ಕರ್ನಾಟಕ

karnataka

ETV Bharat / city

ಬೆಂಗಳೂರಿನ ಎರಡು ಪುರಸಭೆ, ಒಂದು ನಗರಸಭೆಗಳಿಗೆ ಚುನಾವಣೆ ದಿನಾಂಕ ಫಿಕ್ಸ್

ಬೆಂಗಳೂರು ನಗರ ವ್ಯಾಪ್ತಿಯ ಎರಡು ಪುರಸಭೆ ಹಾಗೂ ಒಂದು ನಗರಸಭೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಡಿಸೆಂಬರ್ 27ಕ್ಕೆ ಚುನಾವಣೆ ನಿಗದಿಪಡಿಸಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಎರಡು ಪುರಸಭೆ, ಒಂದು ನಗರಸಭೆಗಳಿಗೆ ಚುನಾವಣೆ ದಿನಾಂಕ ಫಿಕ್ಸ್
Bengaluru DC on municipalities elections

By

Published : Dec 8, 2021, 1:53 PM IST

ಬೆಂಗಳೂರು: ನಗರ ವ್ಯಾಪ್ತಿಯ ಎರಡು ಪುರಸಭೆ ಹಾಗೂ ಒಂದು ನಗರಸಭೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಬೆಂಗಳೂರಿನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೆಬ್ಬಗೋಡಿಯಲ್ಲಿ ನಗರಸಭೆ, ಚಂದಾಪುರ ಹಾಗೂ ಜಿಗಣಿ ಪುರಸಭೆಗೆ ಇದೇ ಬರುವ ಡಿಸೆಂಬರ್ 27ರಂದು ಚುನಾವಣೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ದಿನ ಬೆಳಗ್ಗೆ 7 ಗಂಟೆಯಿಂದ 5 ಗಂಟೆವರೆಗೂ ಮತದಾನ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 30ರಂದು ನಡೆಯಲಿದೆ. ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಿದ್ದೇವೆ. ಕೋವಿಡ್ ವಿಚಾರವಾಗಿ ಸರ್ಕಾರದ ಮಾರ್ಗಸೂಚಿಗೆ ಕಾಯುತ್ತಿದ್ದೇವೆ. ಮಾರ್ಗಸೂಚಿ ಬಂದ ನಂತರ ಅನುಷ್ಠಾನ ಮಾಡುತ್ತೇವೆ ಎಂದರು.

ಮದುವೆಯಂಥಹ ಕಾರ್ಯಕ್ರಮಗಳಿಗೆ ಈಗಾಗಲೇ 500 ಜನಕ್ಕೆ ಸೀಮಿತ ‌ಮಾಡಲಾಗಿದೆ. ಹೊಸವರ್ಷ ಹಾಗೂ ಕ್ರಿಸ್​​ಮಸ್ ಆಚರಣೆಗೆ ಮಾರ್ಗಸೂಚಿ ಬರಲಿದೆ. ಇದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಸಿಎಂ‌ ಜೊತೆ ಸಭೆ ಮಾಡಿ ಮಾಹಿತಿ ಕೊಡಲಿದ್ದಾರೆ. ಸಿಎಂ ನೀಡಿದ ಆದೇಶ ನಾವು ಪಾಲನೆ ಮಾಡ್ತೇವೆ. ಬಿಬಿಎಂಪಿಯ ಮುಖ್ಯ ಆಯುಕ್ತ ನೇತೃತ್ವದಲ್ಲಿ ಕೆಲವು ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ:ಶಾಲೆಗಳಲ್ಲಿ ಪರಿಷ್ಕೃತ ಎಸ್ಒಪಿ ಜಾರಿ ಕುರಿತು ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ!

ABOUT THE AUTHOR

...view details