ಕರ್ನಾಟಕ

karnataka

ETV Bharat / city

ಮುಂದುವರೆದ ಐಟಿ ರೇಡ್: ಪ್ರಭಾವಿ ಕುಳಗಳಿಗೆ ಜಾರಿ ನಿರ್ದೇಶನಾಲಯದ ಭಯ ಆರಂಭ

ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಆರಂಭವಾಗಿದ್ದ ಐಟಿ ದಾಳಿ ಇಂದೂ ಕೂಡಾ ಮುಂದುವರೆಯಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

bengaluru-income-tax-raid-updates
ಮುಂದುವರೆದ ಐಟಿ ರೇಡ್: ಪ್ರಭಾವಿ ಕುಳಗಳಿಗೆ ಜಾರಿ ನಿರ್ದೇಶನಾಲಯದ ಭಯ ಆರಂಭ

By

Published : Oct 9, 2021, 8:39 AM IST

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಐಟಿ ದಾಳಿಯ ಬಳಿಕ ಈಗ ತೆರಿಗೆ ವಂಚಕರಿಗೆ ಜಾರಿ ನಿರ್ದೇಶನಾಲಯದ ಭಯ ಆರಂಭವಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಆರಂಭವಾಗಿದ್ದ ಐಟಿ ದಾಳಿ ಇಂದೂ ಕೂಡ ಮುಂದುವರೆಯಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಬಿಎಸ್​​ವೈ ಆಪ್ತ ಉಮೇಶ್, ಚಾರ್ಟೆಡ್ ಅಕೌಂಟೆಂಟ್​​ಗಳು ಹಾಗೂ ಕಾಂಟ್ರಾಕ್ಟರ್​​ಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಪತ್ತೆಯಾಗಿದೆ. ಇವರು ಪಿಎಂಎಲ್ಎ ಕಾಯ್ದೆಯನ್ನು ಉಲ್ಲಂಘಿಸಿರುವುದು ಐಟಿ ದಾಳಿಯ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಲಾಗ್ತಿದೆ.

ತೆರಿಗೆ ವಂಚನೆ ಜೊತೆ ಜೊತೆಗೆ ಅಕ್ರಮ ಹಣ ಮತ್ತು ಸಂಪತ್ತು ಸಂಗ್ರಹಿಸಿರುವ ಹಲವು ಕಾಂಟ್ರಾಕ್ಟರ್​ಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ಶೀಘ್ರವೇ ಐಟಿಯಿಂದ ಜಾರಿ ನಿರ್ದೇಶನಾಲಯಕ್ಕೆ ಪತ್ರ ರವಾನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಲವು ಕಾಂಟ್ರಾಕ್ಟರ್​ಗಳಿಗೆ ಜಾರಿ ನಿರ್ದೇಶನಾಲಯದ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ.

ಉಮೇಶ್ ಆಪ್ತ ಸೋಮಶೇಖರ್ ಮನೆಯನ್ನು ಜಾಲಾಡಿ ಕಡತಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ರಾತ್ರಿ ಸೋಮಶೇಖರ್ ಮನೆಯಲ್ಲೇ ಐಟಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು ಎನ್ನುವ ಮಾಹಿತಿ ದೊರೆತಿದೆ.

ಉಮೇಶ್​ಗೆ ಅತ್ಯಾಪ್ತನಾಗಿದ್ದ ಕ್ಲಾಸ್ 1 ಗುತ್ತಿಗೆದಾರ ಸೋಮಶೇಖರ್ ನೀರಾವರಿ ನಿಗಮದ ಹಲವು ಕಾಂಟ್ರಾಕ್ಟ್​​ಗಳನ್ನು ಪಡೆಯುತ್ತಿದ್ದ. ಇಬ್ಬರ ನಡುವೆ ಹಲವು ಅಕ್ರಮ ವ್ಯವಹಾರಗಳು ನಡೆದಿರುವ ಬಗ್ಗೆ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಸೋಮಶೇಖರ್ ಬ್ಯಾಂಕ್ ಪಾಸ್ ಬುಕ್ ಸೇರಿ ಹಲವು ದಾಖಲೆಗಳ ಪರಿಶೀಲನೆಯನ್ನು ಇದೀಗ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಮತ್ತೊಮ್ಮೆ ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾ ಸರ್ವರ್ ಡೌನ್!

ABOUT THE AUTHOR

...view details