ಕರ್ನಾಟಕ

karnataka

ETV Bharat / city

ಟ್ರಾಫಿಕ್​ ಚಿಂತೆ ಬಿಡಿ: ಶೀಘ್ರದಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ! - train transport to bengaluru airport

ಸಿಲಿಕಾನ್ ಸಿಟಿ ಟ್ರಾಫಿಕ್ ಭೇದಿಸಿ ಅಂತಾರಾಷ್ಟ್ರೀಯ ವಿಮಾನ ತಲುಪುವಷ್ಟರಲ್ಲಿ ಪ್ರಯಾಣಿಕರು ಸುಸ್ತಾಗಿರುತ್ತಾರೆ. ಅಂತೆಯೇ ಕೇಂದ್ರ ಸರ್ಕಾರ, ವಿಮಾನ ನಿಲ್ದಾಣ ಬಳಿ ರೈಲ್ವೆ ಸ್ಟೇಷನ್ ಮಾಡುತ್ತಿದ್ದು, ಪ್ರಯಾಣಿಕರಿಗೆ ಸಂತಸ ತಂದಿದೆ.

ಬೆಂಗಳೂರಲ್ಲಿ ಮಾಸ್ಕ್ ಗಣೇಶ ಪ್ರತಿಷ್ಠಾಪನೆ
ಬೆಂಗಳೂರಲ್ಲಿ ಮಾಸ್ಕ್ ಗಣೇಶ ಪ್ರತಿಷ್ಠಾಪನೆ

By

Published : Aug 23, 2020, 2:11 AM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಹೋಗಲು ವಿವಿಧ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಮೆಟ್ರೋ ಮಾರ್ಗದ ಕಾಮಗಾರಿ ಸಹ ಸದ್ಯ ಬರದಿಂದ ಸಾಗುತ್ತಿದೆ. ಆದ್ರೆ ಇದೀಗ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮತ್ತೊಂದು ಉಡುಗೊರೆ ನೀಡಿದೆ.

ರೈಲ್ವೆ ನಿಲ್ದಾಣದ ಕಾಮಗಾರಿ
ಸಿಲಿಕಾನ್ ಸಿಟಿ ಅಂದ ತಕ್ಷಣ ನೆನಪಿಗೆ ಬರೋದು ಟ್ರಾಫಿಕ್ ಜಾಮ್. ಇನ್ನೂ ಬೆಂಗಳೂರಿನ ವಿವಿಧ ಕಡೆಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬೇಕಾದರೆ ಕನಿಷ್ಟ 2-3 ಗಂಟೆಗಳ ಕಾಲ ಪ್ರಯಾಣ ಮಾಡಬೇಕು. ಇದೀಗ ಆ ಸಮಸ್ಯೆಯನ್ನು ತಡೆಯಲು ವಿಮಾನ ನಿಲ್ದಾಣಕ್ಕೆ ಕೇಂದ್ರ ರೈಲೈ ಸ್ಟೇಷನ್ ಘೋಷಣೆ ಮಾಡಿದೆ. ಈಗಾಗಲೇ ವಿಮಾನ ನಿಲ್ದಾಣ ಸಮೀಪ ಸ್ಟೇಷನ್ ಕಾಮಗಾರಿ ಬರದಿಂದ ನಡೆಯುತ್ತಿದ್ದು, ಒಂದು ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ. ಇನ್ನೂ ಇದರ ಬಗ್ಗೆ ಕೇಂದ್ರ ರೈಲೈ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಮ್ಮ ಟ್ವೀಟರ್​​ನಲ್ಲಿ ಮಾಹಿತಿಯನ್ನು ವಿಡಿಯೋದೊಂದಿಗೆ ಹಂಚಿಕೊಂಡಿದ್ದಾರೆ.
ಶೀಘ್ರದಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ
ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಾದರೆ ಕನಿಷ್ಟ 500-1000 ರೂಪಾಯಿ ಟ್ಯಾಕ್ಸಿಗೆ ನೀಡಬೇಕಾಗಿತ್ತು. ಇದೀಗ ರೈಲು ಪ್ರಾರಂಭವಾದರೆ ಬೆಂಗಳೂರಿನಿಂದ ಕೇವಲ 30 ರೂ.ನಲ್ಲಿ ವಿಮಾನ ನಿಲ್ದಾಣ ಸೇರಿಕೊಳ್ಳಬಹುದು. ಟ್ರಾಫಿಕ್ ಕಿರಿಕಿರಿ ಇಲ್ಲದೆ ಕೇವಲ 30 ನಿಮಿಷದಲ್ಲಿ ಬೆಂಗಳೂರಿನಿಂದ ವಿಮಾನ ನಿಲ್ದಾಣದ ರೈಲ್ವೆ ಸ್ಟೇಷನ್ ತಲುಪಬಹುದು. ಬೆಂಗಳೂರು ಮತ್ತು ಕೋಲಾರಕ್ಕೆ ಸಂಚಾರಿಸುವ 6 ರೈಲುಗಳು ಈ ನಿಲ್ದಾಣದ ಮೂಲಕ ಹಾದು ಹೋಗಲಿವೆ. ಕೆಐಎಎಲ್ ರೈಲ್ವೆ ನಿಲ್ದಾಣ ಪ್ರಾರಂಭವಾದ ಮೇಲೆ ರೈಲ್ವೆ ಸ್ಟೇಷನ್​ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಬಿಎಂಟಿಸಿ ಬಸ್ ಸೇವೆ ಆರಂಭಿಸಲಿದೆ.
ರೈಲ್ವೆ ನಿಲ್ದಾಣದ ಕಾಮಗಾರಿ
ಒಂದು ಕಡೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗ ಜೊತೆಗೆ ರೈಲು ಪ್ರಾರಂಭವಾಗುವುದರಿಂದ ಪ್ರಯಾಣಿಕರಿಗೆ ಸಂತಸ ತಂದಿದೆ.

ABOUT THE AUTHOR

...view details