ಕರ್ನಾಟಕ

karnataka

ETV Bharat / city

ಚೆಕ್ ಬೌನ್ಸ್ ಪ್ರಕರಣ: ಕಾಫಿ ಡೇ ಮುಖ್ಯಸ್ಥೆ ಮಾಳವಿಕಾಗೆ ಜಾಮೀನು - ಬೆಂಗಳೂರಿನ ನ್ಯಾಯಾಲಯದಿಂದ ಜಾಮೀನು

ಲಕ್ಷ್ಮೀ ವಿಲಾಸ ಬ್ಯಾಂಕ್​ನಿಂದ ಕೆಫೆ ಕಾಫಿ ಡೇಗೆ ಸಾಲ ಪಡೆದು ಸಾಲವನ್ನು ಮರುಪಾವತಿಸಲು ನೀಡಿದ್ದ ನಾಲ್ಕು ಚೆಕ್​ಗಳು ಬೌನ್ಸ್ ಆಗಿದ್ದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಸಂಸ್ಥೆಯ ಸಿಇಒ ಮಾಳವಿಕಾ ಹೆಗ್ಡೆಗೆ ರಿಲೀಫ್​ ಸಿಕ್ಕಿದೆ.

Malavika Hegde
ಮಾಳವಿಕಾ

By

Published : Jan 28, 2021, 7:50 PM IST

ಬೆಂಗಳೂರು:ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಪತ್ನಿ ಹಾಗೂ ಸಂಸ್ಥೆಯ ಸಿಇಒ ಮಾಳವಿಕಾ ಹೆಗ್ಡೆ ಅವರಿಗೆ ಬೆಂಗಳೂರಿನ ನ್ಯಾಯಾಲಯ ಜಾಮೀನು ನೀಡಿದೆ.

ಪ್ರಕರಣದಲ್ಲಿ ಜಾಮೀನು ಕೋರಿ ಮಾಳವಿಕಾ ಹೆಗ್ಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 26ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ನಗರದ ಲಕ್ಷ್ಮೀ ವಿಲಾಸ ಬ್ಯಾಂಕ್​ನಿಂದ ಕೆಫೆ ಕಾಫಿ ಡೇಗೆ ಸಾಲ ಪಡೆಯಲಾಗಿತ್ತು. ಈ ಸಾಲವನ್ನು ಮರುಪಾವತಿಸಲು ನೀಡಿದ್ದ ನಾಲ್ಕು ಚೆಕ್​ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಬ್ಯಾಂಕ್​ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ಮಾಳವಿಕಾ ಹೆಗ್ಡೆ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಗೆ ಸಹಕರಿಸುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಶ್ಯೂರಿಟಿ ಒದಗಿಸಲು ಸೂಚಿಸಿ, ಜಾಮೀನು ಮಂಜೂರು ಮಾಡಿ ವಿಚಾರಣೆ ಮುಂದೂಡಿತು.

ABOUT THE AUTHOR

...view details