ಬೆಂಗಳೂರು:ರಾಜಧಾನಿಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ನಿದ್ರಾ ವಿರಾಮ ಘೋಷಿಸಿ ಸುದ್ದಿಯಲ್ಲಿದೆ. ಕೆಲಸದ ಕಾರ್ಯಕ್ಷಮತೆ ಹೆಚ್ಚಿಸಲು ವಿನೂತನ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ. ಕೋರಮಂಗಲ ಮೂಲದ ಸ್ಟಾರ್ಟ್ ಅಪ್ ವೇಕ್‌ಫಿಟ್ ಸಲ್ಯೂಷನ್, ಕರ್ತವ್ಯದ ಅವಧಿಯಲ್ಲಿ ಉದ್ಯೋಗಿಗಳಿಗೆ 30 ನಿಮಿಷದ ನಿದ್ರಾ ವಿರಾಮ ನೀಡಿ ಅಧಿಕೃತ ಘೋಷಣೆ ಮಾಡಿದೆ.
ಟ್ವಿಟರ್ ಪೋಸ್ಟ್ ಪ್ರಕಾರ, ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಇತ್ತೀಚೆಗೆ ಸಹೋದ್ಯೋಗಿಗಳಿಗೆ ಇಮೇಲ್ ಮಾಡಿ, ಉದ್ಯೋಗಿಗಳು ಮಧ್ಯಾಹ್ನ 2 ರಿಂದ 2.30ರ ನಡುವೆ ನಿದ್ರೆ ಮಾಡಬಹುದು ಎಂದು ತಿಳಿಸಿದ್ದಾರೆ.
ವೇಕ್‌ಫಿಟ್ ಸಲ್ಯೂಷನ್ ಕಂಪನಿ
'ನ್ಯಾಯ ಸಲ್ಲಿಸಲು ಈವರೆಗೆ ವಿಫಲರಾಗಿದ್ದೆವು': ಕಳೆದ ಆರು ವರ್ಷಗಳಿಂದ ವ್ಯವಹಾರ ಎಂಬ ನಿದ್ರೆಯಲ್ಲಿ ಮಗ್ನರಾಗಿದ್ದೇವೆ. ಆದರೆ, ವಿಶ್ರಾಂತಿಯ ನಿರ್ಣಾಯಕ ಅಂಶಕ್ಕೆ ನ್ಯಾಯ ಸಲ್ಲಿಸಲು ಈವರೆಗೂ ವಿಫಲರಾಗಿದ್ದೆವು. ನಾವು ಚಿಕ್ಕ ನಿದ್ರೆಯನ್ನು ಸಹ ಗಂಭೀರವಾಗಿ ಪರಿಗಣಿಸಿದ್ದೇವೆ. ಇನ್ನು ಮುಂದೆ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದೇವೆ ಎಂ.ಚೈತನ್ಯ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.
ಉದ್ಯೋಗಿಗಳಿಗೆ 30 ನಿಮಿಷ ನಿದ್ರಾ ವಿರಾಮ ಘೋಷಿಸಿದ ವೇಕ್‌ಫಿಟ್ ಸಲ್ಯೂಷನ್ ಕಂಪನಿ
ಇದನ್ನೂ ಓದಿ:ಹೀಗೆ ಕುಳಿತಿರುವುದು ನಾಲ್ವರ ಶವಗಳು! ಇದು ಮೃತದೇಹಗಳನ್ನು ನೂರಾರು ವರ್ಷ ಕೆಡದಂತಿಡುವ ಸಂಶೋಧನೆ!