ಬೆಂಗಳೂರು: ಫೇಸ್ಬುಕ್ ಪೋಸ್ಟ್ ವಿಚಾರವಾಗಿ ರಾಜಧಾನಿಯಲ್ಲಿ ನಡೆದ ಗಲಭೆ ಪ್ರಕರಣದ ತನಿಖೆ ಚುರುಕಿನಿಂದ ನಡೆಯುತ್ತಿದ್ದು, ಕೃತ್ಯದಲ್ಲಿ ಭಾಗಿಯಾದ ಯಾರೊಬ್ಬರೂ ಬಚಾವ್ ಆಗದಂತೆ ಪೊಲೀಸರು ಸರ್ವ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನು ವಾರದ ಅಂತರದಲ್ಲಿ 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ವಾಚ್ ಟೀಮ್ ಪ್ರಮುಖ ಪಾತ್ರ ವಹಿಸಿದೆ. ಹಾಗಾದರೆ ಈ ವಾಚ್ ಟೀಮ್ ಮಾಡಿದ ಕೆಲಸವಾದರೂ ಏನು, ಇಲ್ಲಿದೆ ಪೂರ್ಣ ಮಾಹಿತಿ...
ಏನಿದು ವಾಚ್ ಟೀಮ್ ?
ಗಲಭೆ ಪ್ರಕರಣ ಹಿನ್ನೆಲೆಯಲ್ಲಿ ಪೂರ್ವ ವಿಭಾಗದಲ್ಲಿ ಪೊಲೀಸ್ ವಾಚ್ ಟೀಂ ರಚನೆಯಾಗಿದೆ. ತಂಡದಲ್ಲಿ ಕ್ರೈಂ ಪಿಸಿ, ಪೊಲೀಸ್ ಕಾನ್ಸ್ಟೇಬಲ್ಗಳು ಸೇರಿದಂತೆ 70 ಮಂದಿ ಪೊಲೀಸರಿದ್ದಾರೆ. ಹಾಗಾದರೆ ಈ ವಾಚ್ ಟೀಂ ಏನು..? ಇವರ ಕೆಲಸ ಏನು ಅನ್ನೋದೆ ತುಂಬಾ ಮಹತ್ವದ್ದಾಗಿದೆ.
ಬೆಂಗಳೂರು ಗಲಭೆ: ಆರೋಪಿಗಳ ಜಾತಕ ಜಾಲಾಡಿದ ಪೊಲೀಸ್ ವಾಚ್ ಟೀಮ್... 4 ಸಾವಿರ ವಿಡಿಯೊ ಸಂಗ್ರಹ! - ಡಿಜೆ ಹಳ್ಳಿ ಗಲಭೆ
ಗಲಭೆ ಪ್ರಕರಣ ಹಿನ್ನೆಲೆಯಲ್ಲಿ ಪೂರ್ವ ವಿಭಾಗದಲ್ಲಿ ಪೊಲೀಸ್ ವಾಚ್ ಟೀಂ ರಚನೆಯಾಗಿದೆ. ತಂಡದಲ್ಲಿ ಕ್ರೈಂ ಪಿಸಿ, ಪೊಲೀಸ್ ಕಾನ್ಸ್ಟೇಬಲ್ಗಳು ಸೇರಿದಂತೆ 70 ಮಂದಿ ಪೊಲೀಸರಿದ್ದಾರೆ. ಈ ತಂಡದ ಪರಿಶ್ರಮದಿಂದ 300 ಆರೋಪಿಗಳನ್ನು ಬಂಧಿಸಲಾಗಿದೆ.
ವಾಚ್ ಟೀಂ ವಾಚ್ ಮಾಡೋದು ಅಷ್ಟೇ ಅಲ್ಲ, ಗಲಭೆ ಸಂಬಂಧಿಸಿದ ವಿಡಿಯೋ, ಸಿಸಿ ಕ್ಯಾಮರಾ ಸಂಗ್ರಹ ಮಾಡೋದು ಇವರ ಪ್ರಮುಖ ಕಾಯಕ. ಗಲಭೆ ನಡೆದ ದಿನದಿಂದ ಇದುವರೆಗೂ 4 ಸಾವಿರ ವಿಡಿಯೋ ಕ್ಲಿಪ್ ಸಂಗ್ರಹಿದ್ದಾರೆ. ಸಿಸಿ ಕ್ಯಾಮರಾ ಜೊತೆಗೆ ಮೊಬೈಲ್ ವಿಡಿಯೋ ಕ್ಲಿಪ್ ಸಹ ಸಂಗ್ರಹಿಸಿದ್ದು, ಈ ವಿಡಿಯೊ ಆಧಾರದ ಮೇಲೆ ಸಿಸಿಬಿ ಪೊಲೀಸರು ಆರೋಪಿಗಳ ಬಂಧನದ ಪಟ್ಟಿ ಮಾಡಲಿದ್ದಾರೆ.
ವಾಚ್ ಟೀಂನಲ್ಲಿ ಕೆಲಸ ಮಾಡುವ ಪೊಲೀಸರು ಸುತ್ತಮುತ್ತ ಏರಿಯಾಗಳ ಪರಿಚಯದ ಜೊತೆಗೆ ಕ್ರಿಮಿನಲ್ ಕೇಸ್ನಲ್ಲಿ ಭಾಗಿಯಾಗಿರೋರ ಬಗ್ಗೆ ಅರಿತವರಾಗಿದ್ದಾರೆ. ಇದೇ ಕಾರಣದಿಂದ ವಿಡಿಯೋ ಸಂಗ್ರಹದ ಜೊತೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಾಚ್ ಟೀಂ ಇದುವೆರೆಗೂ 1500 ವಿಡಿಯೋಗಳ ಪರಿಶೀಲನೆ ನಡೆಸಿದ್ದು, 2500 ವಿಡಿಯೋಗಳನ್ನು ಪರಿಶೀಲನೆ ಮಾಡುತ್ತಿದೆ.
ವಾಚ್ ಟೀಂ ಎಲ್ಲೆಲ್ಲಿ ವಿಡಿಯೋ ಸಂಗ್ರಹ ಮಾಡಿದೆ ಗೊತ್ತಾ...?
ಟ್ಯಾನಿ ರಸ್ತೆ, ಡಿಜೆ ಹಳ್ಳಿ, ಕೆಜಿ ಹಳ್ಳಿ, ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ ರಸ್ತೆ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ಜೊತೆಗೆ ಘಟನೆ ನಡೆದಾಗ ತೆಗೆದಿದ್ದ ಮೊಬೈಲ್ ವಿಡಿಯೋ ಹಾಗೂ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ಸಹ ಕಲೆಕ್ಟ್ ಮಾಡಿದೆ. ಈ ಟೀಂನ ಪರಿಶ್ರಮದಿಂದ ಗಲಭೆಯ ಕಿರಾತಕರು ಸಿಕ್ಕಿಬೀಳ್ತಿದ್ದಾರೆ.