಾಗಿರುವ ವಸ್ತು ಅಂದ್ರೆ ಅದು ಅತ್ಯಂತ ಹಳೆಯ ಕಾಲದ ಸ್ಟೀಮ್ ಫ್ಯಾನ್.
ಈ ಸ್ಟೀಮ್ ಫ್ಯಾನಿನ ಮೇಲೆ ಈಸ್ಟ್ ಇಂಡಿಯಾ ಕಂಪನಿ 1818 ಎಂದು ನಮೂದಿಸಲಾಗಿದೆ. ಇದು ಸೀಮೆಎಣ್ಣೆ ಚಾಲಿತ ಎಂದು ಪೊಲೀಸ್ ಕಮೀಷನರ್ ಕಮಲ್ ಪಂಥ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಇದರ ಮೌಲ್ಯ ಹಾಗು ಇನ್ನಿತರ ವಿಶೇಷತೆಗಳನ್ನು ಪೊಲೀಸರು ಪತ್ತೆಹಚ್ಚಬೇಕಿದೆ.
ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ (Heat energy to Mechanical Energy) ಪರಿವರ್ತಿಸುವ ತತ್ವವನ್ನು ಈ ಸ್ಟೀಮ್ ಫ್ಯಾನ್ ಹೊಂದಿದೆ. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಥರ್ಮೋಡೈನಾಮಿಕ್ಸ್ ( Thermodynamics) ಎಂದು ಕರೆಯಲಾಗುತ್ತದೆ. ಎಷ್ಟು ಉಷ್ಣ ಶಕ್ತಿ ಉತ್ಪಾದನೆಯಾಗುತ್ತದೆಯೋ ಅಷ್ಟು ವೇಗವಾಗಿ ಫ್ಯಾನ್ ತಿರುಗುವ ಸಾಮರ್ಥ್ಯ ಹೊಂದಿರುತ್ತದೆ.