ಕರ್ನಾಟಕ

karnataka

ETV Bharat / city

ಬಲ ಪ್ರಯೋಗ ಮಾಡಿದ ಬಿಬಿಎಂಪಿ ಮಾರ್ಷಲ್​​ಗಳ ಅಮಾನತು - bengaluru seal down

ನಿಯಮ ಉಲ್ಲಂಘಿಸಿದವರ ಮೇಲೆ ಲಾಠಿ ಪ್ರಹಾರ ಮಾಡಿದ್ದ ಬಿಬಿಎಂಪಿ ಮಾರ್ಷಲ್​​ಗಳನ್ನು ಅಮಾನತು ಮಾಡಲಾಗಿದೆ.

Bengaluru marshals suspended
ನಿಯಮ ಉಲ್ಲಂಘಿಸಿದವರ ಮೇಲೆ ಲಾಠಿ ಬೀಸಿದ ಮಾರ್ಷಲ್​​ಗಳು

By

Published : Jul 16, 2020, 11:09 AM IST

ಬೆಂಗಳೂರು:ಸೀಲ್​​ ಡೌನ್ ಆಗಿದ್ದರೂ ನಿಯಮ ಉಲ್ಲಂಘಿಸಿ ಹೊರಗೆ ಬಂದಿದ್ದ ಇಬ್ಬರು ವ್ಯಕ್ತಿಗಳಿಗೆ ಬಿಬಿಎಂಪಿ ಮಾರ್ಷಲ್​​ಗಳು ಲಾಠಿ ಬೀಸಿ ಬಲ ಪ್ರಯೋಗ ಮಾಡಿದ್ದ ಘಟನೆ ಕೆ.ಆರ್. ಮಾರುಕಟ್ಟೆ ಬಳಿ ನಡೆದಿತ್ತು.

ನಿಯಮ ಉಲ್ಲಂಘಿಸಿದವರ ಮೇಲೆ ಲಾಠಿ ಬೀಸಿದ ಮಾರ್ಷಲ್​​ಗಳು

ಲಾಠಿ ಏಟು ನೀಡಿದ್ದಲ್ಲದೆ ಅವರನ್ನು ಮಂಡಿಯೂರಿಸಿ ನಡೆಸಿದ್ದರು. ಇದನ್ನು ವಿಡಿಯೋ ಮಾಡಿದ್ದ ಮಾರ್ಷಲ್​​ಗಳು ತಮ್ಮ ಸ್ಟೇಟಸ್​​ನಲ್ಲಿ ಹಾಕಿಕೊಂಡಿದ್ದರು. ಬಳಿಕ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಟೀಕೆಗೆ ಒಳಗಾಯ್ತು. ಮಾರ್ಷಲ್​​ಗಳ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಮಾರ್ಷಲ್​​ಗಳಿಗೆ ದಂಡ ವಿಧಿಸಲು ಮಾತ್ರ ಅವಕಾಶವಿದ್ದು, ಬಲ ಪ್ರಯೋಗಿಸಲು ಅವಕಾಶವಿಲ್ಲ. ಹೀಗಾಗಿ ದೀಪಕ್, ಪವನ್, ದಿನೇಶ್ ನಾಯಕ್ ಎಂಬುವವರನ್ನು ಅಮಾನತು ಮಾಡಲಾಗಿದೆ ಎಂದು ಚೀಫ್ ಮಾರ್ಷಲ್ ರಜ್ ಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details