ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸದಾಗಿ 927 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 12 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ಒಟ್ಟು ಸೋಂಕಿತರ ಒಟ್ಟು ಸಂಖ್ಯೆ 3,65,317ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ 927 ಮಂದಿಗೆ ಪಾಸಿಟಿವ್ : ನಗರದ ಹೊರವಲಯದಲ್ಲೇ ಹೆಚ್ಚು ಸೋಂಕಿತರು - ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಮಾಹಿತಿ
ಸಿಲಿಕಾನ್ ಸಿಟಿಯಲ್ಲಿ ಹೊಸದಾಗಿ 927 ಮಂದಿಗೆ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಹೊರವಲಯದಲ್ಲೇ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ.
ಕೊರೊನಾ ಪರೀಕ್ಷೆ
ಕೊರೊನಾದಿಂದ ಚೇತರಿಸಿಕೊಂಡು 28 ಮಂದಿ ಬಿಡುಗಡೆಯಾಗಿದ್ದು, ಒಟ್ಟು ಈವರೆಗೆ 3,43,169 ಮಂದಿ ಗುಣಮುಖರಾಗಿದ್ದಾರೆ. 18,057 ಸಕ್ರಿಯ ಪ್ರಕರಣಗಳಿವೆ. ಈವರೆಗೆ 4,090 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ನಗರದ ಹೊರವಲಯದಲ್ಲಿಯೇ ಅತಿ ಹೆಚ್ಚು ಮಂದಿ ಸೋಂಕಿತರು ಕಂಡುಬಂದಿದ್ದಾರೆ.
ಕಳೆದ ಐದು ದಿನಗಳಲ್ಲಿ ಅತಿಹೆಚ್ಚು ಪ್ರಕರಣ ಕಂಡುಬಂದ ವಾರ್ಡ್ಗಳು ಇಂತಿವೆ
- ಉತ್ತರಹಳ್ಳಿ- 109
- ಬೆಳ್ಳಂದೂರು- 104
- ಬೇಗೂರು- 55
- ವಿದ್ಯಾರಣ್ಯಪುರ -55
- ವರ್ತೂರು- 56
- ಹೆಮ್ಮಿಗೆಪುರ- 54
- ಹೊರಮಾವು- 52
- ಸಿ.ವಿ.ರಾಮನ್ ನಗರ- 49
- ಆರ್.ಆರ್.ನಗರ - 48
- ಬ್ಯಾಟರಾಯನಪುರ - 40
- ಯಶವಂತಪುರ- 42
- ಅರಕೆರೆ - 42
- ನ್ಯೂ ತಿಪ್ಪಸಂದ್ರ - 35
- ಅಟ್ಟೂರು- 36
- ಹಗದೂರು, ಜ್ಞಾನಭಾರತಿನಗರ ವಾರ್ಡ್- 49
- ಹೆಚ್ಬಿಆರ್ ಲೇಔಟ್- 35
- ಅಂಜನಾಪುರ- 33
- ಬಾಣಸವಾಡಿ-31
- ಬಸವನಪುರ-31