ಬೆಂಗಳೂರು:ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ರಾತ್ರಿ ಭೇಟಿ ನೀಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಖುದ್ದು ನಿಂತು ಸಿಬ್ಬಂದಿಯನ್ನು ಹುರಿದುಂಬಿಸಿ ಸಲಹೆ, ಸೂಚನೆಗಳನ್ನು ನೀಡಿದರು.
ಮೈದಾನದ ಪ್ರತಿ ಜಾಗವನ್ನೂ ಕೂಡಾ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದ ಅವರು ಕಾರ್ಯಕ್ರಮ ಯಶಸ್ವಿಗೆ ಉಸ್ತುವಾರಿಗಳನ್ನು ಸ್ಥಳದಲ್ಲೇ ನೇಮಿಸಿದರು. ಯಾವುದೇ ಅನಾನುಕೂಲ ಆಗದಂತೆ ಉಸ್ತುವಾರಿಗಳಾಗಿ ಉಪವಿಭಾಗಾಧಿಕಾರಿ, ತಹಶೀಲ್ದಾರ್, ಇಬ್ಬರು ಕಂದಾಯ ಅಧಿಕಾರಿಗಳು ಸೇರಿ ಎಂಟು ಜನರನ್ನು ನೇಮಿಸಲಾಯಿತು.