ಬೆಂಗಳೂರು: ದಟ್ಟ ಮಂಜು ಕವಿದಾಗ ವಿಮಾನಗಳ ಹಾರಾಟದಲ್ಲಿ ವ್ರತ್ಯಯವಾಗುತ್ತಿತ್ತು, ಈಗ ದಟ್ಟ ಮಂಜಿನಲ್ಲೂ ವಿಮಾನಗಳ ಹಾರಾಟ ನಡೆಸುವ ಸಾಮಾರ್ಥ್ಯವನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಡೆದುಕೊಂಡಿದೆ.
ಈ ಮೂಲಕ ಕೆಟಗರಿ lllಬಿ ಮೇಲ್ದರ್ಜೇಗೇರಿದ ದಕ್ಷಿಣ ಭಾರತದ ಏಕೈಕ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು(ಕೆಐಎಬಿ) ದಕ್ಷಿಣ ರನ್‍ವೇ ಈಗ ಕೆಟಗರಿ IIIಬಿ ಮೇಲ್ದರ್ಜೇಗೇರಿದೆ. ಡಿಸೆಂಬರ್ 31ರ ಬೆಳಗ್ಗೆ 5-30ರಿಂದ ಕೆಟಗರಿ lllಬಿ ನಿಯಮನುಸಾರ ವಿಮಾನಗಳ ಹಾರಾಟ ನಡೆದಿದೆ.
ಈ ಹಿಂದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಕವಿದಾಗ ಮತ್ತು ಹವಾಮಾನ ವೈಪರೀತ್ಯದಿಂದ ಮಂದ ಬೆಳಕು ಇದ್ದರೆ ರನ್ ವೇಯಲ್ಲಿ ವಿಮಾನಗಳ ಲ್ಯಾಂಡಿಗ್ ಮತ್ತು ಟೆಕ್ ಆಫ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಹವಾಮಾನ ವೈಪರೀತ್ಯ ಇದ್ದಾಗ ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಕ್ಕೆ ಕಳಿಸಲಾಗುತ್ತಿತ್ತು. ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹ ಕೆಟಗರಿ lllಬಿ ದರ್ಜೆಗೆ ಏರಿದೆ. ಇದರೊಂದಿಗೆ ಕೆಟಗರಿ lllಬಿ ದರ್ಜೆಗೆ ಏರಿದ ಭಾರತದ 6ನೇ ವಿಮಾನ ನಿಲ್ದಾಣವಾಗಿದೆ.
ಇದನ್ನೂ ಓದಿ:ಹೊಸ ವರ್ಷದ ಮೊದಲ ದಿನ ಪ್ರಧಾನಿಯಿಂದ ಲೈಟ್ ಹೌಸ್ ಪ್ರಾಜೆಕ್ಟ್ನ ಕಾಮಗಾರಿ ಉದ್ಘಾಟನೆ
ವಿಮಾನಗಳು ಇಳಿಯಲು ಉನ್ನತ ಮಟ್ಟದ ವ್ಯವಸ್ಥೆ(ಐಎಲ್ಎಸ್), ವಿಮಾನದ ರನ್‍ವೇ ಮತ್ತು ಸುತ್ತಲಿನ ಪ್ರದೇಶದಲ್ಲಿ ಏರ್ಫೀಲ್ಡ್ ಗ್ರೌಂಡ್ ಲೈಟ್(ಎಜಿಎಲ್), ಬೆಳಕಿನ ವ್ಯವಸ್ಥೆ, ಇದಲ್ಲದೆ ಟ್ರ್ಯಾನ್ಸ್ಮಿಸ್ಸೊ ಮೀಟರ್, ಸ್ವಯಂಚಾಲಿತ ಹವಾಮಾನ ನಿರೀಕ್ಷಣಾಲಯ(ಎಡಬ್ಲ್ಯುಒಎಸ್), ಮೇಲ್ಮೈ ಚಲನೆಯ ರಾಡಾರ್(ಎಸ್ಎಂಆರ್) ಈ ಸೌಲಭ್ಯಗಳು ಈಗ ವಿಮಾನ ನಿಲ್ದಾಣದಲ್ಲಿ ಇರಲಿವೆ.
ಈ ವ್ಯವಸ್ಥೆಯಲ್ಲಿ 50 ಮೀಟರ್ ರನ್ ವೇ ವಿಶುವಲ್ಸ್ ರೇಂಜ್ ಇದ್ದರೂ ವಿಮಾನ ಇಳಿಸಬಹುದು ಮತ್ತು 125 ಮೀಟರ್ ರನ್ ಲೇ ವಿಶುವಲ್ಸ್ ರೇಂಜ್ನಲ್ಲೂ ವಿಮಾನ ಹಾರಲಿದೆ. ಇದುವರೆಗೆ ವಿಮಾನ ಕೆಳಗಿಳಿಯಲು 550 ಮೀಟರ್ ಮತ್ತು ಮೇಲೆ ಹಾರಲು 300 ಮೀಟರ್ ವಿಶುವಲ್ ರೇಂಜ್‍ಗೆ ಪರವಾನಗಿ ಇತ್ತು.
ಮಂಜು ಕುರಿತ ವಿಶ್ಲೇಷಣಾ ಅಧ್ಯಯನ
ವಿಮಾನ ನಿಲ್ದಾಣದ ಪ್ರದೇಶದಲ್ಲಿ ಹವಾಮಾನ ಸ್ಥಿತಿಗಳನ್ನು ಕುರಿತು ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ(ಜೆಎನ್ಎಎಸ್ಆರ್)ದ ಸಹಭಾಗಿತ್ವದಲ್ಲಿ ಅಧ್ಯಯನ ನಡೆಸಲು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು 2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ವಿಮಾನ ನಿಲ್ದಾಣ ಪ್ರದೇಶದ ಮೇಲೆ ವಿಕಿರಣಾತ್ಮಕ ಮಂಜು ಕವಿಯುವುದನ್ನು ಮುಂಚಿತವಾಗಿ ತಿಳಿಸುವ ಸಂಬಂಧ ನಾಲ್ಕು ವರ್ಷಗಳ ಅಧ್ಯಯನ ನಡೆಸುತ್ತಿದೆ.