ಬೆಂಗಳೂರು:ಕ್ಷುಲ್ಲಕ ಕಾರಣಕ್ಕಾಗಿ ಕುಡಿದ ನಶೆಯಲ್ಲಿ ಆಟೋ ಚಾಲಕನನ್ನು ಅಟ್ಟಾಡಿಸಿ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ದೂಫನಹಳ್ಳಿ ನಿವಾಸಿ ಮಂಜುನಾಥ್ ಎಂಬಾತನನ್ನು ಕೊಲೆ ಮಾಡಿದ ಆರೋಪದಡಿ ಮಧುಸೂದನ್ ಹಾಗೂ ಯತೀಶ್ಗೌಡನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಜೆಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಿಡಿ ಬಾರ್ ಬಳಿ ಮಾರ್ಚ್ 14ರ ರಾತ್ರಿ ಮಂಜುನಾಥ ಹಾಗೂ ಆರೋಪಿಗಳ ನಡುವೆ ಕುಡಿದ ನಶೆಯಲ್ಲಿ ಕುಲ್ಲಕ ವಿಚಾರವಾಗಿ ಜಗಳವಾಗಿತ್ತು.
ಈ ವೇಳೆ, ಪರಸ್ಪರ ಕೈ-ಕೈ ಮಿಲಾಯಿಸಿದ್ದರು. ಮಂಜುನಾಥ್ ಬಾರ್‌ನಿಂದ ಹೊರಗೆ ಬಂದು ಆಟೋದೊಳಗೆ ಕುಳಿತುಕೊಂಡಿದ್ದಾಗ ಆರೋಪಿಗಳು ಅಲ್ಲಿಗೂ ಬಂದು ತಗಾದೆ ತೆಗೆದು ಆವಾಜ್ ಹಾಕಿದ್ದರು. ಜೀವ ಭಯದಿಂದ ಆಟೋದಿಂದ ಇಳಿದು ಮಂಜುನಾಥ್ ಓಡಿ ಹೋದರೂ ಆರೋಪಿಗಳು ಅಟ್ಟಾಡಿಸಿಕೊಂಡು ಹೋಗಿದ್ದಾರೆ.
ಸಿಸಿಟಿಯಲ್ಲಿ ಸೆರೆಯಾದ ದೃಶ್ಯ ಕೋಡಿಹಳ್ಳಿ ಜಂಕ್ಷನ್ ಬಳಿ ಕೆಳಗೆ ಬಿದ್ದ ಮಂಜುನಾಥ್ ತಲೆಗೆ ಕಲ್ಲಿನಿಂದ ಹೊಡೆದು, ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಮದುವೆಗೆ ಸಮಯ ಕೇಳಿದ ಪ್ರಿಯಕರನ ಚಿತ್ರ, ಡೆತ್ನೋಟ್ ಬರೆದು ಯುವತಿ ಆತ್ಮಹತ್ಯೆ!