ಕರ್ನಾಟಕ

karnataka

ETV Bharat / city

ಬೆಂಕಿ ಹಚ್ಚಿ, ಠಾಣೆಗೆ ಕಲ್ಲೆಸೆದು ಸಂಬಂಧಿಕರ ಮನೆ ಸೇರಿದ ಗಲಭೆಕೋರರು: ಇನ್ನೂ 60 ಆರೋಪಿಗಳಿಗಾಗಿ ಪೊಲೀಸರ ಬಲೆ!

ಸಿಸಿಬಿ ಹಾಗೂ ನಗರ ಪೊಲೀಸರು ಆರೋಪಿಗಳ ಪಟ್ಟಿ ಹಿಡಿದು ಹಗಲು ರಾತ್ರಿ ಎನ್ನದೆ ಗಲ್ಲಿ ಗಲ್ಲಿಗಳಲ್ಲಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳ ಮನೆ ಹತ್ತಿರ ಪೊಲೀಸರು ಹೋದರೆ‌ ಮನೆಯಲ್ಲಿಲ್ಲ, ಒಂದು ತಿಂಗಳ ಹಿಂದೆ ಕೆಲಸಕ್ಕೆಂದು ಹೋದವರು ಬಂದೇ ಇಲ್ಲ ಎಂದು ಕುಟುಂಬಸ್ಥರು ಸುಳ್ಳು ಹೇಳುತ್ತಿದ್ದಾರೆ. ಎಸ್ಕೇಪ್ ಆಗಿರುವ ಬಹುತೇಕ ಆರೋಪಿಗಳ ಕುಟುಂಬಸ್ಥರ ಮಾತು ಇದೇ ಆಗಿದೆ.

By

Published : Aug 21, 2020, 1:40 AM IST

ಬೆಂಗಳೂರು ಗಲಭೆ
ಬೆಂಗಳೂರು ಗಲಭೆ

ಬೆಂಗಳೂರು: ಡಿ‌ಜಿ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಸಂಬಂಧ ಆರೋಪಿಗಳ ಬೆನ್ನಟ್ಟಿರುವ ಪೊಲೀಸರು, ಸುಮಾರು 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ನೂರಾರು ಆರೋಪಿಗಳು ತಲೆಮರೆಸಿಕೊಂಡಿದ್ದು, ಎಲ್ಲರೂ ಮನೆ ಬಿಟ್ಟು ನಗರ ತೊರೆದಿದ್ದಾರೆ. ಬಂಧನ ಭೀತಿಯಿಂದ ನಗರದಲ್ಲಿ ಸುಮಾರು 60ಕ್ಕೂ ಹೆಚ್ಚು ಗಲಭೆಕೋರರು ಎಸ್ಕೇಪ್ ಆಗಿದ್ದಾರೆ.

ಸಿಸಿಬಿ ಹಾಗೂ ನಗರ ಪೊಲೀಸರು ಆರೋಪಿಗಳ ಪಟ್ಟಿ ಹಿಡಿದು ಹಗಲು ರಾತ್ರಿ ಎನ್ನದೆ ಗಲ್ಲಿ ಗಲ್ಲಿಗಳಲ್ಲಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳ ಮನೆ ಹತ್ತಿರ ಪೊಲೀಸರು ಹೋದರೆ‌ ಮನೆಯಲ್ಲಿಲ್ಲ, ಒಂದು ತಿಂಗಳ ಹಿಂದೆ ಕೆಲಸಕ್ಕೆಂದು ಹೋದವರು ಬಂದೇ ಇಲ್ಲ ಎಂದು ಕುಟುಂಬಸ್ಥರು ಸುಳ್ಳು ಹೇಳುತ್ತಿದ್ದಾರೆ. ಎಸ್ಕೇಪ್ ಆಗಿರುವ ಬಹುತೇಕ ಆರೋಪಿಗಳ ಕುಟುಂಬಸ್ಥರ ಮಾತು ಇದೇ ಆಗಿದೆ.

ಕೋಲಾರ, ಕೆಜಿಎಫ್​ನಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು:
ಕಳೆದ ಎರಡು ದಿನದ ಹಿಂದೆ ಪೊಲೀಸರು ಬಂಧಿಸುವ ಭೀತಿಯಿಂದ ಕೋಲಾರ, ಕೆಜಿಎಫ್, ಬಂಗಾರಪೇಟೆ, ಮಾಲೂರು ಸೇರಿದಂತೆ ಆಂಧ್ರಪ್ರದೇಶಗಳಲ್ಲಿರುವ ಸಂಬಂಧಿಕರ ಮನೆಗಳಲ್ಲಿ ಪುಂಡರು ತಲೆಮರೆಸಿಕೊಂಡಿದ್ದಾರೆ‌‌. ಕೆಎಸ್​ಆರ್​ಪಿ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಇಟ್ಟು, ಸ್ಟೇಷನ್‌ ಒಳಗೆ ಕಲ್ಲೆಸೆದು ಧ್ವಂಸ ಮಾಡಿದ 60 ಆರೋಪಿಗಳಿಗೆ ತಕ್ಕಶಾಸ್ತಿ ಕಲಿಸಲು ಪಣ ತೊಟ್ಟಿರುವ ಖಾಕಿ ಪಡೆಯ ಎರಡು ವಿಶೇಷ ತಂಡ, ಪುಂಡರ ಬೆನ್ನತ್ತಿ ಗುರುವಾರ ಕೋಲಾರಕ್ಕೆ‌ ಪ್ರಯಾಣ ಬೆಳೆಸಿದೆ.
ಹಳ್ಳಿಗಳಲ್ಲಿ ಪೊಲೀಸರಿಗೆ ಸಿಗಲ್ಲ ಎಂದು ಭಾವಿಸಿಕೊಂಡು ಸಂಬಂಧಿಕರ ಮನೆಯಲ್ಲಿ ಉಳಿದಿರುವ ಬಗ್ಗೆ ಮಾಹಿತಿ ಕಲೆಹಾಕಿರುವ ಪೊಲೀಸರು, ಆಂಧ್ರ ಪ್ರದೇಶಕ್ಕೆ ಹೋಗಿರು ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details