ಕರ್ನಾಟಕ

karnataka

ETV Bharat / city

21 ಸೋಂಕಿತರ ಜೀವ ಉಳಿಸಲು ಆಮ್ಲಜನಕ ಪೂರೈಸಿ: ಯಲಹಂಕ ಬಳಿಯ ಆಸ್ಪತ್ರೆಯಿಂದ ಮನವಿ - ಬೆಂಗಳೂರಲ್ಲಿ ಆಕ್ಸಿಜನ್ ಕೊರತೆ

ರಾಜ್ಯದಲ್ಲಿ ಆಮ್ಲಜನಕ ಕೊರತೆ ಕಾಡುತ್ತಿದ್ದು, ಇದೀಗ ಬೆಂಗಳೂರಿನ ಆಸ್ಪತ್ರೆಯೊಂದು ಕೋವಿಡ್ ಸೋಂಕಿತರ ಜೀವ ಉಳಿಸಲು ಆಮ್ಲಜನಕ ಪೂರೈಕೆ ಮಾಡಿ ಎಂದು ಮನವಿ ಮಾಡಿಕೊಂಡಿದೆ.

oxygen
oxygen

By

Published : May 4, 2021, 12:26 AM IST


ಬೆಂಗಳೂರು: ಆಮ್ಲಜನಕದ ಕೊರತೆಯಿಂದ ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ 21 ಸೋಂಕಿತರನ್ನು ಬೇರೆಡೆ ಸ್ಥಳಾಂತರಿಸಿ ಎಂದು ಯಲಹಂಕ ಬಳಿಯ ಚೈತನ್ಯ ಮೆಡಿಕಲ್ ಸೆಂಟರ್ ಆಸ್ಪತ್ರೆ ತಿಳಿಸಿದೆ.

ಚಿಂತಾಜನಕ ಸ್ಥಿತಿಯಲ್ಲಿ ಅನೇಕರಿದ್ದು, ಅವರಲ್ಲಿ ಕೆಲ ಸೋಂಕಿತರು ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಸದ್ಯದ ನಗರದ ಸ್ಥಿತಿಯಲ್ಲಿ 21 ಸೋಂಕಿತರಿಗೆ ಐಸಿಯು ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಆಸ್ಪತ್ರೆ ಹೇಳುವ ಪ್ರಕಾರ ಆಮ್ಲಜನಕ ಈಗ ಇವರಿಗೆ ಅತ್ಯಗತ್ಯ ಆದರೆ ಈವರೆಗೆ ನಮಗೆ ಆಕ್ಸಿಜನ್ ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಆಸ್ಪತ್ರೆಯ ಪ್ರಕಟಣೆ
ತುರ್ತಾಗಿ 33 ಲೀಟರ್​ನ 20-30 ಸಿಲಿಂಡರ್ ಆಮ್ಲಜನಕ ಬೇಕು. ಸರ್ಕಾರ ಹಾಗೂ ಸಂಘ ಸಂಸ್ಥೆಗಳ ನೆರವನ್ನ ಈ ಆಸ್ಪತ್ರೆ ನಿರೀಕ್ಷಿಸುತ್ತಿದೆ. ಯಾರಾದರೂ ಆಮ್ಲಜನಕ ಸಿಲಿಂಡರ್ ನೀಡುವವರು ಡಾ.ನಾಮದೇವ್ ಪವಾರ್ ಅವರನ್ನ ಸಂಪರ್ಕಿಸಿಬಹುದು 89043 19675.

ಚಾಮರಾಜನಗರ ಆಕ್ಸಿಜನ್ ದುರಂತದ ಬೆನ್ನಲ್ಲೇ ಆಕ್ಸಿಜನ್ ಪೂರೈಕೆಗೆ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. (ಚಾಮರಾಜನಗರ ಆಕ್ಸಿಜನ್​ ದುರಂತ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ: ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ)

ABOUT THE AUTHOR

...view details